ಧಾರವಾಡ –
ಧಾರವಾಡ ಜಿಲ್ಲೆಯ ಕುಂದಗೋಳ ವಿಧಾನ ಸಭಾ ಕ್ಷೇತ್ರದ ಸಧ್ಯದ ಶಾಸಕರು ಕಾಂಗ್ರೆಸ್ ಪಕ್ಷದ ಕುಸುಮಾವತಿ ಶಿವಳ್ಳಿ ಅವರು ಇದ್ದಾರೆ. ಇದು ಎಲ್ಲರಿಗೂ ತಿಳಿದ ಗೊತ್ತಿರುವ ವಿಚಾರ ಆದರೆ ಈ ಹಿಂದೆ ಜೆಡಿಎಸ್ ಪಕ್ಷದಿಂದ ಶಾಸಕರಾಗಿದ್ದ ಎಮ್ ಎಸ್ ಅಕ್ಕಿ ಯವರು ಈಗಲೂ ಶಾಸಕರಂತೆ. ಕುಂದಗೋಳ ವಿಧಾನ ಸಭಾ ಕ್ಷೇತ್ರದಲ್ಲಿ ಈಗಲೂ ಅವರೇ ಶಾಸಕರು ಅಂತೆ ಇದನ್ನು ಅವರೇ ಮೂರು ಸಾವಿರ ಮಠದ ವಿಚಾರದಲ್ಲಿ ಅವರ ಲೇಟರ್ ಹೇಡ್ ನಲ್ಲಿ ಬರೆದ ಪತ್ರ ವೈರಲ್ ಆಗಿದೆ.

ಹುಬ್ಬಳ್ಳಿಯ ಮೂರು ಸಾವಿರ ಮಠದ ವಿಚಾರದಲ್ಲಿ ಮಾಜಿ ಶಾಸಕರು ಮಠದ ಆಸ್ತಿಯನ್ನು ಮರಳಿಸುವಂತೆ ಒತ್ತಾಯವನ್ನು ಮಾಡಿದ್ದಾರೆ. ಆದರೆ ಈ ಹಿಂದೆ ಶಾಸಕರಾಗಿದ್ದ ಸಮಯದಲ್ಲಿ ಇದ್ದ ಲೇಟರ್ ನಲ್ಲಿ ಬರೆದಿದ್ದು ಇದರಲ್ಲಿ ಶಾಸಕರು ಕುಂದಗೋಳ ಅಂತಾ ಇದೆ ಹೀಗಾಗಿ ಈ ಒಂದು ಪತ್ರ ಕುಂದಗೋಳದಲ್ಲಿ ಸಾಕಷ್ಟು ಪ್ರಮಾಣದಲ್ಲಿ ವೈರಲ್ ಆಗಿದೆ.

ಪತ್ತಿಕಾ ಪ್ರಕಟಣೆ ಗಾಗಿ ಈ ಒಂದು ಪತ್ರವನ್ನು ಬರೆದಿದ್ದು ಇದರಲ್ಲಿ ಇನ್ನೂ ಇವರೇ ಕುಂದಗೋಳ ವಿಧಾನ ಸಭಾ ಕ್ಷೇತ್ರದ ಶಾಸಕರು ಎಂದು ಉಲ್ಲೇಖ ಇದೆ ಹೀಗಾಗಿ ಕ್ಷೇತ್ರದಲ್ಲಿ ಯಾರು ಶಾಸಕರು ಎಂದು ಎಲ್ಲವೂ ಸಾಮಾಜಿಕ ಜಾಲ ತಾಣಗಳಲ್ಲಿ ಪ್ರಶ್ನಿಸುತ್ತಿದ್ದಾರೆ.

ಏನೇ ಆಗಲಿ ಶಾಸಕರಾಗಿ ಈಗ ಮಾಜಿ ಯಾಗಿರುವ ಇವರು ಈಗಲೂ ಯಾರಿಗಾದರೂ ಪತ್ರ ಬರೆದರು ಶಾಸಕರು ಕುಂದಗೋಳ ಅಂತಾ ಲೇಟರ್ ಕೊಡೊದು ಸರಿನಾ ಇದಕ್ಕೆ ಅವರೇ ಉತ್ತರಿಸಬೇಕು.