ಹುಬ್ಬಳ್ಳಿ –
ಕೋವಿಡ್ ನ ಎರಡನೇಯ ಹಂತದ ಲಸಿಕೆಯನ್ನು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ತಗೆದುಕೊಂಡರು. ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಪತ್ನಿ ಜ್ಯೋತಿ ಪ್ರಹ್ಲಾದ್ ಜೋಶಿ ಅವರೊಂದಿಗೆ ಲಸಿಕೆಯನ್ನು ಪಡೆದುಕೊಂಡರು

ಕಿಮ್ಸ್ ಕೋವಿಡ್ ಲಸಿಕಾ ಕೇಂದ್ರದಲ್ಲಿ ಕೇಂದ್ರ ಸಂಸ ದೀಯ ವ್ಯವಹಾರಗಳು ಹಾಗೂ ಕಲ್ಲಿದ್ದಲು ಮತ್ತು ಗಣಿ ಸಚಿವ ಪ್ರಲ್ಹಾದ್ ಜೋಶಿ,ಪತ್ನಿ ಜ್ಯೋತಿ ಪ್ರಲ್ಹಾ ದ್ ಜೋಶಿ ಅವರೊಂದಿಗೆ ಎರಡನೇ ಹಂತದ ಕೋವಿಶಿಲ್ಡ್ ಲಸಿಕೆಯನ್ನು ಪಡೆದುಕೊಂಡರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು ಜನರು ಉಹಾಪೋಹದ ಮಾತುಗಳಿಗೆ ಕಿವಿ ಕೋಡದೆ ಲಸಿಕೆ ಪಡೆದುಕೊಳ್ಳಬೇಕು.ಲಸಿಕೆಯಿಂದ ಯಾವುದೇ ಅಡ್ಡಪರಿಣಾಮಗಳಿಲ್ಲ.ಕೋವಿಡ್ ತತ್ತಾದ ಸಂದರ್ಭ ದಲ್ಲಿ ಲಸಿಕೆಯಿಂದ ಉತ್ತಮ ರಕ್ಷಣೆ ದೊರೆಯಲಿದೆ ಎಂದರು.ಈ ಒಂದು ಸಮಯದಲ್ಲಿ ಜಿಲ್ಲಾಧಿಕಾರಿ ಕಿಮ್ಸ್ ಆಸ್ಪತ್ರೆಯ ಮುಖ್ಯಸ್ಥರು, ಆಪ್ತ ಕಾರ್ಯದರ್ಶಿ ಮಲ್ಲಿಕಾರ್ಜುನ ಪಾಟೀಲ ಸೇರಿದಂತೆ ಹಲವರು ಉಪಸ್ಥಿತರಿದ್ದರು