ತೆಲಂಗಾಣ –
ಪೊಲೀಸ್ ಪೇದೆಯೊಬ್ಬರ ಕಿರುಕುಳದಿಂದಾಗಿ ಯುವತಿ ಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಘಟನೆ ತೆಲಂಗಾಣದ ಹನುಮನಕೊಂಡ ಜಿಲ್ಲೆಯ ನಾಯನಪೇಟೆ ಮಂಡಲದ ತಾಹರಾಪುರದಲ್ಲಿ ನಡೆದಿದೆ.ಹೌದು ತನ್ನನ್ನು ಮದುವೆ ಮಾಡಿಕೊಳ್ಳುವಂತೆ ಮೇಲಿಂದ ಮೇಲೆ ಪೊಲೀಸ್ ಪೇದೆ ಯುವತಿಗೆ ಕಿರುಕುಳವನ್ನು ನೀಡುತ್ತಿದ್ದನಂತೆ ಹೀಗಾಗಿ ಇದರಿಂದಾಗಿ ಬೇಸತ್ತ ಯುವತಿಯೋರ್ವಳು ಆತ್ಮಹತ್ಯೆಗೆ ಶರಣಾಗಿದ್ದು ಕಾನ್ಸ್‌ಟೇಬಲ್ ನೀಡುತ್ತಿದ್ದ ಮಾನಸಿಕ ಕಿರುಕುಳ ತಾಳಲಾರದೆ ಯುವತಿ ಆತ್ಮಹತ್ಯೆ ಮಾಡಿಕೊಂ ಡಿದ್ದು ಸಂಗೀತಾ(30) ಎಂದು ಗುರುತಿಸಲಾಗಿದೆ.

ತಾಹರಾಪುರದ ಸಂಗೀತಾ ಐಸಿಡಿಎಸ್ ಮೇಲ್ವಿಚಾರಕಿ ಯಾಗಿ ಕಾರ್ಯನಿರ್ವಹಿಸುತ್ತಿದ್ದರು.ಕೆಲ ತಿಂಗಳ ಹಿಂದೆ ಹನುಮಕೊಂಡ ಪೊಲೀಸ್ ಠಾಣೆಯ ಕಾನ್ಸ್‌ಟೇಬಲ್ ಸರ್ವೆ ಯಾದವ್ ಎಂಬಾತನ ಪರಿಚಯವಾಗಿತ್ತು.ಇದಾದ ಬಳಿಕ ತನ್ನೊಂದಿಗೆ ಮದುವೆ ಮಾಡಿಕೊಳ್ಳುವಂತೆ ಆತ ಫೋನ್ ಮಾಡಿ ಕಿರುಕುಳ ನೀಡಲು ಶುರು ಮಾಡಿದ್ದಾನೆ.

ಇದರಿಂದ ಮನನೊಂದ ಯುವತಿ ಕ್ರಿಮಿನಾಶಕ ಸೇವನೆ ಮಾಡಿದ್ದಾಳೆ. ಇದರ ಬೆನ್ನಲ್ಲೇ ತನ್ನ ತಂಗಿಗೆ ಮಾಹಿತಿ ನೀಡಿದ್ದಾಳೆ.ಕುಟುಂಬಸ್ಥರಿಗೆ ವಿಚಾರ ಗೊತ್ತಾಗುತ್ತಿದ್ದಂತೆ ಆಸ್ಪತ್ರೆಗೆ ಸಾಗಿಸಲು ಮುಂದಾದರೂ ಪ್ರಯೋಜನವಾ ಗಲಿಲ್ಲ.ಘಟನೆಗೆ ಸಂಬಂಧಿಸಿದಂತೆ ಯುವತಿಯ ತಂದೆ ವೀರಯ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದು ಪೊಲೀಸರು ಮುಂದಿನ ಕ್ರಮವನ್ನು ಕೈಗೊಂಡಿ ದ್ದಾರೆ.