ಬೆಳಗಾವಿ –
ಗಂಡನ ಕಣ್ತಪ್ಪಿಸಿ ತಡರಾತ್ರಿ ಮನೆಯಿಂದ ಹೊರಬಂದಾಕೆ ಎಲ್ಲಿ ಹೋದಳೆಂದು ಹಿಂಬಾಲಿಸಿದ ಕುಟುಂಬಸ್ಥರಿಗೆ ಕಾದಿತ್ತು ದೊಡ್ಡ ಶಾಕ್ ಹೌದು ಊರ ಹೊರವಲಯದ ಹೊಲದಲ್ಲಿ ಪ್ರಿಯಕರ ನೊಂದಿಗೆ ಸರಸ-ಸಲ್ಲಾಪದಲ್ಲಿ ತೊಡಗಿದ್ದ ಆಕೆ ಮತ್ತು ಆಕೆ ಪ್ರಿಯಕರನನ್ನು ರೆಡ್ ಹ್ಯಾಂಡ್ ಆಗಿ ಹಿಡಿದು ಟ್ರ್ಯಾಕ್ಟರ್ ಗೆ ಕಟ್ಟಿಹಾಕಿ ಬುದ್ಧಿ ಕಲಿಸಿದ್ದಾರೆ.

ಈ ಘಟನೆ ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಮುರಕಟನಾಳ ಗ್ರಾಮದಲ್ಲಿ ಶುಕ್ರವಾರ ರಾತ್ರಿ ಸಂವಿಸಿದೆ. ಚುಂಚನೂರ ಗ್ರಾಮದ ಭೀಮಸಿ ಜೆಟ್ಟೆನ್ನವರ್ ಮತ್ತು ಮುರಕಟನಾಳದ ಲಕ್ಷ್ಮೀ ಕೊಪ್ಪದ ಸಿಕ್ಕಿಬಿದ್ದ ಜೋಡಿಗಳಾಗಿದ್ದಾರೆ.ಲಕ್ಷ್ಮೀ ಗೆ ಬೇರೊಬ್ಬನ ಜೊತೆಗೆ ಮದುವೆ ಆಗಿದ್ದರೂ ಆಕೆಯೊಂದಿಗೆ ಭೀಮಸಿಗೆ ಅಕ್ರಮ ಸಂಬಂಧವನ್ನು ಇಟ್ಟುಕೊಂಡಿದ್ದನು

ನಿನ್ನೆ ತಡರಾತ್ರಿ ಮನೆಯವರ ಕಣ್ತಪ್ಪಿಸಿ ಹೊರ ಹೊದಾಕೆ ಮುರಕಟನಾಳ ಗ್ರಾಮ ಹೊರವಲಯದ ಹೊಲದಲ್ಲಿ ಪ್ರಿಯಕರನನ್ನು ಭೇಟಿ ಮಾಡಿದ್ದಳು.ನಂತರ ಸಲ್ಲಾಪ ಮಾಡುವಾಗ ಇಬ್ಬರು ಸಿಕ್ಕಿ ಬಿದ್ದಿದ್ದಾರೆ

ಅನುಮಾನಗೊಂಡು ಆಕೆಯ ಕುಟುಂಬಸ್ಥರು ಹಿಂಬಾಲಿಕೊಂಡು ಬಂದಿದ್ದರು. ಅನೈತಿಕ ಚಟುವಟಿಕೆ ನಡೆಸುತ್ತಿದ್ದಾಗಲೇ ಇಬ್ಬರನ್ನೂ ಹಿಡಿದು ಊರಿಗೆ ಕರೆತಂದರು. ಗ್ರಾಮಸ್ಥರು ಅವರಿಬ್ಬರನ್ನೂ ಸತತ ನಾಲ್ಕು ಗಂಟೆ ಕಾಲ ಟ್ಯಾಕ್ಟರ್ ಗೆ ಕಟ್ಟಿಹಾಕಿ ಬುದ್ಧಿ ಕಲಿಸಿದ್ದಾರೆ. ಇನ್ನೂ ಹೀಗೆ ಇಬ್ಬರನ್ನು ಟ್ಯಾಕ್ಟರ್ ಗೆ ಕಟ್ಟಿದ್ದ ದೃಶ್ಯ ವೈರಲ್ ಆಗಿದೆ.
