ಶಿವಮೊಗ್ಗ –
ಶೇರ್ ಮಾಡದೆ ವೈರಲ್ ಆದ ವಿಡಿಯೊಗಳು ! ಕೇವಲ ಒಂದುವರೆ ವರ್ಷದಲ್ಲಿ 2 ಕೋಟಿ 17 ಲಕ್ಷ ಗಡಿದಾಟಿದ ವೀಕ್ಷಕರ ಸಂಖ್ಯೆ ! ವೈಲ್ಡ್ ಟಸ್ಕರ್ ಯೂ ಟೂಬ್ ಚಾನಲ್ ನಮ್ಮ ಮಲೆನಾಡಿನ ಹೆಮ್ಮೆ 2020 ಮೇ ತಿಂಗಳಲ್ಲಿ ಪ್ರಾರಂಭವಾದ ವೈಲ್ಡ್ ಟಸ್ಕರ್ ಸಕ್ರೆಬೈಲು (Wild tusker Sakrebylu) ಯೂಟ್ಯೂಬ್ ಚಾನಲ್ ಕೇವಲ ಒಂದುವರೆ ವರ್ಷದ ಅವಧಿಯಲ್ಲಿ ಎರಡು ಕೋಟಿ 17 ಲಕ್ಷ ವೀಕ್ಷಣೆಯನ್ನು ಪಡೆದು ಅಚ್ಚರಿ ಮೂಡಿಸಿದೆ. ನೇಚರ ಮಲೆನಾಡು ಮಳೆಕಾಡು ಮತ್ತು ವನ್ಯಜೀವಿ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ಅಂಗಸಂಸ್ಥೆಯಾಗಿರುವ ವೈಲ್ಡ್ ಟಸ್ಕರ್ ಸಕ್ರೆಬೈಲು ಸಂಸ್ಥೆಯು ರಾಜ್ಯದ ಸಾಕಾನೆ ಗಳು ಹಾಗು ಅದರ ಮಾವುತ ಕಾವಾಡಿಗಳ ಬಗ್ಗೆ ದಾಖಲೆ ಗಳನ್ನು ಸಂಗ್ರಹಿಸುತ್ತದೆ.
ಕಳೆದ 15 ವರ್ಷಗಳ ಅವಧಿಯಲ್ಲಿ ಸಕ್ರೈಬೈಲಿನಲ್ಲಿದ್ದ ಸಾಕಾನೆಗಳ ಪರಿಚಯ, ಮಾವುತ ಕಾವಾಡಿಗಳ ಜೀವನ ಶೈಲಿ, ಆನೆಗಳನ್ನು ಸೆರೆಹಿಡಿಯುವುದು ಪಳಗಿಸುವುದು ಮತ್ತು ಸಾಕಾನೆಗಳು ಸಾವನ್ನಪ್ಪಿದರೆ ಅಂತ್ಯ ಸಂಸ್ಕಾರ ನೆರವೇರಿಸುವ ದೃಷ್ಯಗಳನ್ನು ಕಲೆ ಹಾಕಿರುವ ಸಂಸ್ಥೆ ಅದನ್ನು ಯೂಟ್ಯೂಬ್ ಚಾನಲ್ ನಲ್ಲಿ ಅಪ್ ಲೋಡ್ ಮಾಡಿದೆ. ಸಾಕಾನೆಗಳ ಕಿರುಪರಿಚಯವನ್ನು ಮಾಡಿಕೊ ಟ್ಟಿದೆ.ಆಯಾ ಸಂದರ್ಭದಲ್ಲಿ ಬಿಡಾರದಲ್ಲಿ ನಡೆದ ಘಟನಾವಳಿಗಳ ಬಗ್ಗೆ ಅಂದಿನ ಅರಣ್ಯಾಧಿಕಾರಿಗಳು, ವನ್ಯಜೀವಿ ವೈದ್ಯರು, ಮಾವುತರು ನೀಡಿರುವ ಹೇಳಿಕೆ ಗಳನ್ನು ಆದರಿಸಿ,ಸಣ್ಣ ಕಿರುಚಿತ್ರವನ್ನು ಹಾಕಲಾಗಿದೆ. ಬಿಡಾರದಲ್ಲಿ ಆನೆಗಳು ಮತ್ತು ಮಾವುತರ ನಡುವಿನ ಸಂಬಂಧ ಹೇಗಿರುತ್ತೆ ಎಂಬುದನ್ನು ಚಾನಲ್ ನಲ್ಲಿ ಅದ್ಭುತವಾಗಿ ಕಟ್ಟಿಕೊಡಲಾಗಿದೆ. ಪ್ರತಿ ವರ್ಷ ನಡೆಯುವ ಆನೆ ದಿನಾಚರಣೆಯ ಅದ್ಬುತ ದೃಷ್ಯಗಳು ಇಲ್ಲಿ ನೋಡಬಹುದಾಗಿದೆ. ಮಕ್ಕಳ ಅಚ್ಚುಮೆಚ್ಚಿನ ಮರಿಯಾನೆ ಅಮೃತ ಆಲೆ ಶಿವು ಆನೆಗಳು ಆಗ ಹೇಗಿದ್ದವು ಎಂಬುದು ವಿಡಿಯೋ ನೋಡಿದಾಗಲೇ ಗೊತ್ತಾಗುತ್ತದೆ.ಇನ್ನು ಬಿಡಾರ ದಿಂದ ಸಾಕಾನೆಗಳನ್ನು ಬೇರೆಡೆ ವರ್ಗಾಯಿಸಿದ ವಿಡಿಯೋ ಗಳು ಚಾನಲ್ ನಲ್ಲಿದೆ.ಈ ಸಂದರ್ಭದಲ್ಲಿ ಆನೆಗಳು ರೋಧಿಸುವ ಪರಿಯ ಚಿತ್ರಣ ಎಂತವರ ಮನಕಲುಕಿಸು ವಂತಿದೆ. ಈ ವಿಡಿಯೋಕ್ಕೆ ಪ್ರಾಣಿ ಪ್ರೀಯರು ಆಕ್ಷೇಪ ವ್ಯಕ್ತಪಡಿಸಿದರೂ,ತನ್ನ ನೆಲವನ್ನು ತೊರೆಯಬೇಕಾದ ಸಂದರ್ಭದಲ್ಲಿ ಆನೆಗಳ ವರ್ತನೆ ಅವುಗಳ ಭಾವುಕತೆ ಸಾಂಗತ್ಯ ತೊರೆಯುವಾಗಿನ ನೋವು ಹೇಗಿರುತ್ತೆ ಎಂಬು ದನ್ನು ಶ್ರೀಸಾಮಾನ್ಯ ನೋಡಿರಲು ಸಾಧ್ಯವಿಲ್ಲ.ಆದನ್ನು ಇಲ್ಲಿ ಕಾಣಬಹುದಾಗಿದೆ.ಇನ್ನು ಬಿಡಾರದಲ್ಲಿ ಅಪರೂಪ ದಲ್ಲಿ ಅಪರೂಪವೆಂಬಂತೆ ನಡೆಯುವ ವೀನಿಂಗ್ ನ್ನು ಸಾರ್ವಜನಿಕರು ನೋಡಲು ಸಾಧ್ಯವಿಲ್ಲ.ವೀನಿಂಗ್ ಎಂದರೆ ತಾಯಿ ಆನೆಯಿಂದ ಮರಿಯಾನೆಯನ್ನು ಒತ್ತಾಯಪೂರ್ವ ಕವಾಗಿ ಬೇರ್ಪಡಿಸುವುದು.ಇದು ಬಿಡಾರದಲ್ಲಿ ಅನಿವಾರ್ಯ ತಾಯಿ ಆನೆಯಿಂದ ಮರಿಯಾನೆಯನ್ನು ಬೇರ್ಪಡಿಸದೆ ಹೋದರೆ, ಮರಿಯಾನೆಯನ್ನು ಪಳಗಿಸಲು ಸಾಧ್ಯವಿಲ್ಲ. ತಾಯಿ ಆನೆ ಮತ್ತೊಂದು ಮರಿಗೆ ಜನ್ಮ ನೀಡಲು ಸಾಧ್ಯವಿಲ್ಲ. ಸರ್ಕಾರಿ ನಿಯಮದಂತೆ ತಾಯಿ ಮತ್ತು ಮರಿಯಾನೆಯನ್ನು ಬೇರ್ಪಡಿಸುವಾಗ ಎದುರಾ ಗುವ ಸನ್ನಿವೇಶ ಎಂತವರ ಕಣ್ಣಾಲೆಗಳನ್ನು ಒದ್ದೆ ಮಾಡುತ್ತದೆ ದೃಷ್ಯ ಹಿಂಸೆ ಅನಿಸಿದರೂ, ತಾಯಿ ಮಗುವಿನ ಭಾಂದವ್ಯದ ಬೆಸುಗೆ ಕಳಚುವ ಸಂದರ್ಭದಲ್ಲಿ ಅದು ಘೀಳಿಡುವ ಕ್ಷಣ ಅರಣ್ಯ ರೋಧನವಾಗಿರುತ್ತದೆ. ಪ್ರತ್ಯೇಕಗೊಂಡ ಮರಿಯಾನೆ ಕೆಲ ದಿನಗಳ ನಂತರ ಬಿಡಾರದ ಸಾಕಾನೆಗಳ ಜೊತೆ ಹೊಂದಾಣಿಕೆ ಮಾಡಿಕೊಂಡ ನಂತರ ಅದಕ್ಕೆ ಮಾವುತರು ತರಬೇತಿ ನೀಡುತ್ತಾರೆ. ಇಂತಹ ಅಪರೂಪದ ದೃಷ್ಯಗಳನ್ನು ವೈಲ್ಡ್ ಟಸ್ಕರ್ ಸಂಸ್ಥೆ ಯೂ ಟೂಬ್ ನಲ್ಲಿ ಹಾಕಿದೆ. ಸಂಸ್ಥೆ ವಿಡಿಯೋಗಳನ್ನು ಚಾನಲ್ ನಲ್ಲಿ ಹಾಕಿದ್ದನ್ನು ಬಿಟ್ಟರೆ ಯಾರಿಗೂ ಶೇರ್ ಮಾಡಲು ಕೂಡ ಹೋಗಿರಲಿಲ್ಲ. ಆದ್ರೆ ಚಾನಲ್ ಗೆ ಸಿಕ್ಕ ರೆಸ್ಪಾನ್ಸ್ ಸಂಸ್ಥೆಯ ಜವಬ್ದಾರಿಯನ್ನು ಹೆಚ್ಚಿಸಿದೆ. ಕೇವಲ ಒಂದುವರೆ ವರ್ಷದಲ್ಲಿ 2 ಕೋಟಿ 17 ಲಕ್ಷ ವೀಕ್ಷಣೆಯನ್ನು ಪಡೆದಿರುವ ವೈಲ್ಡ್ ಟಸ್ಕರ್ ಚಾನಲ್ ಗೆ 55 ಸಾವಿರ ಸಬ್ ಸ್ಕ್ರೈಬರ್ ಗಳಿದ್ದಾರೆ. ಪ್ರತಿದಿನ 70 ರಿಂದ 80 ಸಾವಿರ ವೀಕ್ಷಣೆಯನ್ನು ಚಾನಲ್ ಹೊಂದಿದೆ. ಸುಮಾರು 490 ವಿಡಿಯೋಗಳನ್ನು ಸಂಸ್ಥೆ ಅಪ್ ಲೋಡ್ ಮಾಡಿದೆ.ಅಭಿಮನ್ಯು ಆನೆಯ ಜೀವನ ಹಾಗು ಅದರ ಮಾವುತ ವಸಂತನ ಬದುಕಿನ ಬಗ್ಗೆ ಸಮಗ್ರವಾದ ಚಿತ್ರಣ ಕಟ್ಟಿಕೊಡಲಾಗಿದೆ. ಅಭಿಮನ್ಯು ಎಂದು ಹ್ಯಾಷ್ ಟ್ಯಾಗ್ ನಲ್ಲಿ ಕ್ಲಿಕ್ಕಿಸಿದರೂ, ಹಲವಾರು ವಿಡಿಯೋಗಳು ಕಣ್ಣಮುಂದೆ ಎದುರಾಗುತ್ತದೆ.ಚಾನಲ್ ಗೆ ಶ್ರೀಲಂಕಾ, ಥೈ ಲ್ಯಾಂಡ್, ಅಮೇರಿಕಾ ಇಂಗ್ಲೇಂಡ್ ,ಅರಬ್ ದೇಶಗಳಲ್ಲಿ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. ನೀವು ಕೂಡ ಚಾನಲ್ ವೀಕ್ಷಣೆ ಮಾಡದಿದ್ದರೆ ಒಮ್ಮ ವೈಲ್ಡ್ ಟಸ್ಕರ್ ಕ್ಲಿಕ್ಕಿಸಿ,ಅಲ್ಲಿನ ವಿಡಿಯೋಗಳನ್ನು ನೋಡಿ ಸಬ್ ಸ್ಕೈಬರ್ ಆಗಿ. ಏನೇ ಆಗಲಿ ವೈಲ್ಡ್ ಟಸ್ಕರ್ ಸಕ್ರೆಬೈಲು ಯೂಟೂಬ್ ಚಾನಲ್ ನಮ್ಮ ಹೆಮ್ಮೆ ಎಂದರೂ ತಪ್ಪಾಗಲಾರದು.