ಧಾರವಾಡ –
ಜಿಲ್ಲಾ ಪಂಚಾಯತ ಸದಸ್ಯ ಯೋಗೀಶಗೌಡ ಕೊಲೆ ಪ್ರಕರಣದಲ್ಲಿ ಬಂಧನವಾಗಿರುವ ಮಾಜಿ ಸಚಿವ ವಿನಯ ಕುಲಕರ್ಣಿ ಜಾಮೀನು ಅರ್ಜಿಯನ್ನು ಮುಂದೂಡಲಾಗಿದೆ.ಕೆಲ ನ್ಯಾಯಾಲಯದಲ್ಲಿ ಜಾಮೀನು ಅರ್ಜಿ ವಜಾಗೊಂಡ ಹಿನ್ನಲೆಯಲ್ಲಿ ಧಾರವಾಡ ಹೈಕೋರ್ಟ್ ನಲ್ಲಿ ಅರ್ಜಿಯನ್ನು ಸಲ್ಲಿಸಿದ್ದರು. ಇಂದು ವಿಚಾರಣೆ ಮಾಡಿದ ಮಾಡಿ ನ್ಯಾಯಾವಾದಿಗಳು ಜಾಮೀನು ಅರ್ಜಿಯನ್ನು ಜನೇವರಿ 6 ಕ್ಕೆ ಮುಂದೂಡಿದರು.

ಹೈಕೋರ್ಟ್ ತಕರಾರು ಅರ್ಜಿ ಸಲ್ಲಿಸಲು ಸಿಬಿಐ ಅಧಿಕಾರಿಗಳು ಕಾಲಾವಶಕಾಶವನ್ನು ಕೇಳಿದ್ದಾರೆ. ಹೀಗಾಗಿ ಕಾಲಾವಕಾಶ ಕೇಳಿದ ಹಿನ್ನಲೆಯಲ್ಲಿ ಸಿಬಿಐ ಅಧಿಕಾರಿಗಳಿಗೆ ಕಾಲಾವಕಾಶವನ್ನು ನೀಡಿ ವಿಚಾರಣೆಯನ್ನು ಮುಂದೂಡಲಾಯಿತು.

ಧಾರವಾಡ ಹೈಕೋರ್ಟ್ ಗೆ ಇಂದು ಸಿಬಿಐ ಅಧಿಕಾರಿಗಳು ತಕರಾರು ಅರ್ಜಿಯನ್ನು ಸಲ್ಲಿಸಬೇಕಾಗಿತ್ತು. ಸಲ್ಲಿಸದ ಕಾರಣದಿಂದಾಗಿ ಸಿಬಿಐ ಕಾಲಾವಕಾಶ ಕೇಳಿದ್ದಕ್ಕೆ ವಿಚಾರಣೆಯನ್ನು ನ್ಯಾಯವಾದಿಗಳು ಅರ್ಜಿಯನ್ನು ಜನೇವರಿ 6 ಕ್ಕೆ ಮುಂದೂಡಿದರು.