ಧಾರವಾಡ –
ಕೇಂದ್ರ ಗಣಿ ಮತ್ತು ಕಲ್ಲಿದ್ದಲು ಹಾಗು ಸಂಸದೀಯ ವ್ಯವಹಾರಗಳ ಸಚಿವರಾದ ಪ್ರಹ್ಲಾದ್ ಜೋಶಿಯವರ ಹುಟ್ಟುಹಬ್ಬವನ್ನು ಧಾರವಾಡ ಜಿಲ್ಲೆಯಲ್ಲೂ ಆಚರಣೆ ಮಾಡಲಾಯಿತು. ಧಾರವಾಡದಲ್ಲಿ ಬಿಜೆಪಿ ಧಾರವಾಡ ನಗರ ಘಟಕ 71 ರ ಅಧ್ಯಕ್ಷ ಸುನೀಲ ಮೋರೆ ಅವರ ನೇತೃತ್ವದಲ್ಲಿ ಹುಟ್ಟು ಹಬ್ಬವನ್ನು ಆಚರಣೆ ಮಾಡಲಾಯಿತು.

ಹುಟ್ಟು ಹಬ್ಬದ ಹಿನ್ನಲೆಯಲ್ಲಿ ಗಾಂಧಿಚೌಕ, ಲಕ್ಷ್ಮಿ ನರಸಿಂಹ ದೇವಾಲಯದಲ್ಲಿ ಮಹಾ ಅಭಿಷೇಕ ಮಾಡಿಸಿ ಪ್ರಹ್ಲಾದ್ ಜೋಶಿಯವರಿಗೆ ಒಳ್ಳೇಯದಾಗಲೆಂದು ಕಾರ್ಯಕರ್ತರು ಮುಖಂಡರು ಬೇಡಿಕೊಂಡರು .ಇದೇ ವೇಳೆ ಸಿಹಿ ವಿತರಿಸಿದರು.

ಈ ಒಂದು ಕಾರ್ಯಕ್ರಮದಲ್ಲಿ ಶ್ರೀನಿವಾಸ್ ಕೋಟ್ಯಾನ್, ಹರೀಶ ಬಿಜಾಪುರ, ಪಕ್ಷದ ಹಿರಿಯರಾದ ಈರಣ್ಣ ಹಪ್ಪಳಿ, T S ಪಾಟೀಲ, ಸಿದ್ದು ಕಲ್ಯಾಣಶೆಟ್ಟಿ, ಶಂಕರ ಶೇಳಕೆ, ಶಕ್ತಿ ಹಿರೇಮಠ, ಪ್ರಧಾನ ಕಾರ್ಯದರ್ಶಿಗಳಾದ ವಿನಾಯಕ ಗೊಂದಳಿ, ಮುತ್ತು ಬನ್ನೂರು, ಇನ್ನೂ ಪಕ್ಷದ ಮುಖಂಡರಾದ ರಾಜೇಶ್ವರಿ ಅಳಗವಾಡಿ, ಸಂತೋಷ ದೇವರೆಡ್ಡಿ, ಪ್ರಭು ಹಿರೇಮಠ ,ಶ್ರೀಕಾಂತ್ ಹಳ್ಳಿಗೇರಿಮಠ, ಜಗದೀಶ ಚಿಕ್ಕಮಠ, ಬಸವರಾಜ ಬಾಳಗಿ, ರಾಜು ಕಡೆಮನಿ, ರಾಕೇಶ್ ನಾಝರೆ, ರಾಘವೇಂದ್ರ ತುಪ್ಪದ, ವೀರೇಶ್ ಶೆಟ್ಟರ ಹಾಗೂ ಪಕ್ಷದ ಎಲ್ಲ ಪ್ರಮುಖ ಕಾರ್ಯಕರ್ತರು ಭಾಗವಹಿಸಿದ್ದರು.ಇನ್ನೂ ನಗರದ ಇನ್ನೊಂದೆಡೆ ಕಡೆ ಕೇಂದ್ರ ಸಚಿವರ ಹುಟ್ಟು ಹಬ್ಬವನ್ನು ಆಚರಣೆ ಮಾಡಲಾಯಿತು.ನಗರದ ದುರ್ಗಾದೇವಿಗೆ ಎಲೆ ಪೂಜೆ, ಕುಂಕುಮ ಪೂಜೆ, ಪಂಚಾಮೃತ ಅಭಿಷೇಕ ಮಾಡಿಸಿ, ಕಾರ್ಯಕ್ಷೇತ್ರದಲ್ಲಿ ಸೇವೆ ಸಲ್ಲಿಸಲು ಇನ್ನೂ ಹೆಚ್ಚಿನ ಶಕ್ತಿ ನೀಡಲಿ ಎಂದು ಬೇಡಿಕೊಂಡರು.

ಹಾಗೇ ಆರೋಗ್ಯ, ಆಯುಷ್ಯ, ಅಧಿಕಾರ, ಅಂತಸ್ತು ದಯಪಾಲಿಸಲಿ ಎಂದು ತಾಯಿಗೆ ಪೂಜೆ ಸಲ್ಲಿಸಿದರು. ಕೃಷಿ ವಿಶ್ವವಿದ್ಯಾಲಯದ ನಿರ್ದೇಶಕರಾದ ಶಶಿ ಕುಲಕರ್ಣಿ, ಹಿರಿಯರಾದ ಪ್ರಕಾಶ ಗೋಡಬೋಲೆ, ಜಿಲ್ಲಾ ಸರ್ಕಾರಿ ವಕೀಲರಾದ ಸುನೀಲ ಗುಡಿ, ಶಿವಾನಂದ ಗುಂಡಗೋವಿ, ವೀರಣ್ಣ ಚಿಕ್ಕಮಠ ಸೇರಿದಂತೆ ಹಲವರು ಉಪಸ್ಥಿತಿತರಿದ್ದರು.