ಧಾರವಾಡ –
ಕೆಲವೊಬ್ಬರು ಅಧಿಕಾರ ಸಿಕ್ಕಿದೆ ಅಂತಾ ತಾವು ಬದಲಾಗುತ್ತಾರೆ ತಮ್ಮ ವ್ಯಕ್ತಿತ್ವವನ್ನು ಬದಲಾವಣೆ ಮಾಡಿಕೊಳ್ಳುತ್ತಾರೆ.ಆದರೆ ಪ್ರಹ್ಲಾದ್ ಜೋಶಿ ಅವರು ಕೇಂದ್ರ ಸಚಿವರಾದ ಮೇಲೂ ಮೊದಲು ಹೇಗೆ ಇದ್ದರೊ ಇನ್ನೂ ಈಗಲೂ ಹಾಗೇ ಸರಳ ಸಾಮಾನ್ಯರಲ್ಲಿಯೇ ಸಾಮಾನ್ಯರಾಗಿ ಇದ್ದಾರೆ ಇದಕ್ಕೆ ಅವರ ಹತ್ತು ಹಲವಾರು ಕೆಲಸ ಕಾರ್ಯಗಳೇ ಸಾಕ್ಷಿ

ನಾನೊಬ್ಬ ಕೇಂದ್ರ ಸಚಿವ ಅಂತಾ ಎಂದುಕೊಂಡು ಯಾವಾಗಲೂ ಹೈ ಪೈ ಆಗಿರದೆ ಸಿಂಪಲ್ ಆಗಿರು ತ್ತಾರೆ.ಇದಕ್ಕೆ ಧಾರವಾಡದಲ್ಲಿ ಕಂಡು ಬಂದ ಚಿತ್ರಣವೇ ಮತ್ತೊಂದು ತಾಜಾ ಉದಾಹರಣೆ

ಹುಬ್ಬಳ್ಳಿಯಿಂದ ಧಾರವಾಡ ಕಡೆಗೆ ಕಾರ್ಯಕ್ರಮ ದಲ್ಲಿ ಪಾಲ್ಗೊಳ್ಳಲು ತೆರಳುವ ಸಮಯದಲ್ಲಿ ಹೆಸರಾಂತ ನವಲೂರ ಪ್ಯಾರಲ್ ಹಣ್ಣು ಸವಿದರು

ನಮ್ಮ ನವಲೂರ ಪ್ಯಾರಲ್ ಹಣ್ಣು ಧಾರವಾಡ ಫೇಡೆ ಯಷ್ಟೇ ಫೇಮಸ್ ಇರೋದರಿಂದ ಅವುಗಳ ರುಚಿಯನ್ನು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸವಿದರು.ಧಾರವಾಡಕ್ಕ ಕಾರ್ಯಕ್ರಮಕ್ಕೆ ಹೋಗುವ ಸಮಯದಲ್ಲಿ ಸಾವಯವ ಕೃಷಿ ಒಳಗ ಬೆಳದ ಪ್ಯಾರಲ ಹಣ್ಣನ್ನು ರೈತ ಮಹಿಳೆ ರೇಣುಕಾ ರಾವಳ ಅವರೇ ಮಾರಾಟ ಮಾಡುತ್ತಿದ್ದರು.

ಸಾವಯವ ಜಮೀನಿನಲ್ಲಿ ಬೆಳದದ್ದ ಪ್ಯಾರಲ ಹಣ್ಣು ತೊಗೊಂಡ ಸವಿದರು. ತಾವೇ ಸ್ವತಃ ಕಾರಿನಿಂದ ಕೆಳಗೆ ಇಳಿದು ಆಯ್ಕೆ ಮಾಡಿಕೊಂಡು ರೈತ ಮಹಿಳೆಯೊಂದಿಗೆ ಮಾತನಾಡಿ ಮಾಹಿತಿಯನ್ನು ಪಡೆದುಕೊಂಡ ಸಚಿವರು ಖರೀದಿಸಿ ಸವಿದರು

ಧಾರವಾಡಕ್ಕ ಹೋಗಬೇಕಾರ ಒಮ್ಮೆ ನವಲೂರ ಪ್ಯಾರಲ ಹಣ್ಣ ಮರೆಯೊಹಂಗಿಲ್ಲ ನೀವು ಮರಿಬ್ಯಾಡ್ರಿ ಎನ್ನುವ ಸಂದೇಶವನ್ನು ಸಚಿವರು ತಮ್ಮ ಫೇಸ್ ಬುಕ್ ವಾಲ್ ನಲ್ಲಿ ಉಲ್ಲೇಖ ಮಾಡಿ ಪೊಸ್ಟ್ ಮಾಡಿದ್ದಾರೆ.ಇದನ್ನು ನೋಡಿದರೆ ನಿಜವಾಗಿಯೂ ಈಗಲೂ ಇವರು ಎಷ್ಟು ಸರಳ ವ್ಯಕ್ತಿತ್ವದವರು ಎನ್ನೊದಕ್ಕೆ ಈ ಒಂದು ಚಿತ್ರಣ ಸಾಕ್ಷಿ. ಇವರೊಂದಿಗೆ ಆಪ್ತ ಸಹಾಯಕರಾದ ಮಲ್ಲಿಕಾರ್ಜುನ ಪಾಟೀಲ,ಶರಣು ಅಂಗಡಿ ಸೇರಿದಂತೆ ಹಲವರು ಉಪಸ್ಥಿತರಿದ್ದರು