ಧಾರವಾಡ ದಲ್ಲಿ ವಿವಿಧ ರಸ್ತೆ ಕಾಮಗಾರಿ ಗಳಿಗೆ ಪೂಜೆ ಸಲ್ಲಿಕೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಭಾಗಿ…..

Suddi Sante Desk

ಧಾರವಾಡ –

ಧಾರವಾಡ ದಲ್ಲಿ 3.75 ಕೋಟಿ ರೂಪಾಯಿ ವೆಚ್ಚದಲ್ಲಿ ವಿವಿಧ ರಸ್ತೆಗಳ ಭೂಮಿ ಪೂಜೆಗೆ ಕೇಂದ್ರ ಸಂಸದೀಯ ಹಾಗೂ ಗಣಿ ಮತ್ತು ಕಲ್ಲಿದ್ದಲು ಸಚಿವ ರಾದ ಪ್ರಲ್ಹಾದ ಜೋಶಿಯವರು ನೆರವೇರಿಸಿದರು

ಅಭಿವೃದ್ಧಿಯತ್ತ ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರದ ರಸ್ತೆಗಳು ಈ ಕೆಳಗಿನಂತಿವೆ

ಧಾರವಾಡ ವಾರ್ಡ್ 16 ರಲ್ಲಿ ಇಂದು

  1. ಪಾಲನಕರ್ ಚಾಳ್ ನಲ್ಲಿ ಸಿಸಿ ರಸ್ತೆಯನ್ನು 50 ಲಕ್ಷ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿಗೊಳಿಸುವ ಕಾಮಗಾರಿ
  2. ಸನ್ಮತಿ ರಸ್ತೆಯನ್ನು 1.50 ಕೋಟಿ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿಗೊಳಿಸುವ ಕಾಮಗಾರಿ
  3. ರಾಮನಗರದ ಉಪರಸ್ತೆಯನ್ನು 50 ಲಕ್ಷ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿಗೊಳಿಸುವ ಕಾಮಗಾರಿ
  4. ಕೆಂಪಗೇರಿ ರಸ್ತೆಯನ್ನು 75 ಲಕ್ಷ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿಗೊಳಿಸುವ ಕಾಮಗಾರಿ
  5. ವಾರ್ಡ್ 15 ಕಾಕಾರಗಲ್ಲಿಯಲ್ಲಿ 50 ಲಕ್ಷ ರೂಪಾಯಿ ವೆಚ್ಚದಲ್ಲಿ ಸಿಸಿ ರಸ್ತೆ ಅಭಿವೃದ್ಧಿ ಕಾಮಗಾರಿ

ಈ ಎಲ್ಲ ಕಾಮಗಾರಿಗಳಿಗೆ ಭೂಮಿ ಪೂಜೆಯನ್ನು ನೆರವೇರಿಸಿ ಚಾಲನೆ ನೀಡಲಾಯಿತು.

ಈ ಸಂದರ್ಭದಲ್ಲಿ ಶಾಸಕರಾದ ಅರವಿಂದ್ ಬೆಲ್ಲದ್, ಪಾಲಿಕೆ ಸದಸ್ಯರಾದ ವಿಜಯಾನಂದ ಶೆಟ್ಟಿ, ಈರೇಶ್ ಅಂಚಟಗೇರಿ,ಶಿವು ಹಿರೇಮಠ,ರಾಜೇಶ್ವರಿ ಸಾಲಗಟ್ಟಿ,ಪ್ರಮೋದ ಕಾರಕುನ,ಪಕ್ಷದ ಮುಖಂ ಡರು, ಕಾರ್ಯಕರ್ತರು ಹಾಗೂ ಪಾಲಿಕೆ ಸದಸ್ಯರು, ಇನ್ನಿತರೆ ಪ್ರಮುಖರು ಉಪಸ್ಥಿತರಿದ್ದರು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.