ಮಧ್ಯಪ್ರದೇಶ –
ಶಿಕ್ಷಕರು ಮಕ್ಕಳಿಗೆ ದಾರಿ ತೋರುವ ಗುರುಗಳು ಮಕ್ಕಳು ತಪ್ಪು ಮಾಡಿದಾಗ ತಿದ್ದಿ ಬುದ್ದಿ ಹೇಳುವ ಶಿಕ್ಷಕರು ಮಕ್ಕಳ ಎದುರು ಹೊಡೆದಾಡಿದ ಘಟನೆ ಮಧ್ಯಪ್ರದೇಶ ದಲ್ಲಿ ನಡೆದಿದೆ ಹೌದು ವಿದ್ಯಾರ್ಥಿ ಗಳ ಬದುಕಿನಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ ಶಿಕ್ಷಕರು ಆದರ ಇಲ್ಲೊಂದು ಕಡೆ ಶಿಕ್ಷಕರೇ ಖರ್ಚಿಗಾಗಿ ಕಿತ್ತಾಡಿದ್ದಾರೆ.

ಮಧ್ಯಪ್ರದೇಶ ಸಾತ್ನಾ ಜಿಲ್ಲೆಯ ಚಿತ್ರಕೂಟದ ಶಾಲೆಯೊಂದ ರಲ್ಲಿ ಈ ಅವಮಾನಕಾರಿ ಘಟನೆ ನಡೆದಿದೆ.ಒಂದು ಕುರ್ಚಿ ಗಾಗಿ ಇಬ್ಬರು ಮಹಿಳಾ ಶಿಕ್ಷಕಿಯರು ಕಿತ್ತಾಡಿದ್ದಾರೆ.ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.ಮಕ್ಕಳಿಗೆ ಬುದ್ದಿ ಹೇಳಬೇಕಾದ ಶಿಕ್ಷಕರೇ ಹೀಗೆ ಮಕ್ಕಳಿಗಿಂತ ಕಡೆಯಾಗಿ ಒಂದು ಕುರ್ಚಿಗಾಗಿ ಕಿತ್ತಾಡಿದ್ದಕ್ಕೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ.ಇತ್ತ ಇದನ್ನು ಇಲಾಖೆಯ ಅಧಿಕಾರಿಗಳು ಇದನ್ನು ಗಂಭೀರವಾಗಿ ಪರಿಗಣಿಸಿ ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ