ಬೆಂಗಳೂರು –

ಇಂದಿನಿಂದ ರಾಜ್ಯದಲ್ಲಿ ಹೊಸ ಶೈಕ್ಷಣಿಕ ವರ್ಷ ಆರಂಭವಾಗಿದಿದ್ದು ಪಾಸಿಟಿವಿಟಿ ಕಡಿಮೆಯಾಗದ ಹಿನ್ನಲೆಯಲ್ಲಿ ರಾಜ್ಯದ 11 ಜಿಲ್ಲೆಗಳನ್ನು ಹೊರತು ಪಡಿಸಿ ಇನ್ನೂಳಿದ 19 ಜಿಲ್ಲೆಗಳಲ್ಲಿ ಲಾಕ್ ಡೌನ್ ಸಡಿಲಿಕೆ ಮಾಡಲಾಗಿದೆ. ಇದರೊಂದಿಗೆ ಇಂದಿನಿಂದ ಶೈಕ್ಷಣಿಕ ವರ್ಷ ಆರಂಭವಾಗಿದ್ದು ಬಸ್ ಇಲ್ಲದಿದ್ದ ರೂ ಕೂಡಾ ಅನಿವಾರ್ಯವಾಗಿ ಶಾಲೆಗೆ ಹೋಗುವ ಪರಸ್ಥಿತಿ ನಮ್ಮ ಶಿಕ್ಷಕರಿಗೆ ಒದಗಿ ಬಂದಿದ್ದು ಇನ್ನೂ ಪ್ರಮುಖವಾಗಿ ಮಹಿಳಾ ಶಿಕ್ಷಕಿಯರ ಪಾಡು ಹೇಳ ತಿರದು ಒಂದು ಕಡೆ ಬಸ್ ಇಲ್ಲ ಮತ್ತೊಂದು ಕಡೆಗೆ ಬಿಟ್ಟು ಬಿಡಲಾರದ ಮಳೆ ಹೀಗಾಗಿ ಶಿಕ್ಷಕರ ನರಕ ಯಾತನೆಯ ಸಮಸ್ಯೆ ಕುರಿತಂತೆ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಧ್ವನಿ ಎತ್ತಿದ್ದಾರೆ.

ಹೌದು ಸಧ್ಯ ಲಾಕ್ ಡೌನ್ ಇಲ್ಲದ 19 ಜಿಲ್ಲೆಗಳಲ್ಲಿ ಬಸ್ ಸಂಚಾರವಿಲ್ಲ ಹೀಗಾಗಿ ಶಿಕ್ಷಕರಿಗೆ ತುಂಬಾ ತುಂಬಾ ತೊಂದರೆಯಾಗುತ್ತಿದ್ದು ಕೂಡಲೇ ಇವರಿ ಗೂ ಕೂಡಾ ಮನೆಯಿಂದ ಕೆಲಸವನ್ನು ಮಾಡಲು ಅವಕಾಶವನ್ನು ನೀಡಬೇಕು ಕೂಡಲೇ ಆದೇಶವನ್ನು ಮಾಡುವಂತೆ ವಿಧಾನ ಪರಿಷತ್ ಸಭಾಪತಿ ಬಸವ ರಾಜ ಹೊರಟ್ಟಿ ಅವರು ಧ್ವನಿ ಎತ್ತಿದ್ದಾರೆ.ಈ ಕುರಿತಂ ತೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರಿಗೆ ಪತ್ರವನ್ನು ಬರೆದು ಒತ್ತಾಯವನ್ನು ಮಾಡಿ 19 ಜಿಲ್ಲೆಗಳ ಶಿಕ್ಷಕರ ಪರವಾಗಿ ಧ್ವನಿ ಎತ್ತಿದ್ದು ಇವರ ಮನವಿಗೆ ಆದ್ರೂ ಶಿಕ್ಷಣ ಸಚಿವರು ಸ್ಪಂದಿಸುತ್ತಾ ರೆನಾ ಅಥವಾ ಮತ್ತೆ ಏನನ್ನಾದರೂ ಹೇಳುತ್ತಾರೆನಾ ಎಂಬುದನ್ನು ಕಾದು ನೋಡಬೇಕು ಇದರ ನಿರೀಕ್ಷೆ ಯಲ್ಲಿ ನಾಡಿನ 19 ಜಿಲ್ಲೆಗಳ ಶಿಕ್ಷಕರಿದ್ದು ಏನು ಮಾಡುತ್ತಾರೆ ಎಂಬುದನ್ನು ಕಾದು ನೋಡಬೇಕು