ಮುಂಬೈ –
ಮಹಾಮಾರಿ ಕೋವಿಡ್ ತೀವ್ರಗೊಂಡ ಹಿನ್ನಲೆ ಯಲ್ಲಿ ಮಹಾರಾಷ್ಟ್ರ ರಾಜ್ಯ ಸರ್ಕಾರ ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಒಳ್ಳೆಯ ನಿರ್ಧಾರವನ್ನು ಕೈಗೊಂಡಿತು. ಹೌದು ಕರೊನಾ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ಹತ್ತನೇ ತರಗತಿ ಪರೀಕ್ಷೆಗಳನ್ನು ರದ್ದು ಮಾಡಲು ನಿರ್ಧರಿಸಲಾಗಿದೆ ಎಂದು ಮುಖ್ಯ ಮಂತ್ರಿ ಉದ್ಧವ್ ಠಾಕ್ರೆ ಹೇಳಿದ್ದಾರೆ. ರಾಜ್ಯವನ್ನು ದ್ದೇಶಿಸಿ ಮಾತನಾಡಿದ ಅವರು ವಿದ್ಯಾರ್ಥಿಗಳ ಆರೋಗ್ಯದ ಹಿತದೃಷ್ಟಿಯಿಂದ ಹಾಗೂ ಕರೊನಾ ತಡೆಯಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಹೇಳಿದ್ದಾರೆ.
12 ನೇ ತರಗತಿಯ ಪರೀಕ್ಷೆಗಳನ್ನೂ ರದ್ದು ಮಾಡ ಬೇಕೆ ಬೇಡವೇ ಎಂಬುದರ ಬಗ್ಗೆ ನಾವು ಕೇಂದ್ರ ಸರ್ಕಾರದ ನಿರ್ಧಾರದತ್ತ ನೋಡುತ್ತಿದ್ದೇವೆ.12 ನೇ ತರಗತಿ ಮಹತ್ವದ್ದಾಗಿರುವುದರಿಂದ ಪರೀಕ್ಷೆ ವಿಷಯ ದಲ್ಲಿ ಕೇಂದ್ರ ಸರ್ಕಾರ ಎಲ್ಲ ರಾಜ್ಯಗಳಿಗೂ ಒಂದೇ ನಿಯಮ ಅನ್ವಯವಾಗುವಂತೆ ನಿರ್ಧಾರ ತೆಗೆದು ಕೊಂಡರೆ ಉತ್ತಮ ಎಂಬುದು ನಮ್ಮ ಅನಿಸಿಕೆಯಾ ಗಿದೆ ಎಂದಿದ್ದಾರೆ.
ಸೂಕ್ತ ಸಮಯದಲ್ಲಿ ಲಾಕ್ ಡೌನ್ ಜಾರಿ ಮಾಡಿದ್ದ ರಿಂದ ಕೋವಿಡ್ ಸೋಂಕು ವ್ಯಾಪಕವಾಗಿ ಪಸರಿಸು ವುದನ್ನು ತಡೆಗಟ್ಟಲು ಸಾಧ್ಯವಾಯಿತು.ಇದರಿಂದ ನಮ್ಮ ಹಳ್ಳಿ ಜಿಲ್ಲೆಗಳನ್ನು ರಕ್ಷಿಸಿಕೊಳ್ಳಲು ಅನುಕೂಲ ಆಯಿತು.ಇನ್ನೂ ಕರೊನಾ ಮೂರನೇ ಅಲೆಯನ್ನು ತಡೆಯುವ ನಿಟ್ಟಿನಲ್ಲಿ ತಜ್ಞರು ಹಾಗೂ ನುರಿತ ವೈದ್ಯ ರನ್ನೊಳಗೊಂಡ ಟಾಸ್ಕ್ಫೋರ್ಸ್ ರಚಿಸಲಾಗುವುದು ಎಂದು ಠಾಕ್ರೆ ಇದೇ ವೇಳೆ ತಿಳಿಸಿದರು.