ಧಾರವಾಡ –
ಯೋಗೇಶಗೌಡ ಕೊಲೆ ಪ್ರಕರಣದಲ್ಲಿ ಬಂಧನವಾಗಿ ಜೈಲು ಸೇರಿರುವ ಮಾಜಿ ಸಚಿವ ವಿನಯ ಕುಲಕರ್ಣಿ ಜಾಮೀನು ಅರ್ಜಿ ವಿಚಾರಣೆ ಇಂದು ನಡೆಯಲಿದೆ. ಧಾರವಾಡದ ಸಿಬಿಐ ವಿಶೇಷ ಕೋರ್ಟ್ ಜಾಮೀನು ಅರ್ಜಿಯ ವಿಚಾರಣೆ ನಡೆಯಲಿದೆ. ಜಾಮೀನಿಗಾಗಿ ನವೆಂಬರ್ 27 ರಂದು ವಿನಯ ಕುಲಕರ್ಣಿ ಅರ್ಜಿ ಸಲ್ಲಿಸಿದ್ದರು. ವಿನಯ ಕುಲಕರ್ಣಿ ಜಾಮೀನು ಅರ್ಜಿಗೆ ಸಿಬಿಐ ಪರ ವಕೀಲರು ತಕರಾರು ಅರ್ಜಿ ಸಲ್ಲಿಸಿದ್ದರು. ಈಗಾಗಲೇ ವಿನಯ್ ಕುಲಕರ್ಣಿ ಹಾಗೂ ಸಿಬಿಐ ಪರ ವಕೀಲರಿಂದ ವಾದ ಮಡಂನೆಯನ್ನು ಆಲಿಸಿರುವ ನ್ಯಾಯಾಧೀಶರು ಇಂದು ಮತ್ತೆ ಅರ್ಜಿಯ ವಿಚಾರಣೆ ಮಾಡಲಿದ್ದಾರೆ.
ಇಂದಾದ್ರೂ ವಿನಯ್ ಕುಲಕರ್ಣಿ ಗೆ ಜಾಮೀನು ಸಿಗುತ್ತಾ ಇಲ್ಲವೇ ಮತ್ತೇ ಜೈಲಾ ಎಂಬ ಭವಿಷ್ಯ ನಿರ್ಧಾರವಾಗಲಿದೆ. ಇನ್ನೂ ಈಗಾಗಲೇ ಮೂರು ದಿನಗಳ ಹಿಂದೆಯಷ್ಟೇ ನ್ಯಾಯಾಲಯ ಡಿಸೆಂಬರ್ 21 ರವರೆಗೆ ನ್ಯಾಯಾಂಗ ಬಂಧನಕ್ಕೇ ಒಪ್ಪಿಸಿದ್ದು ನಾಯಂಗ ಬಂಧನದಲ್ಲಿರುವ ವಿನಯ ಕುಲಕರ್ಣಿ ಸದ್ಯ ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿದ್ದಾರೆ.