ಕುಂದಗೋಳ –
ಸಂತೋಷ್ ಲಾಡ್ ಹುಟ್ಟು ಹಬ್ಬಕ್ಕಾಗಿ ಬರಿಗಾಲಿನಲ್ಲಿ ಪಾದಯಾತ್ರೆ ಹೊರಟ ಗ್ರಾಮ ಪಂಚಾಯತ ಸದಸ್ಯ – ಅಲ್ಲಾಪೂರ ಗ್ರಾಮದಿಂದ ಸಿದ್ದಾರೂಢ ದೇವಸ್ಥಾನದವರೆಗೆ ಪಾದಯಾತ್ರೆ ಮೂಲಕ ಸಂತೋಷ ಲಾಡ್ ರ ಆಯುಷ್ಯ ಆರೋಗ್ಯಕ್ಕಾಗಿ ವಿಶೇಷ ಪೂಜೆ ಸಲ್ಲಿಸಲಿರುವ ಮಲ್ಲಿಕಾರ್ಜುನ ರಡ್ಡೇರ
ಸಾಮಾನ್ಯವಾಗಿ ನಾಯಕರ ಹುಟ್ಟು ಹಬ್ಬವನ್ನು ಅವರವರ ಅಭಿಮಾನಿಗಳು ವಿಶೇಷವಾಗಿ ಆಚರಣೆ ಮಾಡುತ್ತಾರೆ ಹೌದು ಆದರೆ ಇಲ್ಲೊಬ್ಬರು ಕಾರ್ಮಿಕ ಸಚಿವ ಸಂತೋಷ ಲಾಡ್ ರ ಹುಟ್ಟು ಹಬ್ಬವನ್ನು ವಿಶೇಷವಾಗಿ ಅರ್ಥ. ಪೂರ್ಣವಾಗಿ ಆಚರಣೆ ಮಾಡಲು ಮುಂದಾ ಗಿದ್ದಾರೆ.
ಕುಂದಗೋಳ ತಾಲ್ಲೂಕಿನ ಅಲ್ಲಾಪೂರ ಗ್ರಾಮ ಪಂಚಾಯತ ಸದಸ್ಯರಾಗಿರುವ ಮಲ್ಲಿಕಾರ್ಜುನ ರಡ್ಡೇರ ಅವರೇ ಸಚಿವ ಸಂತೋಷ ಲಾಡ್ ಅವರ ಹುಟ್ಟು ಹಬ್ಬದ ಹಿನ್ನಲೆಯಲ್ಲಿ ಗ್ರಾಮದಿಂದ ಹುಬ್ಬಳ್ಳಿಯ ಸಿದ್ದಾರೂಢ ದೇವಸ್ಥಾನದವರೆಗೆ ಪಾದಯಾತ್ರೆ ಮಾಡುತ್ತಿದ್ದಾರೆ.ಫೆಬ್ರುವರಿ 27 ರಂದು ಹುಟ್ಟು ಹಬ್ಬ ಹಿನ್ನಲೆಯಲ್ಲಿ ಮಲ್ಲಿಕಾರ್ಜು ನ ರಡ್ಡೇರ ಅವರು ಅಲ್ಲಾಪೂರ ಗ್ರಾಮದಿಂದ ಬರಿಗಾಲಿನಲ್ಲಿ ಪಾದಯಾತ್ರೆಯನ್ನು ಮಾಡಲಿದ್ದಾರೆ
ಯಾವಾಗಲೂ ಪಕ್ಷಾತೀತ ಜಾತ್ಯತೀತವಾಗಿರುವ ಇವರು ಮೊದಲ ಬಾರಿಗೆ ಕಾರ್ಮಿಕ ಇಲಾಖೆ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ರಾದ ಸಂತೋಷ ಲಾಡ್ ಅವರ ಹುಟ್ಟು ಹಬ್ಬದ ಪ್ರಯುಕ್ತ ಅಲ್ಲಾಪೂರ ಗ್ರಾಮದಿಂದ ಹುಬ್ಬಳ್ಳಿ ಸಿದ್ಧಾರೂಢ ಮಠದ ವರೆಗೆ ಈ ಒಂದು ಪಾದಯಾ ತ್ರೆಯನ್ನು ಮಾಡುತ್ತಿದ್ದಾರೆ.ಕಾರ್ಮಿಕ ಇಲಾಖೆ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ರಾದ ಸಂತೋಷ ಲಾಡ್ ಅವರು ಹುಟ್ಟು ಹಬ್ಬದ ಪ್ರಯುಕ್ತ ಅಲ್ಲಾಪೂರ ಗ್ರಾಮದಿಂದ 14 ಕಿಲೋ ಮೀಟರ್ ಹುಬ್ಬಳ್ಳಿ ಸಿದ್ಧಾರೂಢ ಮಠದವರೆಗೆ ಬರಿಗಾಲಿನಲ್ಲಿ ಪಾದಯಾತ್ರೆ ಮೂಲಕ ಮಠಕ್ಕೆ ಭೇಟಿ ನೀಡಿ
ಅವರ ಹೆಸರಿನಲ್ಲಿ ಪೂಜೆ ಸಲ್ಲಿಸಿ ಅವರಿಗೆ ಸಿದ್ದಾರೂಢ ಅಜ್ಜ ಆಯುಷ್ಯ ಆರೋಗ್ಯ ಕೊಟ್ಟು ಜನ ಸೇವೆ ಮಾಡುವ ಶಕ್ತಿ ಕೊಡಲಿ ಎಂದು ಪ್ರಾರ್ಥನೆಯನ್ನು ಮಾಡಲಿದ್ದಾರೆ.ನೋಡಿದ ಸಚಿವರಲ್ಲಿ ಅತಿ ಬುದ್ಧಿವಂತಿಕೆ ಸಮಾಜ ಸೇವೆ ಬಡವರ ಬಂಧು ಅಭಿವೃದ್ಧಿ ಕಾರ್ಯ ಮಾಡಲು ಸದಾ ಸಿದ್ಧರಾಗಿರುವ ಸಂತೋಷ ಲಾಡ್ ಅವರು ಜನರ ಮದ್ಯೆ ಜನರ ಸಮಸ್ಯೆ ಸ್ಪಂದಿಸುವ ನಾಯಕರಾಗಿದ್ದು
ಹೆಮ್ಮೆಯ ಕಾರ್ಮಿಕ ಇಲಾಖೆ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ ಲಾಡ್ ಅವರಿಗೆ ಹುಟ್ಟು ಹಬ್ಬದ ಶುಭಾಶಯಗ ಳನ್ನು ಕೂಡಾ ಮಲ್ಲಿಕಾರ್ಜುನ ರಡ್ಡೇರ ಅವರು ತಿಳಿಸಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಕುಂದಗೋಳ…..