ಧಾರವಾಡ –
ಧಾರವಾಡದ ಜೆಎಸ್ ಎಸ್ ಕಾಲೇಜ್ ನಲ್ಲಿ ಮಾರ್ಚ್ 26,27,ಮತ್ತು 28 ರಂದು ಮೂರು ದಿನಗಳ ಕಾಲ ಕರ್ನಾಟಕ ಇತಿಹಾಸ ಪರಿಷತ್ತು 31 ನೇ ಮಹಾ ಸಮ್ಮೇಳನ ನಡೆಯಲಿದೆ ಎಂದು ಕರ್ನಾಟಕ ಇತಿಹಾಸ ಪರಿಷತ್ತಿನ ಮುಖ್ಯ ಸಂಯೋಜಕರು ಮತ್ತು ಜೆಎಸ್ ಎಸ್ ಕಾಲೇಜಿನ ಹಣಕಾಸು ಅಧಿಕಾರಿ ಡಾ ಅಜಿತ್ ಪ್ರಸಾದ್ ಹೇಳಿದರು.
ನಗರದಲ್ಲಿ ಸುದ್ದಿ ಗೋಷ್ಠಿ ಯಲ್ಲಿ ಮಾತನಾಡಿದ ಅವರು ಈವರೆಗೆ ಆಗಿರುವ ದೇಶದ ಇತಿಹಾಸವನ್ನು ಒಂದೆಡೆ ಸೇರಿಸಿ ಮೆಲುಕು ಹಾಕಿ ಪರಿಚಯಿಸುವುದು ಹಾಗೆ ಯುವ ಸಂಶೋಧಕರು ಮತ್ತು ವಿದ್ಯಾರ್ಥಿ ಗಳಲ್ಲಿ ಇತಿಹಾಸ ಓದುವ ಮತ್ತು ಅದರಲ್ಲಿ ಸಂಶೋಧನೆ ಕಾರ್ಯ ಕೈಗೊಳ್ಳು ವಂತೆ ಮೂಡಿಸುವುದು ಕಾರ್ಯಕ್ರಮದ ಮುಖ್ಯ ಉದ್ದೇಶ ವಾಗಿದೆ.
ಅಲ್ಲದೆ ಹೊಸ ತಲೆಮಾರಿನ ಸಂಶೋದಕರ ಸಂಶೋಧನೆ ಲೇಖನ ಗಳನ್ನು ಮಂಡಿಸಿ ಒಂದು ವೇದಿಕೆ ಕಲ್ಪಿಸುವುದು ಉದ್ದೇಶವಾಗಿದೆ ಎಂದು ಹೇಳಿದರು
ಮೂರು ದಿನಗಳ ಕಾಲ ನಡೆಯಲಿರುವ ಈ ಒಂದು ಕಾರ್ಯಕ್ರಮ ದಲ್ಲಿ ನೂರಕ್ಕೂ ಹೆಚ್ಚು ಸಂಶೋಧಕರು ಸೇರಿದಂತೆ ಹಲವರು ಪಾಲ್ಗೊಂಡು ಹೊಸ ಹೊಸ ವಿಚಾರ ಮಂಡಿಸಲಿದ್ದಾರೆ ಹಾಗೇ ಪತ್ರಿಕೆ ಗಳನ್ನು ಕೂಡಾ ಮಂಡಿಸಿ ಯುವ ಪೀಳಿಗೆಗೆ ಪರಿಚಯಿಸಲಿದ್ದಾರೆ ಎಂದರು
ಈ ಒಂದು ಪತ್ರಿಕಾಗೋಷ್ಠಿಯಲ್ಲಿ ಡಾ ಅಜೀತ್ ಪ್ರಸಾದ್ ಡಾ ಆರ್ ಎಮ್ ಷಡಕ್ಷರಿಯ್ಯ,ಡಾ ಆರ್ ವಿ ಚಿಟಗುಬ್ಬಿ ಐ ಕೆ ಪತ್ತಾರ,ಮಹಾವೀರ ಉಪದ್ಯಾಯ, ಸೂರಜ್ ಜೈನ್ ಸೇರಿದಂತೆ ಹಲವರು ಉಪಸ್ಥಿತರಿದ್ದರು
ಪೊಟೊ ಪರಶುರಾಮ ಗೌಡರ ಜೊತೆ ಮಂಜುನಾಥ ಸರ್ವಿ ಸುದ್ದಿ ಸಂತೆ ನ್ಯೂಸ್ ಧಾರವಾಡ