ಬೆಂಗಳೂರು –
ರಾಜ್ಯದ ಸರ್ಕಾರಿ ನೌಕರರಿಗೆ ಮಹತ್ವದ ಮಾಹಿತಿ ಯನ್ನು ನೀಡಲಾಗಿದೆ ಹೌದು HRMSನಲ್ಲಿನ ತಪ್ಪು ಸರಿಪಡಿಸಿಕೊ ಳ್ಳಲು ರಾಜ್ಯ ಸರ್ಕಾರ ಕೊನೆಯ ಅವಕಾಶ ನೀಡಿದ್ದು ಇದೇ 15ರೊಳಗೆ ತಪ್ಪು ಸರಿಪಡಿಕೊಳ್ಳುವಂತೆಯೂ ಮತ್ತು ಅದನ್ನ ಖಚಿತ ಪಡೆಸಿಕೊಳ್ಳುಂತೆಯೂ ಸೂಚನೆ ನೀಡ ಲಾಗಿದೆ.
ವೈಯಕ್ತಿಕ ಹಾಗೂ ಸೇವಾ ವಿಷಯಗಳಿಗೆ ಸಂಬಂಧಿಸಿದ ದತ್ತಾಂಶ ಬದಲಾವಣೆಗೆ ಇದು ಕೊನೆಯ ಅವಕಾಶವಾ ಗಿದ್ದು ಇದರೊಂದಿಗೆ ಲಗತ್ತಿಸಿರುವ ಸಮೂನೆಯಲ್ಲಿ ಕೋರಿ ರುವ ಮಾಹಿತಿಯನ್ನ ಭರ್ತಿ ಮಾಡಿ ದಿನಾಂಕ 15.7.2022 ರೊಳಗೆ ಆಯಾ ವೃಂದಗಳ ಸೇವಾ ವಿಷಯಗಳನ್ನು ನಿರ್ವಹಿಸುವ ಸಿ.ಆ.ಸು.ಇ ಶಾಖೆಗಳಿಗೆ ಖುದ್ದಾಗಿ ಬಂದು ಸಲ್ಲಿಸುವಂತೆ ಸೂಚಿಸಲಾಗಿದೆ.
ಅಂದ ಹಾಗೆ ರಾಜ್ಯ ಸರ್ಕಾರ ಸಚಿವಾಲಯದಲ್ಲಿ ಈಗಾ ಗಲೇ ಮಾನವ ಸಂಪನ್ಮೂಲ ನಿರ್ವಹಣಾ ವ್ಯವಸ್ಥೆಯೂ ಜಾರಿಯಲ್ಲಿದ್ದು ಹೆಚ್‌ಆರ್‌ಎಂಎಸ್ -1.0 ತಂತ್ರಾಂಶದಲ್ಲಿ ಎಲ್ಲ ನೌಕರರು ವೇತನ ಸಂಬಂಧಿತ ಸೂಕ್ತ ದತ್ತಾಂಶ ಇತ್ಯಾದಿಗಳ ಮೂಲ ದಾಖಲಾತಿಯನ್ನ ನಿರ್ವಹಿಸಲಾಗ್ತಿದೆ.