ಬೆಂಗಳೂರು –
ರಾಜ್ಯದ ಶಿಕ್ಷಕರ ಸಮಸ್ಯೆಗಳನ್ನು ಹೊತ್ತುಕೊಂಡು ರಾಜ್ಯದ ರಾಜಧಾನಿ ಬೆಂಗಳೂರಿಗೆ ಸರ್ಕಾರಿ ಗ್ರಾಮೀಣ ಶಿಕ್ಷಕರ ಸಂಘದವರು ತೆರಳಿದ್ದಾರೆ. ಈಗಾಗಲೇ ಶಿಕ್ಷಕರ ಸಮಸ್ಯೆಗಳ ವಿಚಾರ ಕುರಿತಂತೆ ಒಮ್ಮೆ ಭೇಟಿಯಾಗಿರುವ ಆರ್ ನಾರಾಯಣಸ್ವಾಮಿ ನೇತ್ರತ್ವದಲ್ಲಿನ ಟೀಮ್ ಮತ್ತೊಮ್ಮೆ ಭೇಟಿಯಾಗಿ ಗಂಭೀರವಾಗಿ ಚರ್ಚೆ ಮಾಡಿ ಗಮನಕ್ಕೆ ತಗೆದ ಕೊಂಡು ಬಂದರು.
ಹೌದು.ಒಂದು ಕಡೆಗೆ ದಿನದಿಂದ ದಿನಕ್ಕೆ ರಾಜ್ಯದಲ್ಲಿ ಶಿಕ್ಷಕರ ವರ್ಗಾವಣೆ,ಭಡ್ತಿ ಸೇರಿದಂತೆ ಹಲವು ಸಮಸ್ಯೆಗಳು ಗಂಭೀರವಾಗುತ್ತಿರುವ ಹಿನ್ನಲೆಯಲ್ಲಿ ಈ ಒಂದು ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಶಿಕ್ಷಕರ ಧ್ವನಿಯಾಗಿ ಗ್ರಾಮೀಣ ಶಿಕ್ಷಕರ ಸಂಘದ ಹಿರಿಯರಾದ ಮಲ್ಲಿಕಾರ್ಜುನ ಉಪ್ಪಿನ,ಶರಣಬಸವ ಬನ್ನಿಗೊಳ,ಎಲ್ ಐ ಲಕ್ಕಮ್ಮನವರ.ಸಂಗಮೇಶ ಖನ್ನಿನಾಯ್ಕರ್,ಮಲ್ಲಿಕಾರ್ಜುನ ಚರಂತಿಮಠ, ಹನಮಂತಪ್ಪ ಮೇಟಿ,ಜಿ ಟಿ ಲಕ್ಷ್ಮೀದೇವಪಮ್ಮ, ಎಮ್ ವಿ ಕುಸುಮಾ,ಎಸ್ ಎಫ್ ಪಾಟೀಲ, ವಿಜಯಲಕ್ಷ್ಮೀ,ಎಮ್ ಡಿ ರಫೀಕ್,ಅಕ್ಬರಅಲಿ ಸೋಲಾಪೂರ, ಜಿ ಬಿ ಶೆಟ್ಟರ್,ಇವರ ಮಾರ್ಗದರ್ಶ ನದಲ್ಲಿ ಈ ಒಂದು ನಿಯೋಗ ಬೆಂಗಳೂರಿಗೆ ತೆರಳಿದ್ದಾರೆ.
ಬೆಳಿಗ್ಗೆ ಅಷ್ಟೇ ಭೇಟಿಯಾಗಿದ್ದ ನಿಯೋಗ ಮತ್ತೆ ವಿಧಾನ ಸೌಧ ದಲ್ಲಿ ಇಲಾಖೆಯ ಅಧಿಕಾರಿಗಳ ಭೇಟಿಯ ಮುನ್ನ ಮತ್ತೊಮ್ಮೆ ಭೇಟಿಯಾಗಿ ಸಮಸ್ಯೆ ಗಳನ್ನು ಗಮನಕ್ಕೆ ತಗೆದುಕೊಂಡು ಬಂದರು. ಇದರೊಂದಿಗೆ ಒಂದೇ ದಿನ ಎರಡನೇಯ ಬಾರಿಗೆ ಸರ್ಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಗಮನಕ್ಕೆ ತಗೆದುಕೊಂಡು ಬಂದರು.
ಸರ್ಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಆರ್. ನಾರಾಯಣಸ್ವಾಮಿ ಚಿಂತಾಮಣಿ ಅವರ ನೇತ್ರತ್ವದ ನಿಯೋಗ ಗ್ರಾಮೀಣ ಭತ್ಯೆ ನೀಡುವ ಬಗ್ಗೆ,ಖಾಲಿಯಿರುವ ಶಿಕ್ಷಕರ ಹುದ್ದೆ ಭರ್ತಿ ಮಾಡುವ ಬಗ್ಗೆ ಹಾಗೂ ಶಿಕ್ಷಕರ ವರ್ಗಾವಣೆ ಸಮಸ್ಯೆಯನ್ನು ಪರಿಹರಿಸುವುದು ಸೇರಿದಂತೆ ಮಕ್ಕಳಿಗೆ ಸಮವಸ್ತ್ರ ವಿತರಣೆ,OTS-ವರ್ಗಾವಣೆ, ಶಿಕ್ಷಕರ ನೇಮಕಾತಿ, C&R ತಿದ್ದುಪಡಿ, ವರ್ಗಾವಣೆ ಯಲ್ಲಿ ಆಗಬೇಕಾದ ಬದಲಾವಣೆಗಳ ಬಗ್ಗೆ ಮನವಿ ಮಾಡಿ ಶಿಕ್ಷಕರನ್ನು ಅವರ ಸ್ವಂತ ಜಿಲ್ಲೆಗೆ ಸೇವಾವಧಿ ಯಲ್ಲಿ ಒಮ್ಮೆ ವರ್ಗಾವಣೆ ಮಾಡಿ ಅನುಕೂಲ ಮಾಡಿಕೊಡಲು ವಿನಂತಿಸಿದರು.
ಇವರ ಬೇಡಿಕೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಮುಖ್ಯಮಂತ್ರಿಗಳು ಈ ಕುರಿತು ಚರ್ಚೆ ಮಾಡುವೆ ಎಂದರು.ಈ ಒಂದು ಸಂದರ್ಭದಲ್ಲಿ ಬೆಂಗಳೂರಿನ ನೆಲಮಂಗಲ ಮಲ್ಲಿಕಾರ್ಜುನ ಧಾರವಾಡ ಜಿಲ್ಲಾ ಅಧ್ಯಕ್ಷರು ಅಕ್ಬರಲಿ ಸೋಲಾಪುರ ಬೆಳಗಾವಿ ಜಿಲ್ಲಾ ಪ್ರದಾನ ಕಾರ್ಯದರ್ಶಿ ಸಂಗಮೇಶ ಖನ್ನಿನಾಯ್ಕರ ಸೇರಿದಂತೆ ರಾಜ್ಯ ಮಟ್ಟ, ಜಿಲ್ಲಾ ಮಟ್ಟ ಹಾಗೂ ತಾಲ್ಲೂಕು ಹಂತದ ಪ್ರಮುಖ ಪದಾಧಿಕಾರಿಗಳು ಉಪಸ್ಥಿತರಿದ್ದರು.