ವಿಜಯನಗರ –
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಹಿತ ರಕ್ಷಣೆಗೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಕ್ರಿಯಾಶೀಲ ರಾಜ್ಯಾಧ್ಯಕ್ಷರಾದ ಸಿ ಎಸ್ ಷಡಾಕ್ಷರಿ ಯವರ ನೇತೃತ್ವದಲ್ಲಿ ಕಂಕಣ ಬದ್ದವಾಗಿದ್ದು ಈಗಾಗಲೇ ನೌಕರರ ಹಿತ ರಕ್ಷಣೆಗಾಗಿ ಹಲವಾರು ಆದೇಶಗಳನ್ನು ಮಾಡಿಸಿದ್ದು 7ನೇ ವೇತನ ಆಯೋಗವನ್ನು ಅಕ್ಟೋಬರ್ ತಿಂಗಳಲ್ಲಿ ರಚನೆ ಮಾಡುವ ಮೂಲಕ ಸರ್ಕಾರಿ ನೌಕರರ ಸಂಘದ ಬೇಡಿಕೆಯನ್ನು ಈಡೇರಿಸುವುದಾಗಿ ಸ್ವತಃ ಮುಖ್ಯಮಂತ್ರಿ ಗಳಾದ ಬಸವರಾಜ ಬೊಮ್ಮಾಯಿ ಯವರು ವಿಧಾನ ಸೌಧದಲ್ಲಿ ನಡೆದ ಸರ್ಕಾರಿ ನೌಕರರ ದಿನಾಚರಣೆ ಕಾರ್ಯಕ್ರಮದಲ್ಲಿ ಘೋಷಣೆ ಮಾಡಿದ್ದು ಶೀಘ್ರವಾಗಿ ಅಯೋಗ ರಚನೆ ಆಗಲಿದೆ.

ಜಿಲ್ಲಾ ನೌಕರರ ಪರವಾಗಿ ಸಂಘವು ಈ ಒಂದು ಮಾಹಿತಿಯನ್ನು ನೀಡಿದ್ದು ಎಂಬುದನ್ನು ಖಚಿತ ಪಡಿಸುತ್ತೇವೆ ಮತ್ತು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಹೋರಾಟಗಳಿಗೆ ಮತ್ತು ಕಾರ್ಯಗಳಿಗೆ ವಿಜಯನಗರ ಜಿಲ್ಲಾ ಸರ್ಕಾರಿ ನೌಕರರು ಬದ್ದರಿವುದಾಗಿ ತಿಳಿಯಪಡಿಸುತ್ತೇವೆ ಎಂದಿದ್ದಾರೆ
ಮಲ್ಲಿಕಾರ್ಜುನ ಗೌಡ ಜಿಲ್ಲಾಧ್ಯಕ್ಷರು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ, ವಿಜಯನಗರ ಜಿಲ್ಲೆ,ಕಡ್ಲಿ, ವೀರಭದ್ರೇಶ,ಜಿಲ್ಲಾ ಪ್ರಧಾನ ಕಾರ್ಯದರ್ಶಿ,ವಿಜಯನಗರ ಜಿಲ್ಲಾ ಸರ್ವ ಪದಾಧಿಕಾರಿಗಳು,ಕೊಟ್ಟೂರು, ಕೂಡ್ಲಿಗಿ, ಹರಪನಹಳ್ಳಿ, ಹಡಗಲಿ, ಹಗರಿ ಬೊಮ್ಮನಹಳ್ಳಿ ತಾಲೂಕು ಅಧ್ಯಕ್ಷರುಗಳು ಮತ್ತು ಸರ್ವ ಪದಾಧಿಕಾರಿಗಳು