ಧಾರವಾಡದ ಮುಗದ ಗ್ರಾಮದಲ್ಲಿ ಮನ್ ಕು ಬಾತ್ ಕಾರ್ಯಕ್ರಮ ವೀಕ್ಷಣೆ ಮಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ – ಗ್ರಾಮಸ್ಥರ ಮನವಿ ಸ್ವೀಕರಿಸಿ ಸಮಸ್ಯೆ ಆಲಿಸಿದ ಸಚಿವರು…..

Suddi Sante Desk

ಧಾರವಾಡ

ಕೇಂದ್ರ ಸಂಸದೀಯ ವ್ಯವಹಾರಗಳ ಮತ್ತು ಗಣಿ, ಕಲ್ಲಿದ್ದಲು ಸಚಿವರಾದ ಪ್ರಹ್ಲಾದ್‌ ಜೋಶಿ ಅವರು ಪ್ರಧಾನ ಮಂತ್ರಿಗಳ ಮನ್ ಕಿ ಬಾತ್ ಕಾರ್ಯಕ್ರಮವನ್ನು ಮುಗದ ಗ್ರಾಮ ಪಂಚಾಯತದಲ್ಲಿ ವೀಕ್ಷಿಸಿದರು.ನಂತರ ಅವರು ಗ್ರಾಮಸ್ಥರನ್ನು ಉದ್ದೇಶಿಸಿ ಮಾತನಾಡಿ ಕೇಂದ್ರ ಸರಕಾರವು ಗ್ರಾಮೀಣ ಮೂಲಸೌಕರ್ಯಗಳ ಹೆಚ್ಚಳ ಮತ್ತು ಸುಧಾರ ಣೆಗೆ ಆದ್ಯತೆ ನೀಡಿದೆ.ಕಲಘಟಗಿ ಹಾಗೂ ಧಾರವಾಡ ಮತಕ್ಷೇತ್ರ ವ್ಯಾಪ್ತಿಯಲ್ಲಿ ವಿವಿಧ ರಸ್ತೆ ಸುಧಾರಣೆಗೆ ಕಾಮ ಗಾರಿ ಕೈಗೊಳ್ಳಲಾಗಿದೆ ಮತ್ತು ರೈಲ್ವೇ ಬ್ರಿಡ್ಜ್‌ ನಿರ್ಮಾಣಕ್ಕೆ ಅನುದಾನ ಒದಗಿಸಲಾಗಿದೆ ಎಂದರು.

ಕೇಂದ್ರ ಸರಕಾರದ ಮಹತ್ವಾಕಾಂಕ್ಷೆಯ ಯೋಜನೆಯಾದ ಅಮೃತ ಸರೋವರ ಕಾರ್ಯಕ್ರಮದಡಿ ಜಿಲ್ಲೆಯಲ್ಲಿ ನೂರು ಕೆರೆಗಳ ನಿರ್ಮಾಣಕ್ಕೆ ನಿರ್ಧರಿಸಿ ಕಾಮಗಾರಿ ಕೈಗೊಳ್ಳಲಾ ಗುತ್ತಿದೆ.ಇವುಗಳಲ್ಲಿ ಗ್ರಾಮೀಣ ಐತಿಹಾಸಿಕ ಕೆರೆಗಳ ಸುಧಾರಣೆ,ಹೊಸ ಕೆರೆಗಳ ನಿರ್ಮಾಣ ಸೇರಿದೆ ಭಾರತವು ಈಗ ವಿದ್ಯುತ್ ಉತ್ಪಾದನೆ ಮತ್ತು ವಿತರಣೆಯಲ್ಲಿ ಸ್ವಾವ ಲಂಬಿ ಆಗಿದೆ.ಸ್ಥಳಿಯ ಸರಕಾರಗಳು ಲಭ್ಯವಿರುವ ವಿದ್ಯುತನ್ನು ಅಗತ್ಯಕ್ಕೆ ತಕ್ಕಂತೆ ಬಳಸಿಕೊಳ್ಳಬೇಕು.ಜನರಿಗೆ ತೊಂದರೆ ಆಗದಂತೆ ವಿದ್ಯುತ್ ವಿತರಣೆ ಆಗಬೇಕೆಂದು ಸಚಿವರು ಹೇಳಿದರು.ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಅನೇಕ ಜನಪರ ಯೋಜನೆಗಳು ಪ್ರಗತಿಯ ಪಥದಲ್ಲಿ ಸಾಗುತ್ತಿವೆ ಎಂದರು

ಜಲಜೀವನ ಮಿಷನ್ ಅಮೃತ ಯೋಜನೆಯಲ್ಲಿ ಅಳ್ನಾವರ ತಾಲೂಕಿನ 3625 ಮನೆಗಳಿಗೆ ನಿರಂತರ ನೀರು ಪೂರೈಕೆ ಕಾಮಗಾರಿಯಲ್ಲಿ ಶೇ.73 ರಷ್ಟು ಸಾಧನೆಯಾಗಿದೆ ಅಳ್ನಾವರ ಮುಖ್ಯ ರಸ್ತೆ ದುರಸ್ತಿಗೆ ಆದ್ಯತೆ ನೀಡಲಾಗಿದೆ ಎಂದು ಸಚಿವರು ಹೇಳಿದರು.ಸುತ್ತಮುತ್ತಲಿನ ಗ್ರಾಮಗ ಳಲ್ಲಿ ವಿದ್ಯುತ್ತಿನ ಸಮಸ್ಯೆಗಳನ್ನು ಬೆಳಿಗ್ಗೆ 6 ರಿಂದ ಸಾಯಂ ಕಾಲ 7 ಗಂಟೆಗಳವರೆಗೂ ಹಾಗೂ ಹೊಲದಲ್ಲಿ ವಾಸಿಸುವ ರೈತರಿಗೆ ಸಿಂಗಲ್ ಫೇಸ್ ವಿದ್ಯುತ್ ನೀಡಬೇಕೆಂದು ಹೆಸ್ಕಾಂನ ಅಧಿಕಾರಿಗಳಿಗೆ ಸೂಚಿಸಿದರು‌.ನಂತರ ಸಚಿವ ರಿಗೆ ಮುಗದ ಹಾಗೂ ಸುತ್ತಲಿನ ಗ್ರಾಮಗಳ ಸಾರ್ವಜನಿ ಕರು ತಮ್ಮ ಗ್ರಾಮಗಳ ಪ್ರಮುಖ ಸಮಸ್ಯೆಗಳ ಕುರಿತು ಮನವಿ ಸಲ್ಲಿಸಿದರು.

ಸಭೆಯಲ್ಲಿ ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಸುರೇಶ ಇಟ್ನಾಳ,ಹೆಸ್ಕಾಂ ವ್ಯವಸ್ಥಾಪಕ ನಿರ್ದೇಶಕಿ ಡಿ. ಭಾರತಿ,ಉಪವಿಭಾಗಧಾಕಾರಿ ಅಶೋಕ ತೇಲಿ,ಮುಗದ ಗ್ರಾಮ ಪಂಚಾಯತ ಅಧ್ಯಕ್ಷೆ ಋಕ್ಕಮ್ಮ ಭೋವಿ ಮತ್ತು ಉಪಾಧ್ಯಕ್ಷರು,ಸದಸ್ಯರು ಸೇರಿದಂತೆ ಗ್ರಾಮಸ್ಥರು ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.