ಹುಬ್ಬಳ್ಳಿ –
ಹುಬ್ಬಳ್ಳಿಯ ನವನಗರದಲ್ಲಿ ನಡೆದ ಪೊಲೀಸರ ಮತ್ತು ವಕೀಲರ ನಡುವಿನ ಪ್ರಕರಣದ ತನಿಖೆಯನ್ನು ಹುಬ್ಬಳ್ಳಿಯ ವಿದ್ಯಾನಗರ ಚಾರ್ಲಿ ಆರಂಭ ಮಾಡಿದ್ದಾರೆ.ನವನಗರದಲ್ಲಿ ಕಳೆದ ಎರಡು ದಿನಗಳ ಹಿಂದೆ ನ್ಯಾಯವಾದಿ ವಿನೋದ ಪಾಟೀಲ್ ಇನ್ನಿಬ್ಬರೊಂದಿಗೆ ಸೇರಿಕೊಂಡು ನವನಗರದ ಕರ್ನಾಟಕ ಸರ್ಕಲ್ ಬಳಿ ಯಾವುದೇ ಒಂದು ವಿಚಾರಕ್ಕೇ ಸಂಭಂಧಿಸಿದಂತೆ ರೌಡಿಶೀಟರ್ ಪ್ರವೀಣ ರಘುನಾಥ ಪೂಜಾರಿ , ಮಲ್ಲಯ್ಯ ಹಿರೇಮಠ ಹಾಗೂ ವಿನೋದ ಪಾಟೀಲ ಜೋರಾಗಿ ಹೊಡೆದಾಡುತ್ತಾ ಬೈದಾಡುತ್ತಾ ಗಲಾಟೆ ಮಾಡುತ್ತಿದ್ದರು.ಯಾಕೇ ಗಲಾಟೆ ಮಾಡಿಕೊಳ್ಳುತ್ತಿದ್ದಿರಾ ಹೋಗಿ ಇಲ್ಲಿಂದ ಎಂದು ಹೇಳಿದ ಪೊಲೀಸರ ವಿರುದ್ದವೇ ಮೂರು ಜನರು ತಿರುಗಿ ಬಿದ್ದು ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದರು.ಇದನ್ನು ಗಂಭೀರವಾಗಿ ತಗೆದುಕೊಂಡ ನವನಗರ ಇನಸ್ಪೇಕ್ಟರ್ ವಿನೋದ ಪಾಟೀಲ ಸೇರಿದಂತೆ ಮೂವರ ಮೇಲೆ ಪ್ರಕರಣ ದಾಖಲು ಮಾಡಿದ್ದರು. ದೂರನ್ನು ನವನಗರ ಇನಸ್ಪೇಕ್ಟರ್ ಪ್ರಭು ಸೂರಿನ್ ನೀಡಿದ್ದಾರೆ ಹೀಗಾಗಿ ತನಿಖೆಗೆ ಯಾರು ಕೂಡಾ ತಕರಾರು ಮಾಡಬಾರದೆಂಬ ಉದ್ದೇಶದಿಂದ ಕಾನೂನು ಮತ್ತು ಸುವ್ಯವಸ್ಥೆಯ ಡಿಸಿಪಿ ರಾಮರಾಜನ್ ಈ ಒಂದು ಪ್ರಕರಣದ ತನಿಖೆಯ ಜವಾಬ್ದಾರಿಯನ್ನು ಹುಬ್ಬಳ್ಳಿಯ ವಿದ್ಯಾನಗರ ಇನಸ್ಪೇಕ್ಟರ್ ಆನಂದ ವನಕುದರಿಯವರಿದೆ ನೀಡಿದ್ದಾರೆ. ಹಿರಿಯ ಅಧಿಕಾರಿಗಳು ಪ್ರಕರಣದ ತನಿಖೆಯ ಜವಾಬ್ದಾರಿಯನ್ನು ನೀಡುತ್ತಿದ್ದಂತೆ ಇತ್ತ ತನಿಖೆಯನ್ನು ಇನಸ್ಪೇಕ್ಟರ್ ಆನಂದ ವನಕುದರಿ ಆರಂಭ ಮಾಡಿದ್ದಾರೆ.

ನಿನ್ನೇ ಸಂಜೆ ಹಿರಿಯ ಅಧಿಕಾರಿಗಳ ಸೂಚನೆಯಂತೆ ರಾತ್ರಿಯೇ ನವನಗರ ಪೊಲೀಸ್ ಠಾಣೆಗೆ ತೆರಳಿ ಪ್ರಕರಣದ ಪೈಲ್ ನ್ನು ತಗೆದುಕೊಂಡು ಬಂದು ತನಿಖೆ ಆರಂಭ ಮಾಡಿದ್ದಾರೆ. ನಿನ್ನೇ ತಡರಾತ್ರಿಯವರೆಗೆ ಕೇಸ್ ಅಧ್ಯಯನ ಮಾಡಿ ಇಂದು ಬೆಳಿಗ್ಗೆಯಿಂದಲೇ ತನಿಖೆಯನ್ನು ಮಾಡ್ತಾ ಇದ್ದಾರೆ.ಇನ್ನೂ ಇದೇ ವೇಳೆ ಸುದ್ದಿ ಸಂತೆಯ ವೇಬ್ ನ್ಯೂಸ್ ನೊಂದಿಗೆ ಮಾತನಾಡಿದ ಇನಸ್ಪೇಕ್ಟರ್ ಆನಂದ ವನಕುದರಿಯವರು ಹೌದು ನವನಗರದ ಗಲಾಟೆ ಪ್ರಕರಣದ ತನಿಖೆಯನ್ನು ನಾನೇ ಮಾಡುವಂತೆ ಹಿರಿಯ ಅಧಿಕಾರಿಗಳು ಹೇಳಿದ್ರು ಹೀಗಾಗಿ ತನಿಖೆಯ ಪೈಲ್ ನ್ನು ಈಗಾಗಲೇ ತಗೆದುಕೊಂಡು ಆರಂಭ ಮಾಡಿದ್ದೇನೆ ಎಂದರು.