ಧಾರವಾಡ
ಯೋಗೀಶಗೌಡ ಹತ್ಯೆ ಪ್ರಕರಣದಲ್ಲಿ ಸಾಕ್ಷ್ಯನಾಶ ಕೇಸ್ ಜನಪ್ರತಿನಿಧಿಗಳ ಕೋರ್ಟ್‌ಗೆ ಶಿಫ್ಟ್ ವಿಚಾರ ಕುರಿತು ಇಂದು ಪ್ರಮುಖ ತೀರ್ಪು ಪ್ರಕಟವಾಗಲಿದೆ ಈಗಾಗಲೇ ವಾದ ವಿವಾದಗಳನ್ನು ಆಲಿಸಿರುವ ನ್ಯಾಯಮೂರ್ತಿಗಳು ಇಂದು ತೀರ್ಪನ್ನು ಪ್ರಕಟಿಸ ಲಿದ್ದಾರೆ.ಧಾರವಾಡದ ಪ್ರಧಾನ ದಿವಾಣಿ ಮತ್ತು ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ತೀರ್ಪನ್ನು ಕಾಯ್ದಿರಿಸಲಾಗಿದ್ದು ಇಂದು ಪ್ರಕಟವಾಗಲಿದೆ.
ಈಗಾಗಲೇ ಪ್ರಮುಖ ಪ್ರಕರಣವೊಂದು ಬೆಂಗಳೂರಿನ ಜನಪ್ರತಿನಿಧಿಗಳ ಕೋರ್ಟ್‌ಗೆ ಶಿಫ್ಟ್ ಮಾಡಲು ಬಂದಿರುವ ಕೋರಿಕೆ ಬಂದಿದೆ.ಹೀಗಾಗಿ ಸಾಕ್ಷ್ಯ ನಾಶದ ಪ್ರಕರಣವನ್ನು ಅಲ್ಲಿಗೆ ಶಿಪ್ಟ್ ಮಾಡಲು ವಿನಯ ಕುಲಕರ್ಣಿ ಪರ ವಕೀಲರು ಕೇಳಿದ್ದಾರೆ
ಈ ಕೇಸ್‌ನ್ನೂ ಜನಪ್ರತಿನಿಧಿಗಳ ಕೋರ್ಟ್‌ಗೆ ಶಿಫ್ಟ್ ಮಾಡಲು ಕೋರಿಕೆ ಹಿನ್ನೆಲೆಯಲ್ಲಿ ವಿನಯ ಕುಲಕರ್ಣಿ ಸೇರಿ 8 ಜನರ ಮೇಲೆ ಇರುವ ಕೇಸ್ ನ ವಿಚಾರಣೆ ಈಗಾಗಲೇ ಮುಗಿದಿದೆ.
ಇಂದಿಗೆ ತೀರ್ಪು ಕಾಯ್ದಿರಿಸಿರೋ ನ್ಯಾಯಾಧೀಶರು ಈಗಾಗಲೇ ವಾದ ಪ್ರತಿವಾದ ಆಲಿಸಿದ್ದಾರೆ. ಸಾಕ್ಷ್ಯನಾಶ ಕೇಸ್‌ನಲ್ಲಿ ಎ 1 ಆರೋಪಿಯಾಗಿರುವ ವಿನಯ ಕುಲಕರ್ಣಿ ಯೋಗೀಶ ಕೊಲೆ ಬಳಿಕ ನಡೆದಿದ್ದ ಸಾಕ್ಷ್ಯ ನಾಶ ವಿದ್ಯಮಾನದ ಪ್ರಕರಣ ಇದಾಗಿದೆ.ಸೆಕ್ಷನ್ 195ಎ ಅಡಿ ನ್ಯಾಯಾಲಯಕ್ಕೆ ಖಾಸಗಿ ದೂರು ದಾಖಲಿಸಿದ್ದ ಸಿಬಿಐ ಒಟ್ಟಾರೆ ಇದೊಂದು ಪ್ರಕರಣ ಏನಾಗಿತ್ತದೆ ಎಂಬುದು ಕುತೂಹಲ ಮೂಡಿಸಿದೆ.