ಕೋಳಿವಾಡ –
ಶಾರ್ಟ್ ಸರ್ಕ್ಯೂಟ್ ನಿಂದಾಗಿ ಎರಡು ಅಂಗಡಿಗಳು ಬೆಂಕಿಗೆ ಆಹುತಿಯಾದ ಘಟನೆ ಧಾರವಾಡ ಜಿಲ್ಲೆಯ ಕುಂದಗೋಳ ತಾಲ್ಲೂಕಿನ ಕೋಳಿವಾಡ ದಲ್ಲಿ ನಡೆ ದಿದೆ.

ಕೋಳಿವಾಡ ಗ್ರಾಮದಲ್ಲಿನ ನಿವಾಸಿ ಶಂಬುಲಿಂಗ ಜಂತ್ಲಿ ಎಂಬುವರಿಗೆ ಸೇರಿ ಕಿರಾಣಿ ಮತ್ತು ಆಗ್ರೋ ಕೇಂದ್ರದ ಎರಡು ಅಂಗಡಿಗಳೇ ಬೆಂಕಿಗೆ ಆಹುತಿ ಯಾಗಿವೆ. ಬೆಳ್ಳಂ ಬೆಳಿಗ್ಗೆ ಶಾರ್ಟ್ ಸರ್ಕ್ಯೂಟ್ ನಿಂ ದಾಗಿ ಕಾಣಿಸಿಕೊಂಡ ಈ ಒಂದು ಅವಘಡದಿಂದಾಗಿ ನೋಡು ನೋಡುತ್ತಲೆ ಬೆಂಕಿಯ ಕೆನ್ನಾಲಿಗೆ ಇಡೀ ಅಂಗಡಿಯನ್ನು ಸುಟ್ಟು ಕರಕಲಾಯಿತು.

ಶಾರ್ಟ್ ಸರ್ಕ್ಯೂಟ್ ನಿಂದ ಹೊತ್ತಿಕೊಂಡ ಬೆಂಕಿ ಅವಗಡ ಎರಡು ಅಂಗಡಿಗಳನ್ನು ಸುಟ್ಟು ಕರಕಲಾ ಯಿತು.ಬೆಂಕಿ ಅವಗಡದಲ್ಲಿ ಸುಮಾರು 40 ಲಕ್ಷದ ಕಿರಾಣಿ ಸಾಮಗ್ರಿ ಮತ್ತು ಆಗ್ರೋ ಸಂಪೂರ್ಣ ಸುಟ್ಟು ಕರಕಲಾಗಿವೆ.

ಶಾರ್ಟ್ ಸರ್ಕ್ಯೂಟ್ ನಲ್ಲಿ ಸುಟ್ಟು ಕರಕಲಾಗಿವೆ ಅಪಾರ ಪ್ರಮಾಣದಲ್ಲಿನ ಕಿರಾಣಿ ದಿನಸಿಗಳು ಮತ್ತು ಅಗ್ರೋ ಕೇಂದ್ರಗಳು. ಪೂರದುರೇಶ್ವರ ಹಾಗೂ ವೀರಭದ್ರೇಶ್ವರ ಆಗ್ರೋ ಕೇಂದ್ರ ಸಂಪೂರ್ಣ ಸುಟ್ಟು ಕರಕಲಾಗಿವೆ.ಕೋಳಿವಾಡ ಗ್ರಾಮದ ನಿವಾಸಿ ಶಂಬುಲಿಂಗ ಜಂತ್ಲಿ ಎಂಬುವರಿಗೆ ಎರಡು ಅಂಗಡಿಗಳು ಸೇರಿದ್ದು.

ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಕೋಳಿವಾಡ ಗ್ರಾಮಸ್ಥ ರು ಸೇರಿಕೊಂಡು ಬೆಂಕಿಯನ್ನು ನಂದಿಸಿದರು. ನಂತ ರ ಅಗ್ನಿ ಶಾಮಕ ದಳದವರು ಕೂಡಾ ಸ್ಥಳಕ್ಕೆ ಆಗಮಿ ಸಿ ಪರಿಶೀಲನೆ ಮಾಡಿದರು.ಸಧ್ಯ ಈ ಕುರಿತಂತೆ ದೂರನ್ನು ದಾಖಲು ಮಾಡಿಕೊಂಡಿದ್ದು ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ.
