ಬೆಂಗಳೂರು –
ಖಾಸಗಿ ಅನುದಾನರಹಿತ ಶಾಲೆಗಳ ಶಿಕ್ಷಕರಿಗೂ ರಾಜ್ಯದ ಶಿಕ್ಷಣ ಸಚಿವರು ವಿಧಾನ ಪರಿಷತ್ ಸರ್ವ ಸದಸ್ಯರು ಧ್ವನಿ ಎತ್ತಿದ್ದಾರೆ. ಹೌದು ಶಿಕ್ಷಕರು ಶಿಕ್ಷಕೇ ತರರು ತೀವ್ರ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿ ದ್ದು, ಈ ಸಮುದಾಯಕ್ಕೆ ಸರ್ಕಾರದಿಂದ ಆರ್ಥಿಕ ಪ್ಯಾಕೇಜ್ ಘೋಷಿಸಬೇಕೆಂದು ಸಚಿವ ಸುರೇಶ್ ಕುಮಾರ್ ನೇತ್ರತ್ವದಲ್ಲಿ ಮುಖ್ಯಮಂತ್ರಿಗಳನ್ನು ಮನವಿ ಮಾಡಿದ್ದಾರೆ.
ಶಿಕ್ಷಕರ ಪದವೀಧರ ಕ್ಷೇತ್ರಗಳ ಶಾಸಕರ ನಿಯೋಗ ದೊಂದಿಗೆ ಇಂದು ಬೆಳಗ್ಗೆ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ ಸಚಿವರು ಈ ಸಮುದಾಯದ ಸ್ಥಿತಿ ಶೋಚನೀಯವಾಗಿದ್ದು ದೈನಂದಿನ ಜೀವನ ನಿರ್ವ ಹಣೆಯೂ ದುಸ್ತರವಾಗಿದೆ. ಜೀವನ ನಡೆಸಲು ಈ ಸಮುದಾಯದ ಹಲವಾರು ಜನ ಹಣ್ಣು ತರಕಾರಿ ಮಾರುತ್ತಿದ್ದಾರೆ ಕೂಲಿ ಕೆಲಸ ಮಾಡಿದ್ದಾರೆ. ನಮ್ಮ ಮಕ್ಕಳ ಹಿತ ಕಾಯುವ ಸಮುದಾಯವನ್ನು ನಾವು ಘನತೆಯಿಂದ ನಡೆಸಿಕೊಳ್ಳುವುದು ಕರ್ತವ್ಯವಾಗಿ ದ್ದು ಸರ್ಕಾರದ ಆರ್ಥಿಕ ಪ್ಯಾಕೇಜ್ ಈ ಸಮುದಾ ಯಕ್ಕೆ ಆತ್ಮ ವಿಶ್ವಾಸ ತುಂಬಲು ಸಹಕಾರಿಯಾಗಲಿದೆ ಎಂದರು.ಸಚಿವರೊಂದಿಗೆ ವಿಧಾನ ಪರಿಷತ್ತಿನ ಸದ ಸ್ಯರಾದ ಡಾ.ವೈ.ಎ.ನಾರಾಯಣ ಸ್ವಾಮಿ, ಪುಟ್ಟಣ್ಣ, ಅರುಣ ಶಹಾಪುರ, ಶಶೀಲ್ ನಮೋಶಿ, ಎಸ್ ವಿ ಸಂಕನೂರ,ಹನುಮಂತ ನಿರಾಣಿ, ಹಾಗೂ ಚಿದಾನಂ ದ ಗೌಡ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಇನ್ನೂ ಆ ಶಿಕ್ಷಕರ ಪರ ಧ್ವನಿ ಎತ್ತಿದ ಈ ಒಂದು ನಿರ್ಧಾರವನ್ನು ರಾಜ್ಯ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ದ ಅಧ್ಯಕ್ಷ ಅಶೋಕ ಸಜ್ಜನ ನೇತೃತ್ವ ದಲ್ಲಿನ ಸಂಘ ವಿಧಾನ ಪರಿಷತ್ ಸರ್ವ ಸದಸ್ಯರನ್ನು ಶಿಕ್ಷಣ ಸಚಿವರಿಗೆ ಅಭಿವಂದಿಸಿದ್ದಾರೆ ಕೂಡಲೇ ಪ್ಯಾಕೇಜ್ ಬಿಡುಗಡೆ ಮಾಡುವಂತೆ ಆಗ್ರಹಿಸಿದರು