ಹುಬ್ಬಳ್ಳಿ –
ಹುಬ್ಬಳ್ಳಿಯ ನವನಗರ ಪೊಲೀಸ್ ಠಾಣೆ ಸಿಬ್ಬಂದ್ದಿ ತಮ್ಮ ಪ್ರತಿಭಟನೆಯನ್ನು ಹಿಂದೆ ಪಡೆದಿದ್ದಾರೆ. ಕಳೆದ ಎರಡು ದಿನಗಳ ಹಿಂದೆ ನ್ಯಾಯವಾದಿ ವಿನೋದ ಪಾಟೀಲ್ ಇನ್ನಿಬ್ಬರೊಂದಿಗೆ ಸೇರಿಕೊಂಡು ನವನಗರದ ಕರ್ನಾಟಕ ಸರ್ಕಲ್ ಬಳಿ ಯಾವುದೇ ಒಂದು ವಿಚಾರಕ್ಕೇ ಸಂಭಂಧಿಸಿದಂತೆ ರೌಡಿಶೀಟರ್ ಪ್ರವೀಣ ರಘುನಾಥ ಪೂಜಾರಿ , ಮಲ್ಲಯ್ಯ ಹಿರೇಮಠ ಹಾಗೂ ವಿನೋದ ಪಾಟೀಲ ಜೋರಾಗಿ ಹೊಡೆದಾಡುತ್ತಾ ಬೈದಾಡುತ್ತಾ ಗಲಾಟೆ ಮಾಡುತ್ತಿದ್ದರು. ಗಲಾಟೆ ಮಾಡಿಕೊಳ್ಳುತ್ತಿದ್ದಾರೆ ಎಂದು ಪೊನ್ ಕರೆ ಬರುತ್ತಿದ್ದಂತೆ ಮಾಹಿತಿ ತಿಳಿದ ನವನಗರ ಇನಸ್ಪೇಕ್ಟರ್ ಪ್ರಭು ಸೂರಿನ್ ತಮ್ಮ ಸಿಬ್ಬಂದ್ದಿಯೊಂದಿಗೆ ಸ್ಥಳಕ್ಕೇ ತೆರಳಿ ವಿಚಾರಣೆ ಮಾಡಿದಾಗ ಯಾಕೇ ವಿನಾಕಾರಣ ಗಲಾಟೆ ಮಾಡಿಕೊಳ್ಳುತ್ತಿದ್ದಿರಾ ಸ್ಥಳಧಿಂದ ಹೋಗಿ ಇಲ್ಲವೇ ಪೊಲೀಸ್ ಠಾಣೆಗೆ ಬಂದು ಮುಗಿಸಿಕೊಳ್ಳಿ ಎಂದು ಹೇಳಿದ್ದಾರೆ. ಒಂದಿಬ್ಬರು ಸ್ಥಳದಿಂದ ಹೋದರೆ ಇತ್ತ ನ್ಯಾಯವಾದಿ ವಿನೋದ್ ಪಾಟೀಲ್ ಹೊಗದೇ ನಾನು ಪೊಲೀಸ್ ಠಾಣೆ ಬರೊದಿಲ್ಲ ಇಲ್ಲಿಂದಲೂ ಹೊಗೊದಿಲ್ಲ ಎನ್ನುತ್ತಾ ಅವಾಚ್ಚ್ಯ ಶಬ್ದಗಳಿಂದ ಬೈದು ನಿಂದಿಸಿದ್ದಾರಂತೆ. ಪೊಲೀಸ್ ಅಧಿಕಾರಿಯ ಮತ್ತು ಸಿಬ್ಬಂದಿ ಮಾತನ್ನು ಕೇಳದ ನ್ಯಾಯವಾದಿ ವಿನೋದ ಪಾಟೀಲ ಮತ್ತು ಇನ್ನಿಬ್ಬರೊಂದಿಗೆ ಸೇರಿಕೊಂಡು ಪೊಲೀಸರೊಂದಿಗೆ ಮಾತಿನ ಚಕಮಕಿ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರಂತೆ. ಇದನ್ನು ಗಂಭೀರವಾಗಿ ತಗೆದುಕೊಂಡ ನವನಗರ ಇನಸ್ಪೇಕ್ಟರ್ ಪ್ರಭು ಸೂರಿನ್ ಮೂವರನ್ನು ಕರೆದುಕೊಂಡು ಹೋಗಿ ವೈಧ್ಯಕೀಯ ಪರೀಕ್ಷೆ ಮಾಡಿಸಿ ನ್ಯಾಯಾಂಗ ಬಂಧನಕ್ಕೇ ಒಪ್ಪಿಸಿದ್ದಾರೆ.ಇತ್ತ ನ್ಯಾಯವಾದಿಯ ಮೇಲೆ ಪೊಲೀಸರು ಹೀಗೆ ಮಾಡಿದ್ದಾರೆಂದು ಧಾರವಾಡದಲ್ಲಿ ವಕೀಲರ ಸಂಘದಿಂದ ಪ್ರತಿಭಟನೆ ಮಾಡಿ ಪೊಲೀಸರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲು ಸೋಮವಾರದವರಗೆ ಗಡುವನ್ನು ನೀಡಲಾಯಿತು.
ವಕೀಲರ ಬೆನ್ನಲ್ಲೇ ಸಿಡಿದೆದ್ದ ಪೊಲೀಸರು
ಹೌದು ನವನಗರ ಪೊಲೀಸರು ನ್ಯಾಯವಾದಿ ಮೇಲೆ ಹೀಗೆ ಮಾಡಿದ್ದಾರೆಂದು ಆರೋಪಿಸಿ ಧಾರವಾಡದಲ್ಲಿ ವಕೀಲರು ಪ್ರತಿಭಟನೆ ಮಾಡಿದರು.ಈ ಒಂದು ಸುದ್ದಿ ತಿಳಿದ ಅತ್ತ ನವನಗರದ ಎಪಿಎಮ್ ಸಿ ಪೊಲೀಸ್ ಠಾಣಾ ಸಿಬ್ಬಂದಿಗಳು ಠಾಣೆ ಮುಂದೆ ಪ್ರತಿಭಟನೆ ಮಾಡಿದರು. ಸಾಮೂಹಿಕವಾಗಿ 50 ಕ್ಕೂಹೆಚ್ಚು ಪೊಲೀಸ್ ಸಿಬ್ಬಂದಿಗಳು ಕೈಯಲ್ಲೊಂದು ನಮ್ಮನ್ನು ಈ ಒಂದು ಪೊಲೀಸ್ ಠಾಣೆಯಿಂದ ವರ್ಗಾವಣೆ ಮಾಡಿ ಎಂದು ಹಾಳೆಯ ಮೇಲೆ ಬರೆದುಕೊಂಡು ಮೌನ ಪ್ರತಿಭಟನೆ ಮಾಡಿದರು. ಠಾಣೆ ಮುಂದೆ ಸಾಮೂಹಿಕವಾಗಿ ನಿಂತುಕೊಂಡು ಹೋರಾಟಕ್ಕೇ ಮುಂದಾದರು. ಪೊಲೀಸರು ಬೀದಿಗೆ ಬಂದು ಹೋರಾಟ ಮಾಡುತ್ತಿರುವ ವಿಚಾರ ತಿಳಿದ ಕಾನೂನು ಮತ್ತು ಸುವ್ಯವಸ್ಥೆಯ ಡಿಸಿಪಿ ಕೆ ರಾಮರಾಜನ್ ನವನಗರ ಪೊಲೀಸ್ ಠಾಣೆ ಇನಸ್ಪೇಕ್ಟರ್ ಗೆ ದೂರವಾಗಿ ಕರೆ ಮಾಡಿ ಕಚೇರಿಗೆ ಬರಲು ಹೇಳಿದರು. ಕಚೇರಿಗೆ ಹೋಗಿ ಡಿಸಿಪಿಯವರೊಂದಿಗೆ ಇನಸ್ಪೇಕ್ಟರ್ ಪ್ರಭು ಸೂರಿನ್ ಮಾತುಕತೆ ಮಾಡಿದರು. ನಿಮ್ಮೊಂದಿಗೆ ನಾವು ಇದ್ದೇವಿ ನಾವೆಲ್ಲಾ ನಿಮಗೆ ಅನ್ಯಾಯ ಮಾಡೊದಿಲ್ಲ ಅಂತಾ ಹೇಳಿದರು. ಈ ಮಾತುಗಳನ್ನು ನಮ್ಮ ಸಿಬ್ಬಂದಿಗೆ ಹೇಳಿ ಎಂದು ಹೇಳಿ ಕಳಿಸಿದ್ರು.ಡಿಸಿಪಿ ಯವರು ನೀಡಿದ ಸಂದೇಶವನ್ನು ತಗೆದುಕೊಂಡು ಬಂದ ಇನಸ್ಪೇಕ್ಟರ್ ಪ್ರಭು ಸೂರಿನ್ ಠಾಣೆ ಮುಂದೆ ಹೋರಾಟ ಮಾಡುತ್ತಿದ್ದ ಸಿಬ್ಬಂದಿಗೆ ಹೇಳುತ್ತಿದ್ದಂತೆ ಅಸಮಾಧಾನಗೊಂಡಿದ್ದ ಪೊಲೀಸರ ಮೊಗದಲ್ಲಿ ನಗು ಮೂಡಿತು. ಪ್ರತಿಭಟನೆ ಮಾಡುತ್ತಿದ್ದ ಎಲ್ಲಾ ಪೊಲೀಸ್ ಸಿಬ್ಬಂದಿ ಗಳು ತಮ್ಮ ಹೋರಾಟವನ್ನು ಹಿಂದೆ ತಗೆದುಕೊಂಡಿದ್ದಾರೆ.ಇನ್ನೂ ಸೋಮವಾರದ ಗಡುವು ನೀಡಿದ್ದ ವಕೀಲರು ಮುಂದೇನು ಮಾಡ್ತಾರೆ ಎಂಬುದನ್ನು ಕಾದು ನೋಡುವ ಮುನ್ನವೇ ಬೇರೆ ಬೇರೆ ರೂಪ ಪಡೆದುಕೊಳ್ಳುವ ಮುನ್ನವೇ ಹಿರಿಯ ಅಧಿಕಾರಿಗಳು ಎಚ್ಚೇತ್ತುಕೊಂಡು ಇದಕ್ಕೇ ಬ್ರೇಕ್ ಹಾಕೊದು ಅವಶ್ಯಕವಿದೆ .