ಬೆಂಗಳೂರು –
ಹೌದು ಅಪರೂಪಕ್ಕೊಮ್ಮೆ ತಾಂತ್ರಿಕ ಸಮಸ್ಯೆಗೆ ಒಳಗಾಗುವರ ವಾಟ್ಸ್ ಆಪ್ ಇದೀಗ ಗ್ರಹಣದ ದಿನ ಇಂದು ಇನ್ನೊಮ್ಮೆ ಕೈಕೊಟ್ಟಿದ್ದು ಬಳಕೆದಾರ ರರು ಪರದಾಡುವಂತೆ ಮಾಡಿದೆ.ವಾಟ್ಸ್ ಆಪ್ ಸಮಸ್ಯೆಯಾಗಿದ್ದನ್ನು ನೋಡಿ ನಮಗೊಬ್ಬರಿಗೇ ಇರಬಹುದು ಎಂದು ಹಲವರು ಭಾವಿಸಿದ್ದು ಬಳಿಕ ಇತರರಿಗೂ ಹಾಗೆ ಆಗುತ್ತಿರುವುದು ಗಮನಕ್ಕೆ ಬಂದಿದೆ.
ಕೆಲವೇ ಹೊತ್ತಿನಲ್ಲಿ ಟ್ವಿಟರ್ನಲ್ಲಿ ವಾಟ್ಸ್ ಆಪ್ ಡೌನ್ ಎಂಬುದು ಟ್ರೆಂಡಿಂಗ್ ಆಗುತ್ತಿದ್ದಂತೆ ವಾಟ್ಸ್ ಆಪ್ ಗೆ ಸಮಸ್ಯೆ ಎನ್ನುವುದು ಖಚಿತ ಗೊಂಡಿದ್ದು ನಂತರ ಕೆಲ ಗಂಟೆಗಳ ಬಳಿಕ ಮತ್ತೆ ಇದು ಆರಂಭಗೊಂಡಿತು.ಪರದಾಡುತ್ತಿದ್ದ ಸಾರ್ವಜನಿಕ ರು ಸಂತಸಗೊಂಡರು