ವಿಜಯನಗರ –
ಬಜೆಟ್ ಮೇಲಿನ ಚರ್ಚೆಗೆ ಉತ್ತರ ನೀಡುವ ಸಮಯದಲ್ಲಿ ಮಾನ್ಯ ಮುಖ್ಯಮಂತ್ರಿ ಗಳಾದ ಸನ್ಮಾನ್ಯ ಬಸವರಾಜ ಬೊಮ್ಮಾಯಿ ಯವರು ಕರ್ನಾಟಕ ರಾಜ್ಯ ಸರ್ಕಾರಿ ನೌಕರರಿಗೆ ಕೇಂದ್ರ ಸರ್ಕಾರಿ ನೌಕರರಿಗೆ ನೀಡುವ ವೇತನ ಭತ್ಯೆಗಳನ್ನು ನೀಡಲು ರಾಜ್ಯ ಸರ್ಕಾರ ಸಿದ್ದವಿದ್ದು ಈ ಬಗ್ಗೆ ವೇತನ ಆಯೋಗ ರಚನೆ ಮಾಡಿ ವರದಿಯನ್ನಾಧರಿಸಿ ವೇತನ ಹೆಚ್ಚು ಮಾಡಲು ಸಿದ್ದವಿರುವುದಾಗಿ ಸ್ಪಷ್ಟ ಘೋಷಣೆ ಮಾಡಿರುವುದನ್ನು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಜಿಲ್ಲಾ ಘಟಕ ವಿಜಯನಗರ ಸ್ವಾಗತಿ ಸುತ್ತದೆ

ಈಗಾಗಲೇ ದೇಶದಲ್ಲಿ 25 ಕ್ಕಿಂತ ಹೆಚ್ಚು ರಾಜ್ಯಗಳಲ್ಲಿ ರಾಜ್ಯ ಸರ್ಕಾರಿ ನೌಕರರು ಕೇಂದ್ರ ಸರಿ ಸಮಾನ ವೇತನ ಪಡೆ ಯತ್ತಿದ್ದು ಕರ್ನಾಟಕ ರಾಜ್ಯದಲ್ಲಿ ವಂಚಿತರಾಗಿದ್ದು ಇದು ನಮ್ಮ ನಲವತ್ತು ವರ್ಷಗಳ ಕನಸಾಗಿತ್ತು ಇದನ್ನು ಈಡೇರಿ ಸಿದ ಮಾನ್ಯ ಮುಖ್ಯಮಂತ್ರಿಗಳಿಗೆ,ರಾಜ್ಯದ ಸಚಿವರು ಗಳಿಗೆ,ಶಾಸಕರುಗಳಿಗೆ,ನಿಕಟ ಪೂರ್ವ ಮುಖ್ಯ ಮಂತ್ರಿಗ ಳಾದ ಸನ್ಮಾನ್ಯ ಬಿ ಎಸ್ ಯಡಿಯೂರಪ್ಪ ನವರಿಗೆ ಮತ್ತು ಹಗಲಿರುಳೂ ಶ್ರಮಿಸಿದ ಕ್ರಿಯಾಶೀಲ ರಾಜ್ಯಾಧ್ಯಕ್ಷರಾದ ಸಿ ಎಸ್ ಷಡಾಕ್ಷರಿ ಯವರಿಗೆ ಜಿಲ್ಲೆಯ ಸಮಸ್ತ ಸರ್ಕಾರಿ ನೌಕರರ ಪರವಾಗಿ ಅನಂತ ಅನಂತ ಧನ್ಯವಾದಗಳು
ಜಿ ಮಲ್ಲಿಕಾರ್ಜುನ ಗೌಡ
ಜಿಲ್ಲಾಧ್ಯಕ್ಷರು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ, ವಿಜಯನಗರ ಜಿಲ್ಲೆ
ಕಡ್ಲಿ, ವೀರಭದ್ರೇಶ
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮತ್ತು ಸರ್ವ ಸದಸ್ಯರು