ಬೆಂಗಳೂರು –
ಪ್ರಾಥಮಿಕ ಹಂತದ ಶಾಲಾ ಆರಂಭ ವಿಚಾರ ಕುರಿತು ಇಂದು ಭವಿಷ್ಯ ನಿರ್ಧಾರವಾಗಲಿದೆ.ಹೌದು ಈ ಕುರಿತು ಮುಖ್ಯಮಂತ್ರಿ ನೇತ್ರತ್ವದಲ್ಲಿ ಮಹತ್ವದ ಸಭೆ ನಡೆಯಲಿದೆ.ಸರ್ಕಾರಕ್ಕೆ ಒಂದು ಕಡೆ ಶಾಲೆ ಓಪನ್ ಮಾಡುವುದು ದೊಡ್ಡ ತಲೆನೋವಾಗಿ ಪರಿಣಮಿಸಿದೆ.ಇತ್ತ ಖಾಸಗಿ ಶಾಲೆಗಳು ಮಾತ್ರ ಶಾಲೆ ಪ್ರಾರಂಭ ಮಾಡುವಂತೆ ಪಟ್ಟು ಹಿಡಿದಿವೆ.

ಸರ್ಕಾರ ಕೂಡ ಹಂತ ಹಂತವಾಗಿ ಶಾಲೆ ಆರಂಭ ಮಾಡುವುದಾಗಿ ಹೇಳಿದ್ದು ಹೀಗಾಗಿ ಇಂದು ಮಹತ್ವ ದ ಸಭೆ ನಡೆಯಲಿದೆ.ಈಗಾಗಲೇ ರಾಜ್ಯದಲ್ಲಿ 9 ರಿಂದ 12 ನೇ ತರಗತಿವರೆಗೂ ಶಾಲೆ ಓಪನ್ ಆಗಿದ್ದು ಇನ್ನುಳಿದ ತರಗತಿಗಳನ್ನ ಆರಂಭಿಸುವುದಕ್ಕೆ ಸರ್ಕಾರ ಈಗಾಗಲೇ ಚಿಂತನೆ ನಡೆಸಿದ್ದು ಇದೇ ವಿಷಯವಾಗಿ ಇಂದು ಸಭೆ ನಡೆಸಲಾಗುತ್ತದೆ. ಮುಖ್ಯಮಂತ್ರಿ ನೇತೃತ್ವದಲ್ಲಿ ಈ ಒಂದು ಸಭೆ ನಡೆಯಲಿದ್ದು ಆದಾದ ನಂತರ ಶಾಲೆ ಆರಂಭದ ಕುರಿತು ಅಂತಿಮ ನಿರ್ಧಾರ ಮುಖ್ಯಮಂತ್ರಿಗಳಿಂದ ಹೊರಬೀಳಲಿದೆ.