ಹುಬ್ಬಳ್ಳಿ ಧಾರವಾಡ
ಕೇಂದ್ರ ಸರ್ಕಾರದ ಕೃಷಿ ಕಾಯ್ದೆ ವಿರೋಧಿಸಿ ಕರೆ ನೀಡಿರುವ ಭಾರತ್ ಬಂದ್ ಗೆ ಹುಬ್ಬಳ್ಳಿ ಧಾರವಾಡದಲ್ಲಿ ಬೆಂಬಲ ವ್ಯಕ್ತವಾಗಿದೆ.
ಬಂದ್ ಗೆ ಬೆಂಬಲಿಸಿ ಅವಳಿ ನಗರದಲ್ಲಿ ಹಲವು ಸಂಘಟನೆಗಳು ಪ್ರತಿಭಟನೆಯನ್ನು ಮಾಡಿದ್ರು.ಅಖಿಲ ಭಾರತ ರೈತ ಸಂಘರ್ಷ ಸಮನ್ವಯ ಸಮಿತಿಯ ಮುಖಂಡರು ಪ್ರತಿಭಟನೆ ಮಾಡಿದ್ರು.
ಪ್ರತಿಭಟನಾ ಮೆರವಣಿಗೆಯೊಂದಿಗೆ ಜುಬಲಿ ವೃತ್ತಕ್ಕೇ ಆಗಮಿಸಿದ ಹೋರಾಟಗಾರರು ಬಸ್‌ಗಳನ್ನು ತಡೆದು ಪ್ರತಿಭಟನೆ ಮಾಡಿದ್ರು.
ಧಾರವಾಡ ಜ್ಯುಬಿಲಿ ಸರ್ಕಲ್‌ನಲ್ಲಿ ಬಸ್‌ಗಳನ್ನು ತಡೆದ ಹೋರಾಟಗಾರರು ನಗರ ಸಾರಿಗೆ, ಬಿ.ಆರ್.ಟಿ.ಎಸ್. ಬಸ್.ಗಳಿಗೆ ತಡೆದು ವಾಪಸ್ ಕಳುಹಿಸಿದರು. ಇನ್ನೂ ಇತ್ತ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲೂ ಭಾರತ ಬಂದ್ ಗೆ ವ್ಯಾಪಕ ಬೆಂಬಲ ಸಿಕ್ಕಿದೆ. ಬಂದ್ ಬೆಂಬಲಿಸಿ ನಗರದಲ್ಲೂ ಕೂಡಾ ಹಲವಾರು ಸಂಘಟನೆಗಳು ಪ್ರತಿಭಟೆಯನ್ನು ಮಾಡಿದ್ರು.
25ಕ್ಕೂ ಹೆಚ್ಚು ಸಂಘಟನೆಗಳಿಂದ ಬಂದ್ ಗೆ ಬೆಂಬಲ ಸಿಕ್ಕಿದೆ..ಮಹದಾಯಿ, ಕಳಸಾ ಬಂಡೂರಿ ಹೋರಾಟ ಸಮನ್ವಯ ಸಮಿತಿ, ಹುಬ್ಬಳ್ಳಿ ನಾಗರಿಕ ಹೋರಾಟ ಸಮಿತಿ, ಸಿಐಟಿಯು, ಸಿಪಿಐ(ಎಂ), ಎಐಟಿಯುಸಿ, ಕೆಪಿಆರ್ ಎಸ್, ಅಟೋ, ಬೀದಿಬದಿ ವ್ಯಾಪಾರಿಗಳ, ದಲಿತ ಹಾಗೂ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಹೋರಾಟ.ರೈತ ಸಂಘಟನೆಗಳಿಗೆ ಕನ್ನಡ ಪರ ಸಂಘಟನೆಗಳ ಸೇರಿದಂತೆ ಹಲವಾರು ಸಂಘಟನೆಗಳು ಬೆಂಬಲ ನೀಡಿದ್ದು ಪ್ರತಿಭಟನೆ ಮಾಡಿದ್ರು.
ಬೆಳ್ಳಂ ಬೆಳಿಗ್ಗೆ ಸಂಚಾರ ಮಾಡುತ್ತಿದ್ದ NWKSRTC ಸಂಚಾರವನ್ನು ತಡೆಯುವ ನಿಟ್ಟಿನಲ್ಲಿ ಪ್ರಯತ್ನ ಮಾಡಿದ್ರು. ಭಾರತ ಬಂದ್ ಹಿನ್ನೆಲೆ.ರಸ್ತೆಗಿಳಿದು ಪ್ರತಿಭಟನೆ ಮಾಡ್ತಿರುವ ಹೋರಾಟಗಾರರು ಹುಬ್ಬಳ್ಳಿಯ ಚನ್ನಮ್ಮ ವೃತ್ತದಲ್ಲಿ ಹುಲ್ಲಿಗೆ ಬೆಂಕಿ ಹಚ್ಚಿ ಆಕ್ರೋಶವನ್ನು ವ್ಯಕ್ತಪಿಡಿಸಿದರು.
ಕನ್ನಡ ಪರ ವಿವಿಧ ಸಂಘಟನೆಗಳು ಆಟೋ ಚಾಲಕರ ಮತ್ತು ಮಾಲೀಕರ ಸಂಘದಿಂದ ಪ್ರತಿಭಟನೆ ಮಾಡಲಾಯಿತು.
ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶವನ್ನು ವ್ಯಕ್ತಪಡಿಸಿದ್ರು. ಭಾರತ ಬಂದ್ ಹಿನ್ನೆಲೆ.ಎಂದಿನಂತೆ ಓಡಾಡುತ್ತಿದ್ದ NWKSRTC ಬಸ್.ಸಂಚಾರ ತಡೆಯಲು ಯತ್ನಿಸಿದ ಕನ್ನಡ ಪರ ಸಂಘಟನೆ ಕಾರ್ಯಕರ್ತರು.ಬಸ್ ಎದುರು ಕುಳಿತರು.
ಹೋರಾಟಗಾರನನ್ನು ಹಿಂದೆ ಸರಿಸಿದ ಪೊಲೀಸರು.ಕೃಷಿ ಕಾಯ್ದೆ ವಿರೋಧಿಸಿದರು. ರೈತ ಸಂಘಟನೆಗಳಿಂದಲೂ ಕೂಡಾ ಬಂದ್ ಗೆ ಬೆಂಬಲ ಕಂಡು ಬಂದಿತು. ಹೊಸೂರು ಬಸ್ ಡಿಪೋ ಎದುರು ರೈತರ ಸಂಘಟನೆಗಳಿಂದ ಪ್ರತಿಭಟನೆ ಮಾಡಲಾಯಿತು. ಸಾರಿಗೆ ಬಸ್ ಗಳನ್ನ ತಡೆದು ಮತ್ತೆ ಬಸ್ ಗಳನ್ನ ಡಿಪೋಗೆ ಕಳುಹಿಸಿದ ರೈತರು ರೈತರಿಗೆ ವಿವಿಧ ಕನ್ನಡಪರ ಸಂಘಟನೆಗಳು ಮತ್ತು ದಲಿತ ಸಂಘಟನೆಗಳು ಪ್ರತಿಭಟನೆಯಲ್ಲಿ ಭಾಗಿಯಾಗಿ ಕೇಂದ್ರ ಸರ್ಕಾರದ ವಿರುದ್ಧ ದಿಕ್ಕಾರ ಕೂಗಿ ಆಕ್ರೋಶವನ್ನು ವ್ಯಕ್ತಪಡಿಸಿದರು.
ಅಲ್ಲದೇ ಹೊಸೂರು ಡಿಪೋದಿಂದ ಬಸ್ ಗಳು ಸಂಚಾರ ಮಾಡದಂತೆ ಪ್ರತಿಭಟನೆ ಮಾಡಿದರು.ಇನ್ನೂ ಬಸ್ ಹಾಗೂ ವಾಹನಸಂಚಾರ ತಡೆದು ಪ್ರತಿಭಟನೆ ಮಾಡಿ ಹೊಸೂರು ಬಸ್ ನಿಲ್ದಾಣದ ಎದುರು ಬಸ್ ತಡೆದು ಹೋರಾಟ ಮುಂದುವರೆಸಿದ ಪ್ರತಿಭಟನಾಕಾರರು ಬಸ್ ಎದುರು ಕುಳಿತು ಬಸ್ ಸಂಚಾರ ತಡೆದು ಬಿಆರ್ ಡಿಎಸ್ ಟ್ರ್ಯಾಕ್ ಮೇಲೆ ಆಗಮಿಸುತ್ತಿದ್ದ ಬಸ್ ಹಾಗೂ ವಾಹನಗಳನ್ನು ನಿಲ್ಲಿಸಿದರು.
ಕೃಷಿ ಮಸೂದೆ ವಿರೋಧಿಸಿದರು. ಇನ್ನೂ ಬಂದ್ ಗೆ ಕರೆ ನೀಡಿದ್ರು ಬಸ್ ಸಂಚಾರ ಕಂಡು ಬಂದ ಹಿನ್ನಲೆಯಲ್ಲಿ ಆಕ್ರೋಶಗೊಂಡ ಹೋರಾಟಗಾರರು.ಮುಂಜಾಗ್ರತ ಕ್ರಮವಾಗಿ ಬಸ್ ಗಳನ್ನು ಪೊಲೀಸರು ವಾಪಸ್ ಕಳುಹಿಸಿದರು.
ಒಟ್ಟಾರೆ ಕೇಂದ್ರ ಸರ್ಕಾರದ ಕೃಷಿ ಕಾಯ್ದೆ ವಿರೋಧಿಸಿ ಕರೆ ನೀಡಿರುವ ಭಾರತ್ ಬಂದ್ ಗೆ ಅವಳಿ ನಗರದಲ್ಲಿ ವ್ಯಾಪಕ ಬೆಂಬಲ ಕಂಡು ಬಂದಿದ್ದು ಹಲವು ಸಂಘಟನೆಗಳ ಮುಖಂಡರು ಕಾರ್ಯಕರ್ತರು ರೈತರು ಹೋರಾಟಗಾರರು ಬೀದಿಗಿಳಿದು ಹೋರಾಟವನ್ನು ಮಾಡ್ತಾ ಇದ್ದಾರೆ. ಇನ್ನೂ ಇತ್ತ ಬಂದ್ ಹಿನ್ನಲೆಯಲ್ಲಿ ಅವಳಿ ನಗರದಲ್ಲಿ ವ್ಯಾಪಕ ಪೊಲೀಸ್ ಭದ್ರತೆಯನ್ನು ಮಾಡಲಾಗಿದೆ.