ಹುಬ್ಬಳ್ಳಿ –
ಕೇಂದ್ರ ಸಚಿವರಾದ ಮೇಲೆ ಸಾಕಷ್ಟು ಜನಪ್ರೀಯ ಅಭಿ ವೃದ್ದಿ ಕೆಲಸ ಕಾರ್ಯಗಳೊಂದಿಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಪಕ್ಷದ ವರಿಷ್ಠರು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರಿಗೆ ಉತ್ತರಾಖಂಡ ರಾಜ್ಯದ ಉಸ್ತುವಾರಿ ಯನ್ನು ನೀಡಿದ್ದರು.

ಹೌದು ಈ ಒಂದು ರಾಜ್ಯದ ಚುನಾವಣೆಯ ಉಸ್ತುವಾರಿ ಯನ್ನು ವಹಿಸಿಕೊಂಡು ಯಶಶ್ವಿಯಾಗಿ ಹಗಲಿರುಳು ರಾಜ್ಯದಲ್ಲಿಯೇ ಟೊಂಕವನ್ನು ಕಟ್ಟಿಕೊಂಡು ನಿಂತು ಬಿಜೆಪಿ ಪಕ್ಷವನ್ನು ಅಧಿಕಾರಕ್ಕೆ ತಗೆದುಕೊಂಡ ಕೀರ್ತಿ ಕೇಂದ್ರ ಸಚಿವ ಧಾರವಾಡದ ಜಿಲ್ಲೆಯ ಸಂಸದರಾಗಿರುವ ಪ್ರಹ್ಲಾದ್ ಜೋಶಿ ಅವರಿಗೆ ಸಲ್ಲುತ್ತಿದೆ.


ಇನ್ನೂ ಯಶಶ್ವಿಯಾಗಿ ಹೈಕಮಾಂಡ್ ಕೊಟ್ಟ ಜವಾಬ್ದಾರಿ ಯನ್ನು ನಿಭಾಯಿಸಿ ತವರು ಜಿಲ್ಲೆಗೆ ನಾಳೆ ಬರುತ್ತಿರುವ ಇವರನ್ನು ಪಕ್ಷದ ನಾಯಕರು ಮುಖಂಡರು ಸ್ಥಳೀಯ ಕಾರ್ಯಕರ್ತರು ಅದ್ದೂರಿಯಾಗಿ ಸ್ವಾಗತ ಮಾಡಲು ಮುಂದಾಗಿದ್ದಾರೆ.ಹೌದು ಬೆಳಿಗ್ಗೆ ಹತ್ತು ಗಂಟೆಗೆ ನಗರಕ್ಕೆ ಆಗಮಿಸುತ್ತಿರುವ ಇವರನ್ನು ಅಧ್ದೂರಿಯಾಗಿ ಬರಮಾಡಿ ಕೊಳ್ಳಲು ಮುಂದಾಗಿದ್ದು ಈಗಾಗಲೇ ಎಲ್ಲಾ ಸಿದ್ದತೆಗಳನ್ನು ಪಕ್ಷವು ಮಾಡಿಕೊಂಡಿದ್ದು ವಿಮಾನ ನಿಲ್ದಾಣದಿಂದ ನಗರದ ಪಕ್ಷದ ಕಚೇರಿವರೆಗೆ ಮೆರವಣಿಗೆಯ ಮೂಲಕ ಬರಮಾಡಿ ಕೊಂಡು ನಂತರ ಕಚೇರಿಯಲ್ಲಿ ಸನ್ಮಾನಿಸಿ ಗೌರವಿಸುವ ಯೋಜನೆಯನ್ನು ಹಾಕಿಕೊಂಡಿದ್ದು ದೂರದ ಉತ್ತರಾಖಂ ಡನಲ್ಲಿ ವಿಜಯದ ಪತಾಕೆ ಹಾರಿಸಿ ಬಂದ ವಿಜಯದ ನಾಯಕನನ್ನು ಅದ್ದೂರಿಯಾಗಿ ಸ್ವಾಗತಿಸಲು ಕೇಸರಿ ಪಡೆ ಪ್ಲಾನ್ ಮಾಡಿಕೊಂಡಿದೆ.