ರಾಮದುರ್ಗ –
ನದಿಯ ದಡದಲ್ಲಿ ಇಸ್ಪೀಟ್ ಆಡುವಾಗ ಪೊಲೀಸರ ದಾಳಿಯಿಂದ ತಪ್ಪಿಸಿಕೊಳ್ಳಲು ಹೋಗಿ ಇಬ್ಬರು ನದಿಯಲ್ಲಿ ಹಾರಿ ಪ್ರಾಣ ಕಳೆದುಕೊಂಡ ಘಟನೆ ರಾಮದುರ್ಗ ದಲ್ಲಿ ನಡೆದಿದೆ.ನದಿಯ ಪಕ್ಕದ ಪೊದೆಯ ಬಳಿ ಗುಂಪೊಂದು ಜೂಜಾಡುತ್ತಿತ್ತು. ಪೊಲೀಸರು ಬಂದಿದ್ದರಿಂದ ಅವರು ಚದುರಿದ್ದಾರೆ. ಈ ವೇಳೆ ಆರು ಜನ ನದಿಗೆ ಹಾರಿದ್ದಾರೆ. ಅವರಲ್ಲಿ ನಾಲ್ವರು ಪಾರಾಗಿ ಇಬ್ಬರು ನದಿಯಲ್ಲಿ ಮುಳಗಿದ್ದಾರೆ.ಘಟನೆಯಲ್ಲಿ ಮಂಜುನಾಥ ಲಕ್ಷ್ಮಣ ಬಂಡಿವಡ್ಡರ (28) ಹಾಗೂ ಸಮೀರ ಮಹಮದಸಾಬ ಬಟಕುರ್ಕಿ (23) ನದಿಯಲ್ಲಿ ಮುಳುಗಿದ್ದಾರೆ.

ಇನ್ನೂ ನೀರಿನಲ್ಲಿ ಮುಳುಗಿದವರ ಪತ್ತೆಗಾಗಿ ಕಾರ್ಯಾಚರಣೆಯನ್ನು ಪೊಲೀಸರು ಆರಂಭಿಸಿದರು ಅಗ್ನಿಶಾಮಕ ದಳ, ಈಜು ತಜ್ಞರು ಹಾಗೂ SDRF ತಂಡಗಳ ಕಾರ್ಯಾಚರಣೆ ನಡೆಸಿ ಕೊನೆಗೆ ಮೃತ ದೇಹಗಳನ್ನು ಹೊರ ತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಇನ್ನೂ ಇಬ್ಬರು ನೀರಿನಲ್ಲಿ ಮುಳುಗುತ್ತಿದ್ದ ಸಂದರ್ಭದಲ್ಲಿ ಪೊಲೀಸರು ರಕ್ಷಣೆಗೆ ಮುಂದಾಗಲಿಲ್ಲ ಎಂದು ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದರು. ಶೋಧ ಕಾರ್ಯಾಚರಣೆ ವಿಳಂಬವಾಗಿದ್ದಕ್ಕೆ ಕುಟುಂಬದವರು ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.ಏನೇ ಆಗಲಿ ಜೂಜಾಟದಲ್ಲಿ ತೊಡಗಿದ್ದ ಸಮಯದಲ್ಲಿ ಪೊಲೀಸರು ಬಂದರು ಅಂತಾ ಹೀಗೆ ಮಾಡೊದಾ
