ಧಾರವಾಡ –
ದಿನದಿಂದ ದಿನಕ್ಕೆ ರಾಜ್ಯದಲ್ಲಿ ಒಂದು ಕಡೆ ಕರೋ ನಾ ಸೋಂಕು ಮಹಾಮಾರಿ ಹೆಚ್ಚಾಗುತ್ತಿದ್ದು ಹೀಗಾಗಿ ಚಿಕಿತ್ಸೆಗೆ ಸಮಸ್ಯೆಯಾಗುತ್ತಿದ್ದು ಹೀಗಾಗಿ ಸರ್ಕಾರಿ ನೌಕರಿಗಾಗಿ ಪ್ರತ್ಯೇಕವಾದ ಕೋವಿಡ್ ಕೇರ್ ಸೆಂಟ ರ್ ವೊಂದನ್ನು ಹುಬ್ಬಳ್ಳಿ ಧಾರವಾಡದಲ್ಲಿ ಆರಂಭ ಮಾಡಬೇಕು.ಇದರಿಂದಾಗಿ ಸರ್ಕಾರಿ ನೌಕರರಿಗೆ ತುಂಬಾ ಅನುಕೂಲವಾಗುತ್ತಿದ್ದು ಕೂಡಲೇ ರಾಜ್ಯ ಸರ್ಕಾರವು ಜಿಲ್ಲಾಡಳಿತಕ್ಕೆ ಸೂಚನೆ ನೀಡುವಂತೆ ಕರ್ನಾಟಕ ರಾಜ್ಯ ಶಿಕ್ಷಕರ ಪರಿಷತ್ ಅಧ್ಯಕ್ಷ ಗುರು ತಿಗಡಿ ಒತ್ತಾಯ ಮಾಡಿದ್ದಾರೆ.
ಈ ಕುರಿತಂತೆ ಸುದ್ದಿ ಸಂತೆ ಯೊಂದಿಗೆ ಮಾತನಾಡಿದ ಅವರು ಧಾರವಾಡ ಜಿಲ್ಲೆಯಲ್ಲಿ 20 ಸಾವಿರಕ್ಕೂ ಹೆಚ್ಚು ಸರ್ಕಾರಿ ನೌಕರಿದ್ದಾರೆ ಶಿಕ್ಷಕರು ಸೇರಿದಂತೆ ಬೇರೆ ಬೇರೆ ಇಲಾಖೆಗಳ ಸರ್ಕಾರಿ ನೌಕರರಿಗೆ ಕೂಡ ಲೇ ಪ್ರತ್ಯೇಕವಾದ ಕೋವಿಡ್ ಚಿಕಿತ್ಸಾ ಕೇಂದ್ರವನ್ನು ಮಾಡಿಸುವಂತೆ ಒತ್ತಾಯವನ್ನು ಮಾಡಿದ್ದಾರೆ. ಈ ಒಂದು ಕೇಂದ್ರದಿಂದ ಸರ್ಕಾರಿ ನೌಕರರಿಗೆ ಮತ್ತು ಶಿಕ್ಷಕರಿಗೆ ತುಂಬಾ ಅನುಕೂಲವಾಗುತ್ತದೆ ಹೀಗಾಗಿ ಕೂಡಲೇ ರಾಜ್ಯ ಸರ್ಕಾರ ಮತ್ತು ಶಿಕ್ಷಣ ಸಚಿವರು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡುವಂತೆ ಆಗ್ರಹ ವನ್ನು ಮಾಡಿದ್ದಾರೆ. ರಾಜ್ಯಾಧ್ಯಕ್ಷರೊಂದಿಗೆ ಸಂಘಟ ನೆಯ ಇತರೆ ಸದಸ್ಯರಾದ ಅಶೋಕ ಸಜ್ಜನ, ಶಂಕರ ಘಟ್ಟಿ,ಎಲ್ ಐ ಲಕ್ಕಮ್ಮನವರ, ಎಮ್ ಸಿ ಉಪ್ಪಿನ, ಎಸ್ ಎಫ್ ಪಾಟೀಲ,ಆರ್ ಕೆ ಶರಣಪ್ಪಗೌಡರ, ರಾಮಪ್ಪ ಬಂಡಿ,ಸಂಗಮೇಶ ಖನ್ನಿನಾಯ್ಕರ್, ಕಾಶಪ್ಪ ದೊಡವಾಡ,ಚಂದ್ರಶೇಖರ ತಿಗಡಿ, ನಾರಾ ಯಣ ಭಜಂತ್ರಿ, ಅಕ್ಬರಲಿ ಸೋಲ್ಲಾಪೂರ, ಆರ್ ನಾರಾಯಣಸ್ವಾಮಿ ಚಿಂತಾಮಣಿ,ಎಸ್ ವಾಯ್ ಸೊರಟಿ,ಗುರು ಪೊಳ ಸೇರಿದಂತೆ ಸರ್ವ ಸದಸ್ಯರು ಒತ್ತಾಯವನ್ನು ಮಾಡಿದ್ದಾರೆ.