ಹುಬ್ಬಳ್ಳಿ –
ಶಾಲಾ ಕಾಲೇಜುಗಳ ಸುತ್ತ ಮುತ್ತಲು ಯಾರೇ ಹಿಜಾಬ್ ಹಾಕಿಸಲು ಬಂದರೆ ಅವರನ್ನು ಒದ್ದು ಒಳಗೆ ಹಾಕಿ ಯಾವುದೇ ಮುಲಾಜಿಲ್ಲದೇ ಈ ಒಂದು ಕೆಲಸವನ್ನು ಮಾಡಿ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು ಹಿಜಾಬ್ ಗಲಾಟೆ ಈಗಾಗಲೇ ಕೋರ್ಟ್ ನಲ್ಲಿದೆ ಕೋರ್ಟ್ ನಲ್ಲಿರುವಾಗಲೇ ದುರದ್ದೇಶದಿಂದ ಗಲಾಟೆ ಮಾಡಲಾಗು ತ್ತಿದೆ.ಮಧ್ಯಂತರ ಆದೇಶ ಎಲ್ಲಿ ಪಾಲನೆ ಆಗುತ್ತಿಲ್ಲವೋ ಅಂಥಲ್ಲಿ ಕಟ್ಟುನಿಟ್ಟಿನ ಕ್ರಮವನ್ನು ಕೈಗೊಳ್ಳಿ ಎಂದರು

ಇನ್ನೂ ನ್ಯಾಯಾಲಯ ಹಿಜಾಬ್ ಪರ ಅಥವಾ ವಿರುದ್ಧ ವಾದರೂ ಕೊಡಲಿ ಅದನ್ನು ನಾವು ಪಾಲನೆ ಮಾಡಬೇಕಾ ಗುತ್ತೆ ಆದ್ರೆ ಪರವಾಗಿ ಬಂದ್ರು ವಿರುದ್ಧವಾಗಿ ಬಂದ್ರು ಹಿಜಾಬ್ ಹಾಕ್ತಿವಿ ಅನ್ನೋದು ಸರಿಯಲ್ಲ ಎಂದರು.ಇನ್ನೂ ಶಾಲೆ ಮತ್ತು ಕಾಲೇಜುಗಳಿಗೆ ವಿದ್ಯಾರ್ಥಿಗಳನ್ನು ಮಾತ್ರ ಅವಕಾಶ ನೀಡಿ ಆದ್ರೆ ಹಿಜಾಬ್ ಹಾಕಿಸೋಕೆ ಅಥವಾ ತೆಗಿಸೋಕೆ ಯಾರೇ ಬಂದ್ರು ಒದ್ದು ಒಳಗೆ ಹಾಕಿ ಎಂದರು.
ಇನ್ನೂ ಸರ್ಕಾರ ಎಷ್ಟು ದಿನ ಇವರನ್ನು ಸಂಬಾಳಿಸಬೇಕು ಗಲಾಟೆ ಮಾಡುವವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮಕ್ಕೆ ಮುಂದಾಗಬೇಕೆಂದು ಸೂಚಿಸಿದರು.ಇನ್ನೂ ಸದನದಲ್ಲಿ ಕಾಂಗ್ರೆಸ್ ನಿರಂತರ ಪ್ರತಿಭಟನೆ ಹಿನ್ನೆಲೆ ಪ್ರತಿಭಟನೆ ಮಾಡುವುದೇ ಅವರ ಕಾಯಕವಾಗಿದೆ ಅವರಿಗೆ ದೇವರು ಆದಷ್ಟು ಬೇಗ ಸದ್ಭುದ್ದಿ ನೀಡಲಿ ರಾಜ್ಯದಲ್ಲಿ ಸಾಕಷ್ಟು ಜ್ವಲಂತ ಸಮಸ್ಯೆಗಳಿವೆ ಅವುಗಳ ಪರಿಹಾರಕ್ಕೆ ವಿಪಕ್ಷಗಳು ಸರ್ಕಾರಕ್ಕೆ ಸಲಹೆ ನೀಡಬೇಕಿದೆ ಅದನ್ನು ಬಿಟ್ಟು ಈ ರೀತಿ ಪ್ರತಿಭಟನೆಗೆ ಮುಂದಾಗಿದ್ದು ಸರಿಯಲ್ಲವೆಂದರು.