ಧಾರವಾಡ –
ಕಳೆದ 15 ವರ್ಷಗಳಿಂದ ನಾಡು ನುಡಿ ವಿಚಾರದಲ್ಲಿ ಏನಾದರೂ ಅನ್ಯಾಯವಾದಾಗ ಒಂದು ರಾಷ್ಟ್ರೀಯ ಪಕ್ಷದಲ್ಲಿ ಇದ್ದುಕೊಂಡು ಹೋರಾಟ ಮಾಡಿ ಸಾಲ ದಂತೆ ಸಾಕಷ್ಟು ಹೋರಾಟ ಮಾಡುತ್ತಿದ್ದ ನಾಯಕ ರಲ್ಲಿ ಧಾರವಾಡದ ರಾಕೇಶ್ ದೊಡಮನಿ ಕೂಡಾ ಒಬ್ಬರು.

ಒಂದು ರಾಷ್ಟ್ರೀಯ ಪಕ್ಷದಲ್ಲಿ ಇದ್ದುಕೊಂಡು ಸಾಮಾನ್ಯ ಕಾರ್ಯಕರ್ತನಾಗಿ ದುಡಿದು ದುಡಿದು ಟಿಕೆಟ್ ಕೊಡದೇ ಕಾರಣಕ್ಕಾಗಿ ಈ ಬಾರಿ ಧಾರವಾಡದ ವಾರ್ಡ್ 4 ರಲ್ಲಿ ಪಕ್ಷೇತರ ಅಭ್ಯರ್ಥಿ ಯಾಗಿ ಸ್ಪರ್ಧೆ ಮಾಡಿದ್ದಾರೆ.

ವಾರ್ಡ್ 4 ರಲ್ಲಿ ಎರಡು ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿಯ ನಡುವೆ ಹತ್ತು ಹಲವಾರು ಸಂಘಟನೆ ಯ ಮುಖಂಡರಾಗಿದ್ದುಕೊಂಡು ಸಾಕಷ್ಟು ಪ್ರಮಾಣ ದಲ್ಲಿ ಒಳ್ಳೋಳ್ಳೆಯ ವಿಚಾರದಲ್ಲಿ ಬೀದಿಗಿಳಿದು ಹೋರಾಟ ಮಾಡಿದ ಇವರು ಈಗ ಜನ ಸೇವೆಗೆ ಮುಂದಾಗಿದ್ದಾರೆ.

ಹೌದು ಈಗ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ವಾರ್ಡ್ 4 ರ ಪಕ್ಷೇತರ ಅಭ್ಯರ್ಥಿಯಾಗಿ ಅಖಾಡಕ್ಕೆ ಇಳಿದಿದ್ದಾರೆ.ಎರಡು ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿಗಳ ನಡುವೆ ಕೆಲವೊಂದಿಷ್ಟು ಒಳ್ಳೇಯ ವಿಚಾರ ಕೆಲಸಗಳನ್ನು ಯೋಜನೆಗಳನ್ನು ಮುಂದಿಟ್ಟುಕೊಂಡು ಹೊಸ ಕನಸು ಹೊಸ ಹೊಸ ಯೋಜನೆಗಳೊಂದಿಗೆ ಸ್ಪರ್ಧೆ ಮಾಡಿದ್ದಾರೆ.

ಸಧ್ಯ ಅಬ್ಬರದ ಪ್ರಚಾರದಲ್ಲಿ ಇವರು ತೊಡಗಿದ್ದಾರೆ. ಮನೆ ಮನೆ ಗೆ ತೆರಳಿ ಪಾದಯಾತ್ರೆ ಮೂಲಕ ಬಿಡುವಿಲ್ಲದೇ ಪ್ರಚಾರವನ್ನು ಮಾಡುತ್ತಿದ್ದು ಹೋದೆಲೆಲ್ಲ ಉತ್ತಮವಾದ ರಿಸ್ಪಾನ್ಸ್ ಕೂಡಾ ಕಂಡು ಬರುತ್ತಿದ್ದು ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿಗಳ ನಡುವೆ ಮನೆ ಮಗನಾಗಿರುವ ನೀವೆ ನಮಗೆ ಬೆಸ್ಟ್ ಎನ್ನುತ್ತಾ ಈ ಬಾರಿ ನಮ್ಮ ಮತ ನಿಮಗೆ ಎನ್ನುತ್ತಾ ಬೆನ್ನು ತಟ್ಟಿ ಕಳಿಸುತ್ತಿದ್ದಾರೆ.

ಹೀಗಾಗಿ ವಾರ್ಡ್ 4 ನಲ್ಲಿ ಈ ಬಾರಿ ಅಭ್ಯರ್ಥಿ ಯಾಗಿರುವ ರಾಕೇಶ್ ದೊಡಮನಿ ಅವರೇ ಬೆಸ್ಟ್ ಎಂದು ಮತದಾರರು ತಿರ್ಮಾನವನ್ನು ಮಾಡಿದ್ದಾರೆ. ಇಂದು ಮುರುಘಾಮಠ ಅಜ್ಜನವರ ಆಶೀರ್ವಾದ ಪಡೆದುಕೊಂಡು ಮೃತ್ಯುಂಜಯ ನಗರ, ರಾಜಾಜಿ ನಗರ್ ಜಿರ್ಲಿ ಫ್ಲಾಟ್ ಮೋರೆ ಪ್ಲಾಟ್ ಹಾಗೂ ಪತ್ರೇಶ್ವರ ನಗರದಲ್ಲಿ ಮತದಾರರ ಮನೆಗೆ ಭೇಟಿ ನೀಡಿ ಮತದಾರ ಬಾಂಧವರಲ್ಲಿ ನಾನು ವಾರ್ಡ್ ನಂಬರ್ ನಾಲ್ಕರ ಪಕ್ಷೇತರ ಅಭ್ಯರ್ಥಿಯಾಗಿ ನನ್ನ ಚಿಹ್ನೆ ವಜ್ರ ಚಿಹ್ನೆಗೆ ಮತವನ್ನು ಹಾಕುವ ಮೂಲಕ ನನಗೆ ಆಶೀರ್ವದಿಸಬೇಕೆಂದು ಹಾಗೂ ವಾರ್ಡ ನಂಬರ್ ನಾಲ್ಕರ ಸಮಗ್ರ ಅಭಿವದ್ಧಿಗೆ ಪಣತೊಟ್ಟು ನಿಂತಿರುವೆ ಎಂದು ಹೇಳಿ ಮತದಾರ ಬಾಂಧವರಲ್ಲಿ ವಿನಂತಿಸಿಕೊಳ್ಳಲಾಯಿತು
