ಧಾರವಾಡ: ಹೆಬ್ಬಳ್ಳಿ ಜಿಲ್ಲಾ ಪಂಚಾಯತ ಸದಸ್ಯ ಯೊಗೇಶಗೌಡ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಅಧಿಕಾರಿಗಳು ಈಗ ಮತ್ತಿಬ್ಬರನ್ನು ವಶಕ್ಕೆ ಪಡೆದಿಕೊಂಡಿದ್ದಾರೆ.ಇದರಿಂದ ಧಾರವಾಡ ನಗರದ ಉಪನಗರ ಪೊಲೀಸ್ ಠಾಣೆಯ ಮುಂಭಾಗದಲ್ಲಿ ಬಿಗಿ ಭಧ್ರತೆಯನ್ನು ಕೈಗೊಳ್ಳಲಾಗುತ್ತಿದೆ.

ಠಾಣೆಯ ಮುಂಭಾಗದಲ್ಲಿ ಬ್ಯಾರಿಕೆಡ್‌ಗಳನ್ನು ಠಾಣೆಯ ಸಿಬ್ಬಂದಿಗಳು ಒಂದೊಂದಾಗಿ ಜೋಡಿಸುತ್ತಿದ್ದಾರೆ. ಈಗಾಗಲೇ ಸಿಬಿಐ ಅಧಿಕಾರಿಗಳು ಠಾಣೆಯ ಇನ್ಸ್ ಪೆಕ್ಟರ್ ಪ್ರಮೋದ್ ಯಲಿಗಾರ ಅವರಿಗೆ ಭದ್ರತೆಯನ್ನು ಕೈಗೊಳ್ಳಲು ಸೂಚನೆಯನ್ನು ನೀಡಿದ್ದಾರೆ. ಹೀಗಾಗಿ ಸಿಬಿಐ ಸೂಚನೆಯ ಮೇರೆಗೆ ಠಾಣೆ ಇನ್ಸ್ ಪೆಕ್ಟರ್ ರವರು ಠಾಣೆಯ ಮುಂಭಾಗದಲ್ಲಿ ಬ್ಯಾರಿಕೆಡ್ ಅಳವಡಿಸಲು ಸಿಬ್ಬಂದಿಗೆ ಸೂಚನೆ ನೀಡಿದ್ದಾರೆ. ಮುಂಭಾಗದಲ್ಲಿ ಡಬಲ್ ಲೈನ್ ಬ್ಯಾರಿಕೆಡ್ ಹಾಗೂ ಅಕ್ಕ ಪಕ್ಕದಲ್ಲಿ ಸಿಂಗಲ್ ಲೈನ್ ಬ್ಯಾರಿಕೆಡ್‌ಗಳನ್ನು ಸಿಬ್ಬಂದಿಗಳು ಈಗ ಅಳವಡಿಸಿದ್ದಾರೆ. ಸೋದರ ಮಾವ ಚಂದ್ರಶೇಖರ ಇಂಡಿ ಮತ್ತು ಧರ್ಮರಾಜ ಚಡಚಣ ಸಹಚರ ನಾಗಪ್ಪ ಇವರಿಬ್ಬರನ್ನು ವಶಕ್ಕೆ ಪಡೆದಿರುವ ವ್ಯಕ್ತಿಯನ್ನು ಸಿಬಿಐ ಅಧಿಕಾರಿಗಳು ಮೊದಲು ಉಪನಗ ಠಾಣೆಗೆ ಕರೆದುಕೊಂಡು ಬರುವ ಸಾಧ್ಯತೆ ಹೆಚ್ಚಾಗಿ ಕಂಡು ಬರುತ್ತಿದೆ. ಇನ್ನೂ ಸಿಬಿಐ ಅಧಿಕಾರಿಗಳು ಉಪನಗರ ಠಾಣೆಗೆ ಬರಲಿದ್ದು ಇದಕ್ಕಾಗಿ ಇನ್ಸ್ಪೆಕ್ಟರ್ ಪ್ರಮೋದ್ ಯಲಿಗಾರ ಮತ್ತು ಸಿಬ್ಬಂದಿ ಭದ್ರತೆ ಕೈಗೊಂಡಿದ್ದಾರೆ.