ಧಾರವಾಡ ದಲ್ಲಿ ಆಧಾರ್ ಸೇವಾ ಕೇಂದ್ರಕ್ಕೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಭೇಟಿ ಕಾರ್ಯ ಪರಿಶೀಲನೆ

Suddi Sante Desk

ಧಾರವಾಡ –

ಧಾರವಾಡ ನಗರದ ಕೆ.ಸಿ. ಪಾರ್ಕ್ ಹತ್ತಿರ ಇರುವ ಆಧಾರ್ ಸೇವಾ ಕೇಂದ್ರಕ್ಕೆ ಇಂದು ಕೇಂದ್ರ ಸಂಸದೀಯ ವ್ಯವಹಾರ ಗಳು, ಗಣಿ ಮತ್ತು ಕಲ್ಲಿದ್ದಲು ಸಚಿವರಾದ ಪ್ರಲ್ಹಾದ ಜೋಶಿ ಅವರು ಭೇಟಿ ನೀಡಿ ಕಾರ್ಯ ಚಟುವಟಿಕೆಗಳನ್ನು ಪರಿಶೀ ಲಿಸಿದರು.

ಇದೆ ವೇಳೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಮಾತನಾಡಿ ದೇಶದ ಬೃಹತ್ ಮೆಟ್ರೊ ನಗರಗಳಲ್ಲಿ ಮಾತ್ರ ಒಂದಕ್ಕಿಂತ ಹೆಚ್ಚು ಆಧಾರ್ ಸೇವಾ ಕೇಂದ್ರಗಳ ಸ್ಥಾಪಿಸುವ ನೀತಿ ರಾಷ್ಟ್ರಮಟ್ಟದಲ್ಲಿ ಇತ್ತು.ವಿಶೇಷ ಪ್ರಯತ್ನದಿಂದಾಗಿ ನಾನು ಮೆಟ್ರೋ ನಗರಗಳಾಗಿರುವ ಹುಬ್ಬಳ್ಳಿ ಧಾರವಾಡ ಅವಳಿ ನಗರದಲ್ಲಿ ಎರಡು ಪ್ರತ್ಯೇಕ ಪೂರ್ಣ ಪ್ರಮಾಣದ ಆಧಾರ್ ಸೇವಾ ಕೇಂದ್ರಗಳನ್ನು ಸ್ಥಾಪಿಸಲಾಯಿತು.ಬಳಿಕ ಇದರ ಪ್ರಯೋಜನ ಉಳಿದ ನಗರಗಳಿಗೂ ಲಭ್ಯವಾಗಿದೆ.ಇಲ್ಲಿ ಪ್ರತಿನಿತ್ಯ ಸುಮಾರು 500 ಜನರಿಗೆ ಆಧಾರ್ ಅಪ್‍ಡೇಟ್ ಹೊಸ ಆಧಾರ್ ಕಾರ್ಡ್ ವಿತರಣೆಗೆ ಅವಕಾಶವಿದೆ. ವಾರದ ಎಲ್ಲಾ ಏಳು ದಿನಗಳ ಕಾಲ ಪ್ರತಿದಿನ ಬೆಳಿಗ್ಗೆ 9 ರಿಂದ ಸಂಜೆ 6 ಗಂಟೆಯವರೆಗೆ ಆನ್‍ಲೈನ್ ಮತ್ತು ಆಫ್‍ ಲೈನ್ ಎರಡೂ ವಿಧಾನಗಳಲ್ಲಿ ಕಾರ್ಯ ನಿರ್ವಹಣೆಯಾ ಗುತ್ತಿದೆ ಎಂದರು.

ಆಧಾರ್ ನೋಂದಣಿ ಹಾಗೂ ನವೀಕರಣಕ್ಕಾಗಿ ಬಂದಿದ್ದ ಸಾರ್ವಜನಿಕರು ಕೇಂದ್ರದ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿ ಸಿದರು.ಈ ಒಂದು ಸಮಯದಲ್ಲಿ ಶಾಸಕ ಅರವಿಂದ ಬೆಲ್ಲದ,ಮಹಾನಗರಪಾಲಿಕೆ ಸದಸ್ಯರಾದ ಈರೇಶ ಅಂಚ ಟಗೇರಿ,ಸುರೇಶ ಬೇದ್ರೆ,ಮಂಜುನಾಥ ಬಟ್ಟೆಣ್ಣವರ, ಜ್ಯೋತಿ ಪಾಟೀಲ,ಶಿವು ಹಿರೇಮಠ,ವಿಜಯಾನಂದಶೆಟ್ಟಿ, ಮುಖಂಡ ಮೋಹನ ರಾಮದುರ್ಗ,ಆಧಾರ್ ಕೇಂದ್ರದ ವ್ಯವಸ್ಥಾಪಕಿ ಸ್ವಾತಿ ಕೊಟಬಾಗಿ ಮತ್ತಿತರರು ಇದ್ದರು.


Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.