ಬೆಳಗಾವಿ –
ಬೆಳಗಾವಿಯಲ್ಲಿ ನಿನ್ನೇ ನಡೆದ ಜನಸೇವಕ ಸಮಾರೋಪ ಸಮಾರಂಭದ ಕಾರ್ಯಕ್ರಮ ಕುರಿತು ದೂರು ನೀಡಲಾಗಿದೆ.ಜನೆವರಿ 17 ರಂದು ಜಿಲ್ಲಾ ಕ್ರೀಡಾಂಗಣದಲ್ಲಿ 1 ಲಕ್ಷಕ್ಕೂ ಅಧಿಕ ಜನ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು ಇಲ್ಲಿ ಕೋವಿಡ್ 19 ನಿಯಮ ಉಲ್ಲಂಘನೆ ಮಾಡಲಾಗಿದೆ ಎಂದು ಆರೋಪಿಸಿ ದೂರು ನೀಡಲಾಗಿದೆ.
ಕೇಂದ್ರ ಗೃಹ ಸಚಿವ ಅಮಿತ್ ಷಾ, ಸಿಎಂ ಯಡಿಯೂರಪ್ಪ ಹಾಗೂ ಆಯೋಜಕರ ಮೇಲೆ FIR ದಾಖಲಿಸುವಂತೆ ದೂರನ್ನು ನೀಡಲಾಗಿದೆ.
ಆರ್ ಟಿ ಐ ಕಾರ್ಯಕರ್ತ ಭೀಮಪ್ಪ ಗಡಾದ್ ರಿಂದ ಮುಖ್ಯ ಕಾರ್ಯದರ್ಶಿಗೆ ದೂರು ನೀಡಲಾಗಿದೆ.
ಜನಸೇವಕ ಸಮಾರಂಭದಲ್ಲಿ ಕೋವಿಡ್ 19 ನಿಯಮಗಳನ್ನು ಉಲ್ಲಂಘನೆ ಮಾಡಲಾಗಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆ 2005ರ ಅಡಿ ಕೇಸ್ ದಾಖಲಿಸುವಂತೆ ಆಗ್ರಹವನ್ನು ಮಾಡಲಾಗಿದೆ.
65 ವರ್ಷ ಮೇಲ್ಪಟ್ಟ 10 ಸಾವಿರ ಜನ ಭಾಗಿಯಾಗಿದ್ದಾರೆ.ಅಲ್ಲದೇ ‘FIR’ ದಾಖಲಿಸೇ ಇದ್ರೆ ಹೈಕೋರ್ಟ್ ನಲ್ಲಿ ಪಿಐಎಲ್ ಸಲ್ಲಿಸುವುದಾಗಿ ಎಚ್ಚರಿಕೆಯನ್ನು ಭೀಮಪ್ಪ ಗಡಾದ ಹೇಳಿದ್ದಾರೆ. ಅಲ್ಲದೆ ಈ ಕುರಿತು ಹಲವರಿಗೆ ದೂರಿನ ಪ್ರತಿಗಳನ್ನು ಸಲ್ಲಿಸಿದ್ದಾರೆ.