ವಾರ್ಡ್‌ 1 ರಲ್ಲಿ ಮುಂದುವರಿದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಯ ಪ್ರಚಾರ ಯಾತ್ರೆ – ನಿರ್ಮಲಾ ಹೊಂಗಲ ಗೆ ಮತದಾರರಿಂದ ಅಭೂತಪೂರ್ವ ಬೆಂಬಲ…..

Suddi Sante Desk

ಧಾರವಾಡ –

ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಧಾರವಾಡದ ವಾರ್ಡ್ 1 ರಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿರುವ ನಿರ್ಮಲಾ ಹೊಂಗಲ ಅವರ ಪ್ರಚಾರದ ಯಾತ್ರೆ ಮುಂದುವರೆದಿದೆ.ಹೌದು ಪಕ್ಷದ ಮುಖಂಡರು ಕಾರ್ಯಕರ್ತರು ಆಪ್ತರೊಂದಿಗೆ ವಾರ್ಡ್ ನಲ್ಲಿ ಪ್ರಚಾರ ಮಾಡುತ್ತಿದ್ದಾರೆ.

ವಾರ್ಡ್ ನ ಮೂಕಾಂಬಿಕಾ ಬಡಾವಣೆ, ಮುಧೋಳ ಕರ ಕಾಂಪೌಂಡ್, ಸೈನಿಕ ಕಾಲೊನಿ, ನಿರ್ವಾನಿ ನಗರ,ವೀರಭದ್ರೇಶ್ವರ ನಗರ,ಮತ್ತು ಮೋರೆ ಪ್ಲಾಟ್ ನಲ್ಲಿ ಪ್ರಚಾರವನ್ನು ಮಾಡಿದರು

ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿರುವ ನಿರ್ಮಲಾ ಹೊಂಗಲ ಅವರು ಪಕ್ಷದ ಆಪ್ತರು ಮುಖಂಡರು ಸೇರಿದಂತೆ ಹಲವರೊಂದಿಗೆ ಮನೆ ಮನೆಗೆ ತೆರಳಿ ಮತಯಾಚನೆಯನ್ನು ಮಾಡಿದರು

ಮಾಜಿ ಸಚಿವ ವಿನಯ ಕುಲಕರ್ಣಿ ಆಪ್ತ ಸಹಾಯಕ ಪ್ರಶಾಂತ ಕೇಕರೆ ಆಗಮಿಸಿ ನಿರ್ಮಲಾ ಹೊಂಗಲ ಪರ ಮತಯಾಚನೆ ಮಾಡಿದರು

ಇಡೀ ದಿನ ಒಂದನೆಯ ವಾರ್ಡ್ ತುಂಬೆಲ್ಲಾ ಸುತ್ತಾಡಿ ಅಬ್ಬರದ ಪ್ರಚಾರವನ್ನು ಮಾಡಿದರು ಹೋದಲೆಲ್ಲ ಇವರಿಗೆ ಮತದಾರರಿಂದ ಸಾಕಷ್ಟು ಪ್ರಮಾಣದಲ್ಲಿ ಅಭೂತಪೂರ್ವ ಬೆಂಬಲ ಕಂಡು ಬಂದಿದೆ

ಇನ್ನೂ ಪಕ್ಷದ ಮಹಿಳಾ ಘಟಕದ ಹಲವರು ಕೂಡಾ ಪ್ರಚಾರದಲ್ಲಿ ಪಾಲ್ಗೊಂಡು ಮನೆ ಮನೆಗೆ ತೆರಳಿ ಮತಯಾಚನೆ ಮಾಡಿ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡರು

ಒಟ್ಟಾರೆ ಹೊಸ ಭರವಸೆ ಹೊಸ ಉತ್ಸಾಹ ದೊಂದಿಗೆ ಬದಲಾವಣೆ ಬಯಸಿ ಮಾದರಿ ವಾರ್ಡ್ ಮಾಡುವ ಕನಸು ಕಟ್ಟಿಕೊಂಡು ಸ್ಪರ್ಧೆ ಮಾಡಿರುವ ನಿರ್ಮಲಾ ಹೊಂಗಲ ಅವರಿಗೆ ವಾರ್ಡ್ ನಲ್ಲಿ ಅಭೂತಪೂರ್ವ ಬೆಂಬಲ ಕಂಡು ಬರುತ್ತಿದೆ

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.