ಧಾರವಾಡ –
ನಾಳೆ ವಿಕೇಂಡ್ ಕರ್ಫ್ಯೂ ಹಿನ್ನಲೆಯಲ್ಲಿ ಧಾರವಾಡ ಜಿಲ್ಲೆಯಲ್ಲಿನ ಶಿಕ್ಷಕರು ಬಸ್ ಸೌಲಭ್ಯಗಳಿದ್ದರೆ ಶಾಲೆ ಗಳಿಗೆ ಹೋಗಲಿ ಇಲ್ಲವಾದರೆ ಮನೆಯಲ್ಲಿಂದಲೇ ಕೆಲಸವನ್ನು ಮಾಡಲಿ ಎಂದು ಧಾರವಾಡ ಡಿಡಿಪಿಐ ಮೋಹನಕುಮಾರ ಹಂಚಾಟೆ ಹೇಳಿದರು.
ಸುದ್ದಿ ಸಂತೆ ಯೊಂದಿಗೆ ಮಾತನಾಡಿದ ಅವರು ರಾಜ್ಯ ಸರ್ಕಾರದ ಸೂಚನೆಯಂತೆ ಧಾರವಾಡ ಜಿಲ್ಲೆಯಲ್ಲೂ ಕೂಡಾ ವಿಕೇಂಡ್ ಕರ್ಫ್ಯೂ ವನ್ನು ಜಾರಿ ಮಾಡಲಾಗಿದೆ.ಜಿಲ್ಲಾಧಿಕಾರಿಗಳು ಜಿಲ್ಲೆಯಲ್ಲಿ ಕೂಡಾ ಇದನ್ನು ಜಾರಿಗೆ ಮಾಡಿದ್ದಾರೆ.ಹೀಗಾಗಿ ನಾಳೆ ಬಸ್ ಆರಂಭವಾಗುತ್ತವೆ ಎಂದು ಇಲಾಖೆಯವರು ಹೇಳಿದ್ದಾರೆ ಆದರೆ ಬಸ್ ಇದ್ದರೆ ನಮ್ಮ ಶಿಕ್ಷಕರು ಶಾಲೆಗಳಿಗೆ ಹೋಗಲಿ ಯಾವುದೇ ತೊಂದರೆಯನ್ನು ತಗೆದುಕೊಂಡು ಶಾಲೆಗಳಿಗೆ ಹೋಗೊದು ಬೇಡ ಬಸ್ ಸೌಲಭ್ಯಗಳಿದ್ದರೆ ಮಾತ್ರ ಶಾಲೆಗಳಿಗೆ ಹೋಗ ಬೇಕು ಇಲ್ಲವಾದರೆ ಮನೆಯಲ್ಲಿಯೇ ಕುಳಿತು ಕೊಂಡು ಶೈಕ್ಷಣಿಕ ಚಟುವಟಿಕೆಯ ಕೆಲಸ ಕಾರ್ಯಗ ಳನ್ನು ಶಿಕ್ಷಕರು ಮಾಡಬೇಕೆಂದು ಹೇಳಿದರು.
ಇನ್ನೂ ಇದರೊಂದಿಗೆ ಜಿಲ್ಲೆಯ ಶಿಕ್ಷಕರ ನೆರವಿಗೆ ಸಾರ್ವಜನಿಕರ ಶಿಕ್ಷಣ ಇಲಾಖೆಯ ಉಪ ನಿರ್ದೇ ಶಕ ಮೋಹನಕುಮಾರ ಹಂಚಾಟೆ ಮುಂದಾಗಿದ್ದು ಯಾವುದೇ ಕಾರಣಕ್ಕೂ ವಿಕೇಂಡ್ ಕರ್ಫ್ಯೂ ಹಿನ್ನಲೆ ಯಲ್ಲಿ ಶಿಕ್ಷಕರಿಗೆ ಸೂಚನೆ ನೀಡಿದ್ದಾರೆ.