ಹುಬ್ಬಳ್ಳಿ –
ಸ್ಮಾರ್ಟ್ ಸಿಟಿ ಮತ್ತು ಇತರೆ ಹಲವು ಅಭಿವೃದ್ಧಿ ಕಾರ್ಯಕ್ರಮ ಕುರಿತು ಹುಬ್ಬಳ್ಳಿಯ ಪ್ರವಾಸಿ ಮಂದಿರದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸಭೆ ಮಾಡಿದರು ಹೌದು ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಸಭೆಯಲ್ಲಿ ಸಧ್ಯ ಈ ಒಂದು ಯೋಜನೆಗಳ ಕುರಿತು ಸಮಗ್ರವಾದ ಮಾಹಿತಿಯನ್ನು ಪಡೆದುಕೊಂಡರು

ಜಿಲ್ಲಾಡಳಿತ,ಹು.ಧಾ.ಮ.ಪಾ,ಪೋಲಿಸ್ ಇಲಾಖೆ,ಸ್ಮಾರ್ಟ್ ಸಿಟಿ,ಎನ್.ಹೆಚ್.ಎ.ಆಯ್ ಹಾಗೂ ಎನ್.ಎಚ್ ಪಿಡ್ಬ್ಲುಡಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ,ಹುಬ್ಬಳ್ಳಿ – ಧಾರವಾಡ ಬೈಪಾಸ್ ಚತುಷ್ಪದ್ ರಸ್ತೆ ಕಾಮಗಾರಿ ಗಡಿ ಗುರುತಿಸು ವುದು,ನಗರದಲ್ಲಿನ ಸ್ಮಾರ್ಟ್ ಸಿಟಿ ಯೋಜನೆ ಯಲ್ಲಿ ಹಾಗೂ CRF ಅನುದಾನದಲ್ಲಿ ಕೈಗೊಂಡಿರುವ ರಸ್ತೆ ಅಭಿವೃದ್ಧಿ ಕಾಮಗಾರಿ,ಹುಬ್ಬಳ್ಳಿ ನಗರದಲ್ಲಿನ ಪ್ಲೈ ಓವರ್ ಕಾಮಗಾರಿ ಗಳ ಕುರಿತು ವಿವರ ಪಡೆದು ಸಮಸ್ಯೆಗಳನ್ನು ಆಲಿಸಿ ಪರಿಹಾರ ಸೂಚಿಸಿ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣ ಗೊಳಿಸಲು ಸಂಬಂಧಪಟ್ಟ ಇಲಾಖೆ ಅಧಿಕಾರಿಗ ಳಿಗೆ ಸೂಚಿಸಲಾಯಿತು.