ಹುಬ್ಬಳ್ಳಿ –
ಮಾಜಿ ಸಿಎಂ ಸಿದ್ದರಾಮಯ್ಯ ಟ್ವಿಟ್ ಗೆ ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ತೀರುಗೇಟು ನೀಡಿದ್ದಾರೆ ನಗರದಲ್ಲಿ ಮಾತನಾಡಿದ ಅವರು RSS ನವರು ಯಾವತ್ತೂ ಪ್ರತಿಕ್ರಿಯೇ ನಿಡೋದಿಲ್ಲ ನಾವು RSS ನಿಂದಲೇ ಬಂದವರು ಅದಕ್ಕೆ ನಾವು ಮಾತನಾಡುತ್ತೇವೆ ಎಂದರು.ಮುಸ್ಲಿಂ ತುಷ್ಟಿಕರಣಕ್ಕೋಸ್ಕರ ಅವರು ಹಾಗೇ ಮಾತನಾಡ್ತಾರೆ.ಇಟಲಿ ನಾಯಕರಿಗೆ ಹತ್ತಿರವಾಗಲು ಸಿದ್ದರಾಮಯ್ಯ ಆ ರೀತಿ ಹೇಳಿಕೆ ನೀಡ್ತಿದ್ದಾರೆಂದರು.
ಇನ್ಮೇಲೆ ನಾನು ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯೆ ನೀಡಬಾರದೆಂದು ತೀರ್ಮಾನಿಸಿದ್ದೇನೆ.ಅವರು ಏನೇನೋ ಮಾತನಾಡುತ್ತಿದ್ದಾರೆ.ಸಿದ್ದರಾಮಯ್ಯ ಡುಪ್ಲಿಕೇಟ್ ಕಾಂಗ್ರೆಸ್ ನ ನಕಲಿ ಲೀಡರ್.ನಾವ್ಯಾರೂ ಕೇವಲ ಬಿಜೆಪಿ ಯವರೇ ಹಿಂದೂಗಳೆಂದು ಹೇಳಿಲ್ಲ ಎಂದರು.ಇವರು ಸಧ್ಯ ನಾವು ಹಿಂದೂಗಳೆಂದು ಹೇಳ್ತಿದ್ದಾರೆ ಅನ್ನೋದೇ ಸಂತೋಷವೆಂದರು.
ಈ ಹಿಂದೆ ಇವರು ನಾವು ಹಿಂದೂಗಳೇ ಅಲ್ಲ ಎನ್ನುತ್ತಿದ್ದರು ಇವಾಗ ಹಿಂದೂ ಎನ್ನುತ್ತಿದ್ದಾರೆ.RSS ಬಗ್ಗೆ ಸಿದ್ದರಾಮಯ್ಯ ನವರಿಗೆ ಎಲ್ಲಾ ಗೊತ್ತಿದೆ ಸುಮ್ಮನೇ ಗಂಜಿ ಕೇಂದ್ರದ ಆಸೆಗಾಗಿ RSS ಬಗ್ಗೆ ಮಾತನಾಡುತ್ತಿದ್ದಾರೆ.ಸಿದ್ಧರಾಮಯ್ಯ ಅವರು ಮೊದಲು ಅವರ ನಾಯಕರ ಮೂಲ ತಿಳಿದುಕೊ ಳ್ಳಲಿ ಎಂದು ಸಲಹೆ ನೀಡುತ್ತಾ ವಾಗ್ದಾಳಿ ನಡೆಸಿದರು