ಧಾರವಾಡ –
ಧಾರವಾಡ ಜಿಲ್ಲೆ ಲಾಕ್ ಡೌನ ನಿಂದಾಗಿ ಮುಕ್ತವಾಗಿ ದ್ದರೂ ಕೂಡಾ ಇನ್ನೂ ಸಂಪೂರ್ಣವಾಗಿ ತೆರವಾಗಿಲ್ಲ ಇನ್ನೂ ಈನಡುವೆ ಶುಕ್ರವಾರ ಸಂಜೆ 7 ಗಂಟೆಯಿಂದ ಸೋಮವಾರ ಬೆಳಿಗ್ಗೆ 5 ಗಂಟೆಯವರೆಗೆ ಧಾರವಾಡ ಜಿಲ್ಲೆಯಲ್ಲಿ ಸಂಪೂರ್ಣವಾಗಿ ವಿಕೇಂಡ್ ಕರ್ಫ್ಯೂ ಜಾರಿ ಮಾಡಲಾಗಿದೆ.ಜಿಲ್ಲಾಧಿಕಾರಿ ನಿತೀಶ್ ಪಾಟೀ ಲ್ ವಾರದ ಕರ್ಫ್ಯೂ ವನ್ನು ಜಾರಿ ಮಾಡಿ ಆದೇಶ ವನ್ನು ಮಾಡಿದ್ದಾರೆ.ಇನ್ನೂ ಈ ಒಂದು ವಿಕೇಂಡ್ ಕರ್ಫ್ಯೂ ನಲ್ಲಿ ಏನೇನಿರುತ್ತದೆ ಏನೇನಿರೊದಿಲ್ಲ ಕುರಿ ತಂತೆ ನೊಡೋದಾರೆ
ಏನೇನು ಇರುತ್ತದೆ
ತುರ್ತು ಕರ್ತವ್ಯಕ್ಕೆ ಕೆಲಸ ಮಾಡುವ ಸಿಬ್ಬಂದಿಗಳಿಗೆ ಮತ್ತು ನೌಕರರಿಗೆ ಸಂಚರಿಸಲು ಅನುಮತಿ
ತುರ್ತು ಕೈಗಾರಿಕೆಗಳ ಕಾರ್ಯಾರಂಭಕ್ಕೆ ಅವಕಾಶವನ್ನು ನೀಡಲಾಗಿದೆ ಹಾಗೇ ಇವುಗಳಲ್ಲಿ ಕಾರ್ಯವನ್ನು ಮಾಡುವ ಸಿಬ್ಬಂದಿಗಳು ಕಚೇರಿಯ ಐಡಿ ಕಾರ್ಡನ್ನು ಉಪಯೋಗಿಸಿಕೊಂಡು ಹೋಗಬಹುದು
ದೂರವಾಣಿ, ಅಂತರ್ ಜಾಲ ಸೇರಿದಂತೆ ತುರ್ತು ನಿರ್ವಹಣಾ ಕೆಲಸವನ್ನು ಮಾಡುವವರಿಗೆ ಅನುಮತಿ
ತುರ್ತು ನಿರ್ವಹಣೆಯಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವವರಿಗೆ ಸಂಚರಿಸಲು ಹಾಗೇ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಅನುಮತಿ
ಕಿರಾಣಿ,ಹಣ್ಣು ಹಂಪಲ,ತರಕಾರಿ,ಮೀನ ಮಾಂಸ ಡೈರಿ,ಹಾಲಿನ, ಕೇಂದ್ರಗಳು ಬೀದಿ ಬದಿಯ ವ್ಯಾಪಾರಿಗಳು,ಹಾಗೇ ಮಧ್ಯದ ಅಂಗಡಿ ಗಳು ಪಾರ್ಸಲ್, ಹೊಟೇಲ್ ಗಳಲ್ಲಿ ಪಾರ್ಸಲ್ ವ್ಯವಸ್ಥೆ
ಮಧ್ಯಾಹ್ನ 2 ಗಂಟೆ ವರೆಗೆ ಅವಕಾಶ. ರೇಲ್ವೆ ಮತ್ತು ವಿಮಾನ ಸಂಚಾರ ಪ್ರವಾಸಕ್ಕಾಗಿ ಅನುಮತಿ ಟ್ಯಾಕ್ಸಿ ಸೇರಿದಂತೆ ಬೇರೆ ವಾಹನಗಳಲ್ಲಿ ರೇಲ್ವೆ ಮತ್ತು ವಿಮಾನ ನಿಲ್ದಾಣಗಳಿಗೆ ಪ್ರಯಾಣಿಸಲು ಅವಕಾಶವನ್ನು ನೀಡಲಾಗಿದೆ.
ಎನೇನು ಇರೋದಿಲ್ಲ
ಇದನ್ನು ಹೊರತುಪಡಿಸಿ ಸಧ್ಯ ಇರುವ ಆದೇಶವನ್ನು ಮುಂದುವರೆಸಿದ್ದು ಯಾವುದೇ ಅನುಮತಿಯನ್ನು ಜಿಲ್ಲಾಧಿಕಾರಿಗಳು ನೀಡಿರುವುದಿಲ್ಲ.ಒಟ್ಟಾರೆ ನಾಳೆ ಮತ್ತು ನಾಡಿದ್ದು ಎರಡು ದಿನಗಳ ಕಾಲ ಜಿಲ್ಲೆಯಲ್ಲಿ ವಿಕೇಂಡ್ ಕರ್ಫ್ಯೂ ಜಾರಿಯಲ್ಲಿರುತ್ತದೆ ಅನಾವಶ್ಯಕವಾಗಿ ಹೊರಗಡೆ ತಿರುಗಾಡಬೇಡಿ ನಿಮ್ಮಆರೋಗ್ಯ ನಿಮ್ಮ ಕೈಯಲ್ಲಿ ಕಾಳಜಿ ಇರಲಿ ಭಯ ಬೇಡ