ಧಾರವಾಡ –
ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಅನುದಾನ ದಲ್ಲಿ ಎತ್ತಿನ ಗುಡ್ಡ ರಸ್ತೆಯ ತುರುಮರಿ ಗಾರ್ಡನ್ ನಲ್ಲಿ ಅಂದಾಜು 90 ಲಕ್ಷ ವೆಚ್ಚದ ಅಭಿವೃದ್ಧಿ ಕಾಮಗಾರಿಗಳು ಹಾಗೂ ರಸ್ತೆ ಕಾಮಗಾರಿಗಳಿಗೆ ಕೇಂದ್ರ ಕಲ್ಲಿದ್ದಲು ಗಣಿ ಹಾಗೂ ಸಂಸದೀಯ ಸಚಿವರಾದ ಪ್ರಹ್ಲಾದ್ ಜೋಶಿ ಯವರು ಭೂಮಿ ಪೂಜೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಶಾಸಕರಾದ ಅಮೃತ ದೇಸಾಯಿ, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಮಹಾ ಪೌರರಾದ ಈರೇಶ ಅಂಚಟಗೇರಿ ರವರ ಕೋರಿಕೆಯ ಮೇರೆಗೆ ಹಮ್ಮಿಕೊಂಡ ಈ ಯೋಜನೆಯಿಂದ ಈ ಭಾಗದ ನಾಗರಿಕರಿಗೆ ಮೂಲಭೂತ ಸೌಕರ್ಯವನ್ನು ಒದಗಿಸ ಲಾಗಿದೆ ಎಂದು ಕೇಂದ್ರ ಸಚಿವರು ಹೇಳಿದರು.
ಈ ಸಂದರ್ಭದಲ್ಲಿ ತವನಪ್ಪ ಅಷ್ಟಗಿ,ಸೀಮಾ ಮಸೂತಿ, ಪ್ರಕಾಶ ತುರಮರಿ,ಸುನೀಲ್ ಮೊರೆ, ಸೊರವ್ವಾ ಪಾಟೀಲ ಸೇರಿದಂತೆ ಹಲವರು ಉಪಸ್ಥಿತರಿದ್ದರು.

























