ಹುಬ್ಬಳ್ಳಿ –
ಹುಬ್ಬಳ್ಳಿಯ ಈದ್ಗಾ ಮೈದಾನ ದಲ್ಲಿ ಪ್ರತಿಷ್ಠಾಪನೆ ಗೊಂಡ ಗಣೇಶೋತ್ಸವ ದ ಮಹಾ ಮಂಗಳಾರತಿ ಕಾರ್ಯಕ್ರಮ ದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಮಾಜಿ ಮುಖ್ಯ ಮಂತ್ರಿ ಜಗದೀಶ್ ಶೆಟ್ಟರ್,ಸಚಿವರಾದ ಹಾಲಪ್ಪ ಆಚಾರ್ಯ,ಶಂಕರ ಪಾಟೀಲ್ ಮುನೇನಕೊಪ್ಪ,ಶಾಸಕ ರಾದ ಅರವಿಂದ ಬೆಲ್ಲದ,ಸಿ ಎಮ್ ನಿಂಬಣ್ಣವರ ಸೇರಿದಂತೆ ಹಲವರು ಮಹಾ ಮಂಗಳಾರತಿ ಕಾರ್ಯಕ್ರಮ ದಲ್ಲಿ ಪಾಲ್ಗೊಂಡು ಪೂಜೆ ನೆರವೇರಿಸಿದರು.
ಇನ್ನೂ ಇದೇ ವೇಳೆ ಪೂಜೆಯ ನಂತರ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮಾತನಾಡಿ ಸುಧೀರ್ಘ ಹೋರಾಟದ ನಂತರ ಇಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಲಾ ಗಿದೆ.ಇವತ್ತಿಗೆ ಮೂರು ದಶಕಗಳ ಹಿಂದೆ ರಾಷ್ಟ್ರಧ್ಚಜ ಹಾರಿಸಲು ನಡೆದಿದ್ದ ಹೋರಾಟದಲ್ಲಿ ಆರು ಮಂದಿಯ ಬಲಿದಾನವಾಗಿತ್ತು.ಅಂತಹ ಈ ಸ್ಥಳದಲ್ಲಿ ಶಾಂತಿ ಮತ್ತು ಸೌಹಾರ್ದದಿಂದ ಅತ್ಯಂತ ಸಂಭ್ರಮದಿಂದ ಗಣೇಶೋತ್ಸವ ಆಚರಿಸೋಣ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.
ಗಣೇಶೋತ್ಸವಕ್ಕೆ ಅವಕಾಶ ನೀಡುವುದಕ್ಕಾಗಿ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಸದನ ಸಮಿತಿ ರಚಿಸಿದ ಮೇಯರ್ ಈರೇಶ ಅಂಚಟಗೇರಿ,ಸಮಿತಿ ಅಧ್ಯಕ್ಷ ಸಂತೋಷ ಚವ್ಹಾಣ,ಸದಸ್ಯರಾದ ಶಿವು ಮೆಣಸಿನಕಾಯಿ ಅವರಿಗೆ ಚಪ್ಪಾಳೆಯೊಂದಿಗೆ ನಾವೆಲ್ಲಾ ಅಭಿನಂದನೆ ಸಲ್ಲಿಸಬೇಕು ಎಂದರು.
ಇದೇ ವೇಳೆ ಜಗದೀಶ ಶೆಟ್ಟರ್ ಮಾತನಾಡಿ ಹುಬ್ಬಳ್ಳಿಯಲ್ಲಿ ಇಂದು ಸೃಷ್ಟಿಯಾಗಿರುವ ಇತಿಹಾಸದ ಹಿಂದೆ ಅನೇಕರ ಶ್ರಮವಿದೆ.ಹಲವರು ಜೀವ ಪಣಕ್ಕಿಟ್ಟು ಹೋರಾಡಿದ್ದಾರೆ. ಅಂತಹವರನ್ನು ನಾವು ಸ್ಮರಿಸಬೇಕು.ಜೊತೆಗೆ ಸರ್ವ ಧರ್ಮ ಸೌಹಾರ್ದದ ಸಂಕೇತವಾಗಿ ಇಲ್ಲಿ ಹಬ್ಬ ಆಚರಿಸ ಬೇಕು ಎಂದರು
ವಿಶ್ವ ಹಿಂದೂ ಪರಿಷತ್ ನ ಪ್ರಾಂತ ಕಾರ್ಯದರ್ಶಿ ಗೋವರ್ಧನ ರಾವ್, 60-70 ವರ್ಷಗಳ ಹೋರಾಟ ಹಾಗೂ ಕೆಲವರ ತ್ಯಾಗದ ಫಲವಾಗಿ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಿಸಲಾಗುತ್ತಿದೆ.ಇನ್ನೂ ಮುಂದೆ ಯಾರೂ ಇದನ್ನು ಈದ್ಗಾ ಮೈದಾನ ಎಂಬುದರ ಬದಲು ರಾಣಿ ಚನ್ನಮ್ಮ ಮೈದಾನ ಎಂದು ಕರೆಯಬೇಕು ಎಂದರು ಈ ಒಂದು ಸಮಯದಲ್ಲಿ ಶಾಸಕ ಅರವಿಂದ ಬೆಲ್ಲದ, ಮೇಯರ್ ಈರೇಶ ಅಂಚಟಗೇರಿ,ಮಹಾಮಂಡಳಿ ಅಧ್ಯಕ್ಷ ಸಂಜೀವ ಬಡಸ್ಕರ,ಜಯತೀರ್ಥ ಕಟ್ಟಿ ಇದ್ದರು.