ಧಾರವಾಡ –
ಧಾರವಾಡ ಜಿಲ್ಲಾ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸಮ್ಮಿಳನ, ಯುಗಾದಿ ಕವಿಘೋ ಷ್ಠಿ ಹಾಗೂ ದತ್ತಿನಿಧಿ ಸ್ಥಾಪನೆ ಕಾರ್ಯಕ್ರಮವನ್ನು ಏಪ್ರೀಲ್ 18 ರಂದು ಧಾರವಾಡದಲ್ಲಿ ಹಮ್ಮಿಕೊಳ್ಳ ಲಾಗಿದೆ ಎಂದು ಸಂಘದ ಜಿಲ್ಲಾ ಮುಖಂಡ ಅಕ್ಬರಲಿ ಸೋಲಾಪೂರ ಹೇಳಿದರು.

ಧಾರವಾಡದಲ್ಲಿ ಏಪ್ರೀಲ್ 18 ರಂದು ರವಿವಾರ ಬೆಳಿಗ್ಗೆ 10 30 ಕ್ಕೆ ಗಂಟೆಗೆ ಧಾರವಾಡದ ಮರಾಠ ಮಂಡಳದ ಸಭಾಭವನದಲ್ಲಿ (ಭಾರತ ಹೈಸ್ಕೂಲ್ ಆವರಣದ) ಕರ್ನಾಟಕ ಸರ್ಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘವು ಧಾರವಾಡ ಜಿಲ್ಲೆಯ ಶಿಕ್ಷಕ ನೇತಾರರ ಸಮ್ಮಿಳನ ಮತ್ತು ಜಿಲ್ಲೆಯ ಶಿಕ್ಷಕ ಸಾಹಿತಿಗಳಿಂದ ಜಿಲ್ಲಾ ಮಟ್ಟದ ಯುಗಾದಿ ಕವಿಘೋಷ್ಠಿಯನ್ನು ಏರ್ಪಡಿಸಲಾಗಿದೆ ಎಂದರು.

ಇನ್ನೂ ಈ ಕಾರ್ಯಕ್ರಮದಲ್ಲಿ ಧಾರವಾಡದ ಜರ್ನ ಲಿಸ್ಟ ಗಿಲ್ಡ್ ಗೆ ಅಕ್ಷರತಾಯಿ ದತ್ತಿದಾನಿ ಲೂಸಿ ಸಾಲ್ಡಾ ನ ಸೇವಾ ಸಂಸ್ಥೆಯ ವತಿಯಿಂದ ಪ್ರತಿವರ್ಷ ಪತ್ರಕ ರ್ತರು, ಪತ್ರಿಕೆ ಮಾದ್ಯಮದ ಎಲ್ಲಾ ಹಂತದ ಫೋಟೋಗ್ರಾಫರ್ ಸೇರಿ ಹಳ್ಳಿಗಾಡಿನಲ್ಲಿ ವರದಿಗಾ ರರಾಗಿ ಸೇವೆ ಸಲ್ಲಿಸುತ್ತಿರುವವರಿಗೆ ಸತ್ಕರಿಸಿ ಗೌರವಿ ಸಲು, ದತ್ತಿನಿಧಿ ಸ್ಥಾಪಿಸುವ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಸಂಘದ ಧಾರವಾಡ ಜಿಲ್ಲಾ ಅಧ್ಯಕ್ಷ ಅಕ್ಬರಅಲಿ ಸೋಲಾಪೂರ ಹೇಳಿದ ರು.

ಇನ್ನೂ ಜಿಲ್ಲಾ ಪ್ರದಾನ ಕಾರ್ಯದರ್ಶಿ ರಾಜೀವಸಿಂಗ ಹಲವಾಯಿ ಮಾತನಾಡಿ ಉಪ್ಪಿನಬೆಟಗೇರಿಯ ಶ್ರೀ ಗುರು ಕುಮಾರ ವಿರುಪಾಕ್ಷಪ್ಪ ಮಹಾಸ್ವಾಮಿಗಳ ದಿವ್ಯ ಸಾನಿದ್ಯದಲ್ಲಿ ಜರುಗುವ ಕಾರ್ಯಕ್ರಮವನ್ನು ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಕರ್ನಾಟಕ ಸರಕಾರದ ಭಾರಿ ಮತ್ತು ಬ್ರಹತ್ ಕೈಗಾರಿ ಕಾ ಸಚಿವರಾದ ಜಗದೀಶ್ ಶೆಟ್ಟರ್, ವಿಧಾನ ಪರಿಷ ತ್ ಸದಸ್ಯರಾದ ಎಸ್ ವಿ ಸಂಕನೂರ ರಾಜ್ಯ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷರಾದ ಅಶೋಕ ಸಜ್ಜನ, ಗೌರವಾಧ್ಯಕ್ಷರು ಎಲ್.ಐ. ಲಕ್ಕಮ್ಮನವರ ಕಾರ್ಯಾಧ್ಯಕ್ಷರು ಎಸ್. ಎಫ್. ಪಾಟೀಲ ರಾಜ್ಯ ಸರಕಾರಿ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷರು ಗುರು ತಿಗಡಿ ಅಕ್ಷರತಾಯಿ ಲೂಸಿ ಸಾಲ್ಡಾನ ಕರ್ನಾಟಕ ವಿಶ್ವವಿದ್ಯಾಲಯದ ಪ್ರಾಧ್ಯಾಪ ಕರು ಡಾ, ಆರ್ ಆರ್ ಬಿರಾದಾರ, ಜರ್ನಲಿಸ್ಟ ಗಿಲ್ಡ್ ನ ಅಧ್ಯಕ್ಷರು ಬಸವರಾಜ ಹಿರೇಮಠ, ಶಿವಾಜಿ ಮಹಾರಾಜ ಪದವಿ ಕಾಲೇಜಿನ ಪ್ರಾಂಶುಪಾಲರಾದ ಎಂ ಎಸ್ ಗಾಣಿಗೇರ, ಡಾ, ರಾಮೂ ಮೂಲಗಿ, ಅಕ್ಷರತಾಯಿ ಲೂಸಿ ಸಾಲ್ಡಾನ ಸೇವಾ ಸಂಸ್ಥೆಯ ಗೌರವಾಧ್ಯಕ್ಷರು ಭೀಮಪ್ಪ ಕಾಸಾಯಿ, ಡಾ, ಆಶಾ ಮುನವಳ್ಳಿ ಬಾಬಾಜಾನ ಮುಲ್ಲಾ, ವಾಯ್ ಬಿ ಕಡಕೋಳ, ಕೆ ಬಿ ಕುರಹಟ್ಟಿ ಸೇರಿದಂತೆ ವಿವಿಧ ಗಣ್ಯರು ಹಾಜರಿರುವರೆಂದು ರಾಜ್ಯ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಉಪ್ಪಿನ ಮತ್ತು ಎಲ್ ಐ ಲಕ್ಕಮ್ಮನವರ ತಿಳಿಸಿದರು

ಇನ್ನೂ ಈ ಒಂದು ಪ್ರೇಸ್ ಮೀಟ್ ನಲ್ಲಿ ರುದ್ರೇಶ ಕುರ್ಲಿ, ಜಿಲ್ಲಾ ಪ್ರ. ಕಾರ್ಯದರ್ಶಿ ರಾಜೀವಸಿಂಗ ಹಲವಾಯಿ, ಕೆ.ಎಂ. ಮುನವಳ್ಳಿ ಎಸ್.ಎಸ್. ಧನಿಗೊಂಡ, ಎಸ್.ಎ. ಜಾಧವ ಮುಂತಾದವರು ಮಾಧ್ಯಮ ಗೋಷ್ಠಿಯಲ್ಲಿ ಹಾಜರಿದ್ದರು