ಧಾರವಾಡ –
ಧಾರವಾಡದಲ್ಲಿ ಮಾಜಿ ಸಚಿವ ವಿನಯ ಕುಲಕರ್ಣಿ ಸಹೋದರ ವಿಜಯ ಕುಲಕರ್ಣಿ ಕಾರು ಅಪಘಾತ ಪ್ರಕರಣದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಇಬ್ಬರು ಸಾವಿಗೀಡಾಗಿದ್ದಾರೆ.

ಧಾರವಾಡದ ಹೊಸ ಬಸ್ ನಿಲ್ದಾಣ ಬಳಿಯ ಕೆವಿಜಿ ಬ್ಯಾಂಕ್ ಮುಂದೆ ರಸ್ತೆ ಪಕ್ಕದಲ್ಲಿ ನಿಂತುಕೊಂಡಿದ್ದ ಬೈಕ್ ಗಳಿಗೆ ವಿಜಯ ಕುಲಕರ್ಣಿ ಪ್ರಯಾಣಿಸುತ್ತಿದ್ದ ಕಾರು ಬೈಕ್ ಗಳಿಗೆ ಗುದ್ದಿದ್ದು ಐದಾರು ಬೈಕ್ ಗಳು ಜಖಂ ಆಗಿದ್ದು ಇದರಲ್ಲಿ ಇಬ್ಬರು ತೀವ್ರವಾಗಿ ಗಾಯಗೊಂಡಿದ್ದರು.

ತೀವ್ರವಾಗಿ ಗಾಯಗೊಂಡಿದ್ದ ಇಬ್ಬರನ್ನು ಕೂಡಲೇ ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಲಾಯಿತು ಚಿಕಿತ್ಸೆ ಶೇಖರ್ ಮತ್ತು ಚರಣ್ ತೀವ್ರವಾಗಿ ಗಾಯಗೊಂಡಿ ದ್ದರು ಇವರಿಬ್ಬರೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಸಧ್ಯ ಸಾವಿಗೀಡಾಗಿದ್ದಾರೆ.

ಚರಣ್ ಮೌನೇಶ್ವರ ನಾಯಕ ದೇವರ ಹುಬ್ಬಳ್ಳಿ ಮತ್ತು ಶೇಖು ಬಸಪ್ಪ ಉದ್ದಾರ ಸಾವಿಗೀಡಾದವರಾ ಗಿದ್ದಾರೆ.ಇವರಿಬ್ಬರು ಮಾವ ಅಳಿಯನಾಗಿದ್ದು ಇನ್ನೂ ಅರವಿಂದ ಮಲಗೌಡ ಪಾಟೀಲ ಸಾಧನಕೇರಿ ನಿವಾಸಿ ತೀವ್ರವಾಗಿ ಗಾಯಗೊಂಡಿದ್ದು ಜಿಲ್ಲಾ ಆಸ್ಪ ತ್ರೆಗೆ ದಾಖಲಾಗಿ ಚಿಕಿತ್ಸೆಯನ್ನು ಪಡೆದು ಕೊಳ್ಳುತ್ತಿ ದ್ದಾರೆ.

ಇನ್ನೂ ಇಬ್ಬರು ಯುವಕರನ್ನು ಕಳೆದುಕೊಂಡ ಕುಟುಂಬದ ಸದಸ್ಯರ ಆಕ್ರಂದನ ಮುಗಿಲು ಮುಟ್ಟಿ ದ್ದು ಇನ್ನೂ ಈ ಕುರಿತಂತೆ ದೂರನ್ನು ದಾಖಲು ಮಾಡಿಕೊಂಡಿರು ಧಾರವಾಡ ಸಂಚಾರಿ ಪೊಲೀಸ ರು ದೂರನ್ನು ದಾಖಲು ಮಾಡಿಕೊಂಡಿದ್ದು ಕಾರನ್ನು ವಶಕ್ಕೆ ತಗೆದುಕೊಂಡು ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ