ಧಾರವಾಡ –
ಕರ್ನಾಟಕ ಸರ್ಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಮೂರು ಪ್ರಮುಖ ಬೇಡಿಕೆಗಳನ್ನು ಈಡೇರಿಸಲು ನಾನು ಪ್ರಾಮಾಣಿಕ ಪ್ರಯತ್ನ ಮಾಡು ತ್ತೇನೆ ಈ ಕುರಿತು ಮುಖ್ಯಮಂತ್ರಿ ಅವರೊಂದಿಗೆ ಮಾತನಾಡಿ ಸಮಸ್ಯೆ ಸರಿ ಪಡಿಸುತ್ತದೆ ಎಂದು ವಿಧಾನ ಪರಿಷತ್ ಸದಸ್ಯ ಎಸ್ ವಿ ಸಂಕನೂರ ಹೇಳಿದರು.
ಧಾರವಾಡದಲ್ಲಿ ಮಾತನಾಡಿದ ಅವರು ಶಿಕ್ಷಕರ ವರ್ಗಾವಣೆ ಸೇರಿದಂತೆ ಇನ್ನೂ ಪ್ರಮುಖ ಎರಡು ಬೇಡಿಕೆ ಗಳಾದ ಶಿಕ್ಷಕರಿಗೆ ಬೇಸಿಗೆ ರಜೆ, ಮತ್ತು ಉತ್ತರ ಕರ್ನಾಟಕದಲ್ಲಿ ಶಿಕ್ಷಕರ ಸದನ ನಿರ್ಮಿಸು ವುದು ಈ ಮೂರು ಪ್ರಮುಖ ಬೇಡಿಕೆಗಳನ್ನು ಈಡೇರಿಸಲಾಗುವುದು ಎಂದರು.
ಮುಖ್ಯಮಂತ್ರಿ, ಶಿಕ್ಷಣ ಸಚಿವರ ಗಮನಕ್ಕೆ ತರುವು ದರ ಜೊತೆಗೆ ಈ ಮೂರು ಪ್ರಮುಖ ಬೇಡಿಕೆಗಳನ್ನು ಈಡೇರಿಸಲು ನಿರಂತರ ಗಮನ ಹರಿಸುವುದಾಗಿ, ವಿಧಾನ ಪರಿಷತ್ ಸದಸ್ಯ ಎಸ್ ವಿ ಸಂಕನೂರ ಹೇಳಿದರು
ಉಪ್ಪಿನಬೆಟಗೇರಿಯ ಗುರುಕುಮಾರ ವಿರುಪಾಕ್ಷ ಮಹಾಸ್ವಾಮಿಗಳು, ಗುರು ತಿಗಡಿ,ಅಶೋಕ ಸಜ್ಜನ ಶರಣಪ್ಪಗೌಡ,ಎಲ್ ಐ ಲಕ್ಕಮ್ಮನವರ, ಎಸ್ ಎಫ್ ಪಾಟೀಲ, ಅಕ್ಬರಲಿ ಸೋಲಾಪುರ, ರಾಜೀವಸಿಂಗ ಹಲವಾಯಿ ಶ್ರೀಮತಿ ಲೂಸಿ ಸಾಲ್ಡಾನ ಸೇರಿದಂತೆ ಮುಂತಾದವರು ಇದ್ದರು