ಹುಬ್ಬಳ್ಳಿ –
ಸಂತೋಷ ಲಾಡ್ ಗೆ ಗುಮ್ಮಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ – ವಾರದಲ್ಲಿ ಎರಡು ದಿನ ನನಗೆ ಮೂರು ದಿನ ಪ್ರಧಾನಿಯವರಿಗೆ ಬೈದರೆ ಸಚಿವ ಸ್ಥಾನ ಉಳಿಯುತ್ತದೆ ಎಂದ ಕೇಂದ್ರ ಸಚಿವರು
ವಾರದಲ್ಲಿ ಎರಡು ದಿನಗಳಲ್ಲಿ ನನಗೆ ಮೂರು ದಿನಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಯವ ರನ್ನು ಬೈದರೆ ಅವರಿಗೆ ಸಚಿವ ಸ್ಥಾನ ಉಳಿಯು ತ್ತದೆ ಕಾಂಗ್ರೇಸ್ ಪಕ್ಷದವರು ಅವರಿಗೆ ಟಾರ್ಗೆಟ್ ಕೊಟ್ಟಿದ್ದಾರೆ ಇದನ್ನು ಕಾಂಗ್ರೇಸ್ ಪಕ್ಷದವರು ನನಗೆ ಹೇಳಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು ಮೋದಿ, ಜೋಶಿ ಬೈಯ್ಯಬೇಕು ಅಂತಾ ಟಾರ್ಗೆಟ್ ಕೊಟ್ಟಿದ್ದಾರೆ ಇದನ್ನು ಅವರು ಮಾಡದಿದ್ದರೆ ಲಾಡ್ ಮಂತ್ರಿಗಿರಿ ಹೋಗುತ್ತೆ ಅಂತಾ ಕಾಂಗ್ರೆಸ್‌ನವರೇ ನನಗೆ ಹೇಳಿದ್ದಾರೆ ಎಂದರು.
ಇವರ ಮಾತಿನಲ್ಲಿ ಯಾವುದೇ ಗಂಭೀರತೆ ಇಲ್ಲ ದೇವಸ್ಥಾನದ ಹಣವನ್ನು ರಾಜ್ಯ ಸರ್ಕಾರ ಲೂಟಿ ಹೊಡೆಯುತ್ತಿದ್ದು ಹಿಂದೂಗಳ ಭಾವನೆಗೆ ಧಕ್ಕೆ ತಂದಿದ್ದಾರೆ.ವಿಧಾನ ಸಭೆ,ವಿಧಾನ ಪರಿಷತ್‌ನಲ್ಲಿ ಶಕ್ತಿಮೀರಿ ಹೋರಾಟ ಮಾಡುತ್ತೇವೆ.ಲಾಡ್ ಆರೋಪದಲ್ಲಿ ಯಾವುದಕ್ಕಾದರೂ ಗಂಭೀರತೆ ಇದೆಯಾ ಎಂದು ಪ್ರಶ್ನೆ ಮಾಡಿದರು. ಸರ್ದಾರ್ ಪಟೇಲರು ಮೊದಲು ಆರ್‌ಎಸ್‌ಎಸ್ ಬ್ಯಾನ್ ಮಾಡಿದ್ರು ಸತ್ಯ ಗೊತ್ತಾದಾಗ ಬ್ಯಾನ್ ಹಿಂಪ ಡೆದ್ರು ಎಂದರು.ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಐತಿಹಾಸಿಕ ಗೆಲುವು ದಾಖಲಿ ಸುವ ವಿಶ್ವಾಸವಿದೆ.
ಅಭಿವೃದ್ಧಿ ಆಧಾರಿತ ಮತದಾನ,ರಾಜಕೀಯ ಆರಂಭವಾಗಿರುವುದು ನಮ್ಮ ಕಾಲದಲ್ಲಿ ಇನ್ನೂ ರಾಜ್ಯ ಸರ್ಕಾರ ಏಳು ತಿಂಗಳಲ್ಲಿ 1 ಲಕ್ಷ 90 ಸಾವಿರ ಕೋಟಿ ರೂಪಾಯಿ ಸಾಲ ಮಾಡಿದ್ದು ದುರ್ದೈವವಾಗಿದೆ.ರಾಜ್ಯವನ್ನು ಅಧೋಗತಿಗೆ ತೆಗೆದುಕೊಂಡು ಹೋಗಿದ್ದಾರೆ.ದೇವಸ್ಥಾನದ ಹುಂಡಿಗೆ ಕಣ್ಣ ಹಾಕುವ ಪಾಪದ ಕೆಲಸವನ್ನು ಸಿದ್ದರಾಮಯ್ಯ ತಂಡ ಮಾಡಿದೆ.ತುಮಕೂರು ಟಿಕೆಟ್ ವಿಚಾರದಲ್ಲಿ ನನ್ನ ಜೊತೆ ಸೋಮಣ್ಣ ಮತ್ತು ಮಾಧುಸ್ವಾಮಿ ಮಾತಾಡಿದ್ದಾರೆ.ಪಕ್ಷ ಯಾರಿಗೇ ಟಿಕೆಟ್ ಕೊಟ್ಟರೂ ವಿಶ್ವಾಸದಿಂದ ಕೆಲಸ ಮಾಡುವುದಾಗಿ ಹೇಳಿದ್ದಾರೆ.
ರಾಷ್ಟ್ರೀಯ ನಾಯಕರು ಮಾಡುವ ತೀರ್ಮಾನಕ್ಕೆ ಎಲ್ಲರೂ ಹೊಂದಿಕೊಂಡು ಹೋಗುತ್ತಾರೆ.ಜನ ಬಹಳ ಜಾನರಿದ್ದಾರೆ,ಯಾವ ಚಿನ್ಹೆ ಯಾರದ್ದು ಅನ್ನೋದು ಜನರಿಗೆ ಗೊತ್ತಿದೆ.ಯಾರು ಯಾರ ಜೊತೆಗಿದ್ದಾರೆ, ಯಾರು ಬೆನ್ನಲ್ಲಿ ಚೂರಿ ಹಾಕ್ತಾರೆ ಅಂತಾ ಜನರಿಗೆ ಗೊತ್ತಿದೆ ಎಂದರು.
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ…..