ಕಾರವಾರ –
ಗ್ರಾಮ ಲೆಕ್ಕಾಧಿಕಾರಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಾರವಾರದಲ್ಲಿ ನಡೆದಿದ.ಹೌದು ಈಶ್ವರ ಭಟ್ ಆತ್ಮಹತ್ಯೆ ಮಾಡಿಕೊಂಡ ಕಂದಾಯ ಇಲಾಖೆಯ ನೌಕರನಾಗಿದ್ದು ಕಾರವಾರದ ಎಸಿ ಕಚೇರಿಯ ಗ್ರಾಮ ಲೆಕ್ಕಾಧಿಕಾರಿಯಾಗಿದ್ಜರು.ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದು ನಗರದ ಖಾಸಗಿ ಹೋಟೆಲ್ನಲ್ಲಿ ಈ ಒಂದು ಘಟನೆ ನಡೆದಿದೆ. ಹೊನ್ನಾವರ ಮೂಲದ ಇವರು ಕಾರವಾರದ ಎಸಿ ಕಚೇರಿ ಯಲ್ಲಿ ಗ್ರಾಮ ಲೆಕ್ಕಾಧಿಕಾರಿಯಾಗಿದ್ದರು.

ಗ್ರಾಮ ಲೆಕ್ಕಾಧಿ ಕಾರಿ ಈಶ್ವರ ಭಟ್ ನಗರದ ಖಾಸಗಿ ಹೋಟೆಲ್ ನಲ್ಲಿ ರೂಮ್ ಪಡೆದಿದ್ದರು.ಈಶ್ವರ ಅನಾರೋ ಗ್ಯದ ಕಾರಣ ದಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಹೇಳಿ ಪತ್ನಿ ಹಾಗೂ ಪೊಲೀಸರಿಗೆ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿ ದ್ದಾರೆ.ನಾನು ನಿಮಗಾಗಿ ಆಸ್ತಿ ಮಾಡಿಲ್ಲ ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎಂದು ಪತ್ನಿಗೆ ಪತ್ರದಲ್ಲಿ ಕ್ಷಮೆಯಾ ಚನೆ ಮಾಡಿದ್ದಾರೆ.ಈ ಬಗ್ಗೆ ಕಾರವಾರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.