ಧಾರವಾಡ –
ಯೋಗೀಶಗೌಡ ಕೊಲೆ ಪ್ರಕರಣದಲ್ಲಿ ಬಂಧನವಾಗಿರುವ ಮಾಜಿ ಸಚಿವ ವಿನಯ ಕುಲಕರ್ಣಿ ಜಾಮೀನು ಅರ್ಜಿ ವಿಚಾರಣೆ ಇಂದು ನಡೆಯಲಿದೆ. ಈಗಾಗಲೇ ಧಾರವಾಡದ ಕೆಳ ನ್ಯಾಯಾಲಯ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ್ದು ಹೀಗಾಗಿ ಧಾರವಾಡದ ಹೈಕೋರ್ಟ್ ಗೆ ಈಗಾಗಲೇ ಜಾಮೀನು ಅರ್ಜಿ ಸಲ್ಲಿಸಿದ್ದಾರೆ.

ಈ ನಡುವೆ ಮಾಜಿ ಸಚಿವ ವಿನಯ ಕುಲಕರ್ಣಿ ಜಾಮೀನು ಅರ್ಜಿ ವಿಚಾರಣೆ ಇಂದು ನಡೆಯಲಿದೆ. ಧಾರವಾಡ ಹೈಕೋರ್ಟ್‌ನಲ್ಲಿ ಇಂದು ವಿಚಾರಣೆ ನಡೆಯಲಿದೆ.ವಿನಯ ಕುಲಕರ್ಣಿ ಜಾಮೀನಿಗೆ, ತಕರಾರು ಸಲ್ಲಿಸಲಿರೊ ಸಿಬಿಐ ಮತ್ತೆ ಸಿಬಿಐ ಪರ ವಕೀಲರಿಂದ ತಕರಾರು ಸಲ್ಲಿಕೆ ಸಾಧ್ಯತೆ ಇದೆ.

ಸಿಬಿಐ ತಕರಾರು ಆಧರಿಸಿ ಜಾಮೀನು ಅರ್ಜಿ ವಿಚಾರಣೆ ನಡೆಯಲಿದೆ.ಕಳೆದ ಎರಡು ತಿಂಗಳಿನಿಂದ ಹಿಂಡಲಗಾ ಜೈಲಿನಲ್ಲಿರೋ ವಿನಯ ಕುಲಕರ್ಣಿ ಅವರಿಗೆ ಹೈಕೋರ್ಟ್ ನಲ್ಲಾದರೂ ಸಿಹಿ ಸುದ್ದಿ ಸಿಗುತ್ತದೆನಾ ಎಂಬುದನ್ನು ಕಾದು ನೋಡಬೇಕು.