ನವಲಗುಂದದಲ್ಲಿ ACB ಬಲೆಗೆ ಬಿದ್ದ ತಲಾಟೆ – ಬಿದ್ದ ಮನೆಯ ವರದಿ ನೀಡಲು ಹಣಕ್ಕೆ ಬೇಡಿಕೆ ಇಟ್ಟಿದ್ದ VA…..

Suddi Sante Desk

ನವಲಗುಂದ –

ಮಳೆಯಿಂದ ಬಿದ್ದ ಮನೆಗಳ ಕುರಿತಂತೆ ವರದಿಯನ್ನು ನೀಡಲು ಹಣಕ್ಕೆ ಬೇಡಿಕೆ ಇಟ್ಟಿದ್ದ ತಲಾಟೆಯೊಬ್ಬರು ಎಸಿಬಿ ಬಲೆಗೆ ಬಿದ್ದ ಘಟನೆ ಧಾರವಾಡ ಜಿಲ್ಲೆಯ ನವಲಗುಂದ ದಲ್ಲಿ ನಡೆದಿದೆ. ನವಲಗುಂದ ತಲಾಟೆ ಪ್ರದೀಪ ಬಸವಂ ತಕರ ಎಸಿಬಿ ಬಲೆಗೆ ಬಿದ್ದ ನೌಕರನಾಗಿದ್ದಾನೆ.

ಸಾರ್ವಜನಿಕರಿಂದ ಮಳೆಗೆ ಬಿದ್ದ ಮನೆಯ ವರದಿಯನ್ನು ನೀಡಲು ಇವರು ಹತ್ತು ಸಾವಿರ ರೂಪಾಯಿ ಬೇಡಿಕೆಯನ್ನು ಇಟ್ಟಿದ್ದರು. ಈ ಕುರಿತಂತೆ ಎಸಿಬಿ ಗೆ ದೂರನ್ನು ನೀಡಿದ್ದರು. ದೂರಿನ ಹಿನ್ನಲೆಯಲ್ಲಿ ಎಸಿಬಿ ಎಸ್ಪಿ ಬಿ ಎಸ್ ನೇಮಗೌಡ ಇವರ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ಮಾಡಿದ ಡಿವೈಎಸ್ಪಿ ಮಹಾಂತೇಶ ಜಿದ್ದಿ ಇನಸ್ಪೇಕ್ಟರ್ ಅಲಿಶೇಖ ಮತ್ತು ವ್ಹಿ ಎನ್ ಖಡಿ ಇವರು ದಾಳಿ ಮಾಡಿ ಟ್ರ್ಯಾಪ್ ಮಾಡಿದ್ದಾರೆ.ಸಧ್ಯ ತಲಾಟೆಯನ್ನು ವಶಕ್ಕೆ ತಗೆದುಕೊಂಡಿ ರುವ ಎಸಿಬಿ ಅಧಿಕಾರಿಗಳು ವಿಚಾರಣೆಯನ್ನು ಮಾಡತಾ ಇದ್ದು ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.